ಮಾರಿಮುತ್ತು ಎನ್ನುವ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ. ಮಾರಿಮುತ್ತು ಎನ್ನುವ ಹೆಸರನ್ನು ಕೇಳಿದರೆ ಸಾಕು ಎಲ್ಲರಿಗೂ ಒಂದು ನಡುಕ ಶುರುವಾಗುತ್ತಿತ್ತು. ಹೌದು ಮಾರಿಮುತ್ತು ಅವರು ನೋಡುವುದಕ್ಕೂ ಕೂಡ ಹಾಗೆಯೇ ಇದ್ದರು. ಇನ್ನು ಮಾರಿಮುತ್ತು ಅವರ ನಿಜವಾದ ಹೆಸರು ಸರೋಜಮ್ಮ ಎಂದು. ಇವರು ಲೇಡಿ ವಿಲನ್ ಆಗಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಇನ್ನೂ ಇವರನ್ನು ಯಾರಾದರೂ ಚಿಕ್ಕಮಕ್ಕಳು ನೋಡಿದರೆ ಹೆದರುವುದಂತೂ ಖಂಡಿತ. ಇನ್ನೂ ಸರೋಜಮ್ಮ ಅವರಿಗೆ ಉಪೇಂದ್ರ ಅವರು ನಟಿಸಿರುವ ಉಪೇಂದ್ರ ಚಿತ್ರದಲ್ಲಿ ಲೇಡಿ ಖಳನಾಯಕರಾಗಿ ನಟಿಸಿದ್ದಕ್ಕೆ ಇವರಿಗೆ ಮಾರಿಮುತ್ತು ಹೆಸರು ಬಂದಿತು. ಇನ್ನೂ ಇದಲ್ಲದೆ ರೌಡಿ ಅಳಿಯ, ಆವೇಶ, ಕೋತಿಗಳು ಸಾರ್ ಕೋತಿಗಳು ಇನ್ನೂ ಸಾಕಷ್ಟು ಚಿತ್ರಗಳಲ್ಲಿ ಮಾರಿಮುತ್ತು ಅವರು ಅಭಿನಯ ಮಾಡಿದ್ದಾರೆ.
ಆದ್ರೆ ದುರದೃಷ್ಟವಶಾತ್ ಮಾರಿಮುತ್ತು ಅವರು 2016 ರಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದರು. ಇನ್ನೂ ಇವರ ಮೊಮ್ಮಗಳು ಜಯಶ್ರೀ ಆರಾಧ್ಯ ಅವರ ಬಗ್ಗೆ ಎಲ್ಲರಿಗೂ ಗೊತ್ತೇ ಇರುತ್ತದೆ. ಇವರು ಏಪ್ರಿಲ್ 9 1999 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇನ್ನೂ ಜಯಶ್ರೀ ಅವರು ಬೆಂಗಳೂರಿನ ಕೆ.ಎಲ್.ಇ ಸೊಸೈಟಿ ನಿಜಲಿಂಗಪ್ಪ ಕಾಲೇಜಿನಲ್ಲಿ ತಮ್ಮ ಪದವಿಯನ್ನು ಮಾಡಿ ಮುಗಿಸಿದ್ದಾರೆ.
ಇನ್ನೂ ಜಯಶ್ರೀ ಅವರು ಸ್ಟೀವನ್ ಲೋಬೊ ಅವರ ಜೊತೆ ರಿಲೇಶನ್ ಶಿಪ್ ನಲ್ಲಿ ಕೂಡ ಇದ್ದಾರೆ. ಇನ್ನೂ ಮುಂದಿನ ವರ್ಷಗಳಲ್ಲಿ ಇವರಿಬ್ಬರು ಮದುವೆಯಾಗಲಿದ್ದಾರೆ ಎನ್ನುವ ಸಿಹಿ ಸುದ್ದಿಯನ್ನು ಕೂಡ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಹಾಗೆಯೇ ಸಿನಿಮಾ ವಿಷಯಕ್ಕೆ ಬಂದರೆ ಜಯಶ್ರೀ ಆರಾಧ್ಯ ಅವರು 2018ರ ಲ್ಲಿ ಬಿಡುಗಡೆಯಾದ ಪುಟ್ಟರಾಜು ಲವರ್ ಆಫ್ ಶಶಿಕಲಾ ಎನ್ನುವ ಸಿನಿಮಾದಲ್ಲಿ ಅಭಿನಯ ಮಾಡಿದ್ದಾರೆ.
ಇದಾದ ಮೇಲೆ ಧರಣಿ ಮಂಡಲ ಮಧ್ಯದೊಳಗೆ ಎನ್ನುವ ಚಿತ್ರದಲ್ಲೂ ಕೂಡ ಅಭಿನಯಿಸಿದ್ದಾರೆ. ಜಯಶ್ರೀ ಆರಾಧ್ಯ ಅವರು ನಟನೆಯ ಜೊತೆಗೆ ಈಗ ಬೆಂಗಳೂರಿನಲ್ಲಿ ತಮ್ಮದೇ ಆದ ಒಂದು ಸ್ವಂತ ಸಲೂನ್ ಅನ್ನು ತೆರೆದಿದ್ದಾರೆ. ಹೌದು ತಮ್ಮ ಸಲೂನಿಗೆ ದೀ ಗ್ಲಾಮ್ ರೋಮ್ ಎನ್ನುವ ಹೆಸರನ್ನು ಇಟ್ಟು ಹೊಸತಾಗಿ ಬಿಸಿನೆಸ್ ಅನ್ನು ಶುರು ಮಾಡಿದ್ದಾರೆ. ಜಯಶ್ರೀ ಅವರು ಶುರುಮಾಡಿದ ಹೊಸ ಸಲೂನ್ ಹೇಗಿದೆ ಎಂದು ಈ ವೀಡಿಯೋದಲ್ಲಿ ನೋಡಬಹುದು…..