ದಕ್ಷಿಣ ಭಾರತದ ಆಕ್ಷನ್ ಕಿಂಗ್ ಎಂದೇ ಗುರುತಿಸಿಕೊಂಡಿರುವ ಅರ್ಜುನ್ ಸರ್ಜಾ ಅವರು ತಮ್ಮ ಎರಡನೆಯ ಮಗಳಾಗಿರುವ ಅಂಜನಾ ಸರ್ಜಾ ಅವರಿಗೆ ತಮ್ಮ ಹುಟ್ಟುಹಬ್ಬದ ದಿನದಂದು ಸಪ್ರೈಸ್ ಪಾರ್ಟಿಯನ್ನು ನೀಡಿದ್ದಾರೆ. ಹೌದು ತಮ್ಮ ಮಗಳಿಗೆ ಮನೆಯಲ್ಲೇ ಹುಟ್ಟುಹಬ್ಬಕ್ಕೆ ತಯಾರಿಕೆಗಳನ್ನು ಮಾಡಿದ್ದರು. ಇನ್ನೂ ಈ ಸಪ್ರೈ ಸ್ ಅನ್ನು ನೋಡಿದ ತಮ್ಮ ಎರಡನೆಯ ಮಗಳು ಅಂಜನಾ ಅವರ ರಿಯಾಕ್ಷನ್ ಹೇಗಿತ್ತು ಎನ್ನುವುದನ್ನು ಈ ವಿಡಿಯೋದಲ್ಲಿ ನೋಡಬಹುದು.
ಇನ್ನು ಅರ್ಜುನ್ ಸರ್ಜಾ ಅವರ ಎರಡನೇ ಮಗಳ ಹುಟ್ಟು ಹಬ್ಬದ ಪ್ರಯುಕ್ತವಾಗಿ ಸೋಷಿಯಲ್ ಮೀಡಿಯಾ ಮುಖಾಂತರ ಅರ್ಜುನ್ ಸರ್ಜಾ ಅವರ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಇನ್ನು ಅರ್ಜುನ್ ಸರ್ಜಾ ಅವರು ಆಗಸ್ಟ್ 15 1962 ರಂದು ತುಮಕೂರಿನ ಮಧುಗಿರಿ ಜಿಲ್ಲೆಯಲ್ಲಿ ಜನಿಸಿದ್ದಾರೆ.
ಇವರ ತಂದೆ ಶಕ್ತಿ ಪ್ರಸಾದ್ ಅವರು ಕೂಡ ಆಗಿನ ಕಾಲದಲ್ಲಿ ದೊಡ್ಡ ನಟರಾಗಿ ಹೆಸರನ್ನು ಸಾಧಿಸಿದವರು ಮತ್ತು ಇವರ ತಾಯಿಯ ಹೆಸರು ಲಕ್ಷ್ಮೀದೇವಿ. ಇವರು ಮೊನ್ನೆಯಷ್ಟೇ ಸಾವನ್ನಪ್ಪಿದರು. ಇನ್ನು ಅರ್ಜುನ್ ಸರ್ಜಾ ಅವರು ಕನ್ನಡ ತೆಲುಗು ತಮಿಳು ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.
ಅರ್ಜುನ್ ಸರ್ಜಾ ಅವರು 1981ರ ಲ್ಲಿ ಸಿಂಹದ ಮರಿ ಸೈನ್ಯ ಎನ್ನುವ ಕನ್ನಡ ಚಿತ್ರದ ಮೂಲಕ ತಮ್ಮ ಸಿನಿಮಾ ಕೆರಿಯರ್ ಅನ್ನು ಶುರು ಮಾಡಿಕೊಂಡರು. ಇದಾದ ಮೇಲೆ ಇವರು ಸಾಕಷ್ಟು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಅರ್ಜುನ್ ಸರ್ಜಾ ಅವರು ಎಲ್ಲಾ ಭಾಷೆಗಳಲ್ಲಿ ಸೇರಿ ಸುಮಾರು 160 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಹಾಗೆಯೇ ಇವರು ಸುಮಾರು 12 ಚಿತ್ರಗಳನ್ನು ನಿರ್ದೇಶಿಸಿದ್ದಾರೆ ಜೊತೆಗೆ ಕೆಲ ಚಿತ್ರಗಳನ್ನು ನಿರ್ಮಾಣ ಸಹ ಮಾಡಿದ್ದಾರೆ. ಇನ್ನೂ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಅರ್ಜುನ್ ಅವರು 1988ರ ಲ್ಲಿ ನಿವೇದಿತಾ ಅರ್ಜುನ್ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಐಶ್ವರ್ಯ ಅರ್ಜುನ್ ಮತ್ತು ಅಂಜನಾ ಸರ್ಜಾ ಎನ್ನುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇದರಲ್ಲಿ ಐಶ್ವರ್ಯ ಅರ್ಜುನ್ ಅವರು ನಟಿಯಾಗಿ ಕೆಲ ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ……