ಹಾಸ್ಯ ನಟ ಶರಣ್ ಅವರು ಫೆಬ್ರವರಿ 6 1972 ರಂದು ಹಾಸನದಲ್ಲಿ ಜನಿಸಿದರು. ಈಗ ಇವರಿಗೆ 50 ವರ್ಷಗಳಾಗಿವೆ. ಇವರ ತಂದೆಯ ಹೆಸರು ಜೆ ವಿ ಕೃಷ್ಣಾ ಮತ್ತು ತಾಯಿಯ ಹೆಸರು ರಾಧಾಕೃಷ್ಣ. ಇನ್ನು ಶರಣ್ ಅವರಿಗೆ ಖ್ಯಾತ ನಟಿ ಶ್ರುತಿ ಅವರು ಸಹೋದರಿ ಆಗಬೇಕು. ಶರಣ್ ಅವರು ಮೊದಲು ಸಿನಿಮಾಗಳಲ್ಲಿ ಸಾಕಷ್ಟು ಹಾಸ್ಯದ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇದಾದ ಮೇಲೆ ತಮ್ಮ 101ನೆಯ ಚಿತ್ರ ಆಗಿರುವ ರಾಂಬೋ ಸಿನಿಮಾದ ಮೂಲಕ ತೆರೆಯ ಮೇಲೆ ಹೀರೋ ಆಗಿ ಎಂಟ್ರಿ ನೀಡಿದರು. ಇವರು 100 ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ನಟಿಸಿ ತುಂಬಾನೇ ಜನಪ್ರಿಯರಾಗಿದ್ದಾರೆ. ಶರಣ್ ಅವರು 1996 ರಲ್ಲಿ ಪ್ರೇಮ ಪ್ರೇಮ ಪ್ರೇಮ ಚಿತ್ರದ ಮೂಲಕ ತಮ್ಮ ಸಿನಿಮಾ ಪಯಣವನ್ನು ಶುರುಮಾಡಿಕೊಂಡರು. ಇನ್ನು ತಮ್ಮ ರಾಂಬೋ ಚಿತ್ರಕ್ಕೆ ಸ್ವತಃ ನಿರ್ಮಾಣ ಸಹ ಮಾಡಿದ್ದಾರೆ.
ಇದಾದ ಮೇಲೂ ಕೂಡ ಇವರು ಸಾಕಷ್ಟು ಹಾಸ್ಯದ ಪಾತ್ರಗಳಲ್ಲಿ ನಟಿಸಿ ಹೀರೋ ಪಾತ್ರದಲ್ಲೂ ಕೂಡ ಅಭಿನಯಿಸಿದ್ದಾರೆ. ರಾಂಬೋ ಚಿತ್ರದಲ್ಲಿ ನಟಿಸಿದ ಮೇಲೆ ಶರಣ್ ಅವರು ಈ ಭೂಮಿ ಆ ಭಾನು, ವರದನಾಯಕ, ನೀನಂದ್ರೆ ಇಷ್ಟ ಕಣೋ, ಬುಲ್ ಬುಲ್, ವಿಕ್ಟರಿ, ಜೈಲಲಿತ, ಮಾಣಿಕ್ಯ, ಅಧ್ಯಕ್ಷ, ರಾಜರಾಜೇಂದ್ರ, ಬುಲೆಟ್ ಬಸ್ಯಾ, ಜೈ ಮಾರುತಿ 800, ನಟರಾಜ ಸರ್ವಿಸ್, ರಾಜ್ ವಿಷ್ಣು, ಸತ್ಯ ಹರಿಶ್ಚಂದ್ರ, ರಾಂಬೊ 2, ವಿಕ್ಟರಿ 2, ಅಧ್ಯಕ್ಷ ಇನ್ ಅಮೆರಿಕ, ಅವತಾರಪುರುಷ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಶರಣ್ ಅವರು ಕೇವಲ ನಟ ಮಾತ್ರ ಅಲ್ಲ ಇನ್ನೂ ಇವರು ಕೆಲ ಸಿನಿಮಾಗಳ ಹಾಡುಗಳನ್ನು ಸಹ ಹಾಡಿದ್ದಾರೆ. ಹೌದು ಮಧ್ಯಾಹ್ನ ಕನಸಿನಲ್ಲಿ, ತೂಕತ ಗಡಬಡ, ಕಾಲ್ಕೇಜಿ ಕಳ್ಳೆ ಕಾಯಿ, ಹಾಲು ಕುಡಿದ ಮಕ್ಕಳೇ ಎನ್ನುವ ಹಾಡುಗಳನ್ನು ಹಾಡಿದ್ದಾರೆ. ಹಾಗೆಯೇ ಶರಣ್ ಅವರು ಪಲ್ಲವಿ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ.
ಇವರಿಗೆ ಹೃದಯ್ ಎನ್ನುವ ಮಗ ಕೂಡ ಇದ್ದಾರೆ. ಇಲ್ಲಿ ನಟ ಶರಣ್ ಅವರ ಮನೆಯ ಕೆಲ ದೃಶ್ಯಗಳನ್ನು ನೋಡಬಹುದು. ಶರಣ್ ಅವರ ಮನೆ ನೋಡುವುದಕ್ಕೆ ತುಂಬಾ ಸುಂದರವಾಗಿದೆ ಎಂದು ಹೇಳಬಹುದು……