ಪ್ರಸ್ತುತ ಸ್ಯಾಂಡಲ್ವುಡ್ ನಲ್ಲಿ ನಟ ಮತ್ತು ಖಳನಾಯಕ ಪಾತ್ರದಲ್ಲಿ ಅಭಿನಯ ಮಾಡುತ್ತಿರುವ ನಟ ವಸಿಷ್ಟ ಸಿಂಹ ಅವರು ಕನ್ನಡದ ಕ್ಯಾತ ನಟಿ ಹರಿಪ್ರಿಯಾ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕೇವಲ ಕೆಲವರ ಸಮ್ಮುಖದಲ್ಲಿ ಮಾತ್ರ ಹರಿಪ್ರಿಯಾ ಮನೆಯಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಆದರೆ ಇನ್ನೂ ಇವರಿಬ್ಬರು ತಮ್ಮ ನಿಶ್ಚಿತಾರ್ಥದ ಬಗ್ಗೆ ಆಗಲಿ ಮದುವೆ ಬಗ್ಗೆ ಆಗಲಿ ಎಲ್ಲೂ ಕೂಡ ಅಧಿಕೃತವಾಗಿ ಹೇಳಿಲ್ಲ.
ಆದರೆ ಈ ಹಿಂದೆ ದುಬೈ ಗೆ ಹೋಗಿರುವ ಫೋಟೋಗಳು ಮಾತ್ರ ತುಂಬಾನೇ ವೈರಲ್ ಆಗಿತ್ತು. ಆದರೆ ಈ ಜೋಡಿ ಯಾರಿಗೂ ಹೇಳದೆ ಕುಟುಂಬಸ್ಥರ ಸಮೂಹದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಂತೆ. ಇನ್ನು ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥದ ಬೆನ್ನಲ್ಲೆ ನಟ ವಸಿಷ್ಠ ಸಿಂಹ ಮತ್ತು ಹರಿಪ್ರಿಯ ಅವರು ಕೂಡ ಮದುವೆಯಾಗಲಿದ್ದಾರೆ ಎಂಬ ಮಾಹಿತಿಗಳು ಮೂಲಗಳಿಂದ ಸಿಕ್ಕಿತು.
ಇನ್ನೂ ವಸಿಷ್ಟ ಸಿಂಹ ಅವರ ಹುಟ್ಟು ಹಬ್ಬದ ದಿನದಂದು ಇವರಿಬ್ಬರು ಜೊತೆಯಾಗಿ ಡಾನ್ಸ್ ಮಾಡಿರುವ ಒಂದು ವಿಡಿಯೋವನ್ನು ಹರಿಪ್ರಿಯ ಅವರು ಹಂಚಿಕೊಂಡಿದ್ದರು. ಅಷ್ಟೇ ಅಲ್ಲದೆ ಹುಟ್ಟು ಹಬ್ಬದ ಶುಭಾಶಯಗಳು ಪಾರ್ಟ್ನರ್ ಎಂದು ಕೂಡ ಬರೆದುಕೊಂಡಿದ್ದರು. ಇದಕ್ಕೆ ರಿಪ್ಲೈಯಾಗಿ ವಸಿಷ್ಟ ಸಿಂಹ ಅವರು ಥ್ಯಾಂಕ್ಯು ಪಾರ್ಟ್ನರ್ ಎಂದು ಮಾಡಿದ್ದರು.
ಅದೇ ರೀತಿ ಹರಿಪ್ರಿಯ ಅವರ ಹುಟ್ಟು ಹಬ್ಬದ ದಿನದಂದು ವಸಿಷ್ಟ ಅವರು ಕೂಡ ಹುಟ್ಟು ಹಬ್ಬದ ಶುಭಾಶಯಗಳು ಪಾರ್ಟ್ನರ್ ಎಂದೆ ಪೋಸ್ಟ್ ಮಾಡಿದ್ದರು. ಇದಕ್ಕೆ ಹರಿಪ್ರಿಯ ಅವರು ಥ್ಯಾಂಕ್ಯೂ ಪಾರ್ಟ್ನರ್ ಎನ್ನುವ ರಿಪ್ಲೈಯನ್ನು ಹಾಕಿದ್ದರು. ಇದನ್ನು ನೋಡಿದವರು ಇವರಿಬ್ಬರು ಲವ್ ಮಾಡುತ್ತಿದ್ದಾರಾ ಎಂದು ಸಾಕಷ್ಟು ಜನರು ಅನುಮಾನ ಪಟ್ಟಿದ್ದರು.
ಇನ್ನು ಇವರಿಬ್ಬರು ದುಬೈನಲ್ಲಿ ಸಾಕಷ್ಟು ಫೋಟೋಗಳನ್ನು ತೆಗೆಸಿಕೊಂಡು ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಇವುಗಳನ್ನು ನೋಡಿ ಸಾಕಷ್ಟು ಜನರು ಇವರಿಬ್ಬರ ನಡುವೆ ಪ್ರೀತಿ ನಿಜಾನಾ, ನಿಶ್ಚಿತಾರ್ಥ ನಡೆದಿದ್ದು ನಿಜಾನಾ ಎಂಬ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಇದರ ಬಗ್ಗೆ ಅಧಿಕೃತವಾಗಿ ವಶಿಷ್ಠ ಸಿಂಹ ಮತ್ತು ಹರಿಪ್ರಿಯ ಅವರು ಹೇಳಿಲ್ಲ. ಆದರೆ ಕೆಲವರು ಹೇಳುವ ಪ್ರಕಾರ ಹರಿಪ್ರಿಯಾ ಅವರ ಮನೆಯಲ್ಲಿ ಕೇವಲ ಕೆಲ ಜನರ ಸಮ್ಮುಖದಲ್ಲಿ ಮಾತ್ರ ಎಂಗೇಜ್ಮೆಂಟ್ ಜರಗಿದೆ ಎಂದು ಹೇಳಲಾಗಿದೆ…..