ದಾಂಪತ್ಯ ಜೀವನಕ್ಕೆ ಕಾಲಿಟ್ಟ ಲೋಕೇಶ್ ಮತ್ತು ರಚನ, ಹೇಗಿತ್ತು ನೋಡಿ ಮದುವೆಯ ಸಡಗರ ಸಂಭ್ರಮ ಯಾರೆಲ್ಲಾ ಬಂದಿದ್ದಾರೆ ಗೊತ್ತಾ? ಕಂಪ್ಲೀಟ್ ವಿಡಿಯೋ !!
ಕಾಮಿಡಿ ನಟ ಆಗಿಯೇ ಫೇಮಸ್ ಆಗಿರುವ ಲೋಕೇಶ್ ಬಸವಟ್ಟಿ ಮತ್ತು ನಟಿ ರಚನಾ ದಶರಥ್ ಅವರು ಇತ್ತೀಚಿಗೆ ಅಷ್ಟೇ ಅದ್ದೂರಿಯಾಗಿ ಎಂಗೇಜ್ಮೆಂಟ್ ಅನ್ನು ಮಾಡಿಕೊಂಡಿದ್ದರು. ಇನ್ನೂ ಇವರಿಬ್ಬರು ಮದುವೆಯಾಗಿದ್ದು ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇನ್ನೂ ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ ಇಬ್ಬರು ಕೂಡ ಜನವರಿ 26 ರಂದು ವಿವಾಹ ಮಾಡಿಕೊಂಡರು. ಹಾಗೆಯೇ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಜೋಡಿ ಕೂಡ ಎಂಗೇಜ್ಮೆಂಟ್ ಮಾಡಿಕೊಂಡರು. ಹೀಗೆ ಕನ್ನಡ ಇಂಡಸ್ಟ್ರಿಯಲ್ಲಿ ಸಾಲು ಸಾಲಾಗಿ ನಟ ಮತ್ತು ನಟಿಯರು ಎಂಗೇಜ್ಮೆಂಟ್ ಮಾಡಿಕೊಳ್ಳುತ್ತಿದ್ದಾರೆ ಇನ್ನೂ ಕೆಲವರು ವಿವಾಹ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇನ್ನು ನಟ ರಚನಾ ಮತ್ತು ಲೋಕೇಶ್ ಅವರ ವಿವಾಹವನ್ನು ನೋಡಿದ ಅಭಿಮಾನಿಗಳು ಮತ್ತು ನೆಟ್ಟಿಗರು ಕೂಡ ಶುಭಾಶಯಗಳು ತಿಳಿಸುತ್ತಿದ್ದಾರೆ. ಇನ್ನು ಲೋಕೇಶ್ ಬಸವಟ್ಟಿ ಅವರು ಹಾಸ್ಯ ಪಾತ್ರಗಳ ಮುಖಾಂತರವೇ ಜನಪ್ರಿಯತೆಯನ್ನು ಸಾಧಿಸಿಕೊಂಡಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಚಾಮರಾಜನಗರ ಜಿಲ್ಲೆಯ ಬಸವಟ್ಟಿ ಎನ್ನುವ ಗ್ರಾಮದಲ್ಲಿ. ಇನ್ನು ಲೋಕೇಶ್ ಅವರ ತಂದೆ ಹೆಸರು ನಂಜುಂಡಸ್ವಾಮಿ ಮತ್ತು ತಾಯಾ ಹೆಸರು ಶಿವಗಂಗಮ್ಮ. ಇನ್ನು ಲೋಕೇಶ್ ಬಸವಟ್ಟಿ ಅವರು ಡಿಪ್ಲೋಮಾ ವ್ಯಾಸಂಗ ಮಾಡಿ ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಲೋಕೇಶ್ ಅವರಿಗೆ ನಟನೆಯಲ್ಲಿ ತುಂಬಾ ಆಸಕ್ತಿ ಇದ್ದ ಕಾರಣ ನಟನಾ ಸಂಸ್ಥೆಗೆ ಸೇರಿದರು. ಇವರು ಕೆಲ ನಾಟಕಗಳಲ್ಲಿ ನಟಿಸಿದ್ದಾರೆ. ಹಾಗೆಯೇ ಸಿಲ್ಲಿ ಲಲ್ಲಿ, ಪಾಯಿಂಟ್ ಪರಿಮಳ, ಪಾರ್ವತಿ ಪರಮೇಶ್ವರ ಇನ್ನೂ ಸಾಕಷ್ಟು ಸೀರಿಯಲ್ ಗಳಲ್ಲಿ ಲೋಕೇಶ್ ಅವರು ಅಭಿನಯ ಮಾಡಿದ್ದಾರೆ. ಹಾಗೆಯೇ ಚತುರ್ಭುಜ ಸೇರಿದಂತೆ ಹಲವು ಸಿನಿಮಾಗಳಲ್ಲಿ ಲೋಕೇಶ್ ಅವರು ನಟಿಸಿ ಬೆಳ್ಳಿತೆರೆಯಲ್ಲೂ ಕೂಡ ಮಿಂಚಿದ್ದಾರೆ.
ಇನ್ನು ರಚನಾ ಅವರ ಮೂಲತಃ ನೇಪಾಳ. ಇನ್ನು ಇವರು ಹುಟ್ಟಿ ಬೆಳೆದಿದ್ದು ಎಲ್ಲವೂ ಬೆಂಗಳೂರಿನಲ್ಲೇ. ಇವರು ಕನ್ನಡ ಭಾಷೆಯನ್ನು ತುಂಬಾ ಸಲೀಸಾಗಿ ಮಾತನಾಡುತ್ತಾರೆ. ಇನ್ನು ರಚನಾ ಅವರು ಮೊದಲು ಮಾಡಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟು ತದನಂತರ ಮಾತುಕತೆ, ಯೋಗಿ ದುನಿಯಾ, ಸಮರ್ಥ ಇನ್ನೂ ಮುಂತಾದ ಸಿನಿಮಾಗಳಲ್ಲಿ ರಚನಾ ಅವರು ಅಭಿನಯ ಮಾಡಿದ್ದಾರೆ…..