Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಈ ಸ್ಟಾರ್ ನಟಿಯರಿಗೆ ಇವರದ್ದೇ ಧ್ವನಿ..!! ಅವರು ಯಾರ್ಯಾರು ಗೊತ್ತಾ? ಮೊದಲ ಬಾರಿಗೆ ತೋರಿಸ್ತೇವೆ ನೋಡಿ!!

0

ಸಿನಿಮಾಗಳಲ್ಲಿ ಒಳ್ಳೊಳ್ಳೆ ಡೈಲಾಗ್ ಗಳನ್ನು ಹೇಳಬೇಕು ಎಂದರೆ ಅದಕ್ಕೆ ಭಾಷೆಯ ಸ್ಪಷ್ಟತೆ ಇರಬೇಕು. ಇನ್ನೂ ಸಾಕಷ್ಟು ನಟಿಯರು ಪರಭಾಷೆಗಳಿಂದ ಬರುತ್ತಿರುತ್ತಾರೆ. ಅಂತಹವರಿಗೆ ಭಾಷೆ ಬರುವುದಿಲ್ಲವಾದ ಕಾರಣ ಇವರಿಗೆ ಬೇರೆ ಡಬ್ಬಿಂಗ್ ಆರ್ಟಿಸ್ಟ್ ಗಳು ಹಿನ್ನೆಲೆ ಧ್ವನಿಯನ್ನು ನೀಡುತ್ತಾರೆ. ಅಂತಹ ಫೇಮಸ್ ಡಬ್ಬಿಂಗ್ ಆರ್ಟಿಸ್ಟ್ ಗಳು ಯಾರು ಎಂದು ಇದು ತಿಳಿದುಕೊಳ್ಳೋಣ ಬನ್ನಿ..

ದೀಪಾ ಭಾಸ್ಕರ್ ಅವರು ತಮ್ಮ ಸಿನಿಮಾ ಜೀವನವನ್ನು ಬಾಲನಟಿ ಇದ್ದಾಗಲೇ ಶುರುಮಾಡಿಕೊಂಡರು. ಇವರು ಮೊದಲು ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೆಲಸಕ್ಕೆ ಸೇರಿದರು. ಇದಾದ ಮೇಲೆ ಇದು ಸುಬ್ಬಲಕ್ಷ್ಮಿ ಸಂಸಾರ ಎನ್ನುವ ಧಾರಾವಾಹಿಯಲ್ಲಿ ನಟಿಸಿ ಸಕತ್ ಫೇಮಸ್ ಆದರು. ಇವರು ಮೊದಲನೆಯದಾಗಿ ಪುನೀತ್ ರಾಜ್ ಕುಮಾರ್ ಅವರ ಅಭಿನಯದ ಅಭಿ ಚಿತ್ರದಲ್ಲಿ ನಟಿಸಿದ್ದ ರಮ್ಯಾ ಅವರಿಗೆ ಹಿನ್ನೆಲೆ ಧ್ವನಿಯನ್ನು ನೀಡಿದ್ದಾರೆ.

ಇದಾದ ಮೇಲೆ ಇವರು ಸುಮಾರು 700 ಚಿತ್ರಗಳಲ್ಲಿ ನಟಿಯರಿಗೆ ಹಿನ್ನೆಲೆ ಧ್ವನಿಯನ್ನು ನೀಡಿದ್ದಾರೆ. ಇವರು ಪೂಜಾಗಾಂಧಿ, ರಚಿತಾರಾಮ್, ಪ್ರಿಯಾಮಣಿ, ರಮ್ಯಾ ಇನ್ನೂ ಮುಂತಾದ ನಟಿಯರಿಗೆ ಹಿನ್ನೆಲೆ ಧ್ವನಿಯನ್ನು ನೀಡಿದ್ದಾರೆ ಎಂದು ಹೇಳಬಹುದು.

ಶಶಿಕಲಾ ಅವರು ಬಹುತೇಕ ದಕ್ಷಿಣ ಭಾರತದ ನಟಿಯರಿಗೆ ಹಿನ್ನೆಲೆ ಧ್ವನಿಯನ್ನು ನೀಡಿದ್ದಾರೆ. ಅದರಲ್ಲೂ ಆಪ್ತಮಿತ್ರ ಚಿತ್ರದಲ್ಲಿ ನಟಿಸಿದ್ದ ಸೌಂದರ್ಯ ಅವರಿಗೆ ನಾಗವಲ್ಲಿ ಪ್ರವೇಶ ಮಾಡಿದಾಗ ಅದಕ್ಕೆ ಹಿನ್ನೆಲೆ ಧ್ವನಿಯನ್ನು ಇವರೇ ನೀಡಿರುವುದು.

ಇವರು 80ರ ಸಮಯದಲ್ಲಿ ತಮ್ಮ ಡಬ್ಬಿಂಗ್ ಆರ್ಟಿಸ್ಟ್ ವೃತ್ತಿಯನ್ನು ಶುರು ಮಾಡಿಕೊಂಡರು. ಇವರು ಮಾಲಾಶ್ರೀ, ಖುಷ್ಬೂ, ಶ್ರುತಿ, ಮೀನಾ ಇನ್ನೂ ಸಾಕಷ್ಟು 80 ಮತ್ತು 90ರ ಸಮಯದಲ್ಲಿ ಬಂದ ನಟಿಯರಿಗೆ ಹಿನ್ನೆಲೆ ಧ್ವನಿಯನ್ನು ನೀಡಿದ್ದಾರೆ. ಇವರು ಸುಮಾರು 1000 ಸಿನಿಮಾಗಳ ನಟಿಯರಿಗೆ ಹಿನ್ನೆಲೆ ಧ್ವನಿಯನ್ನು ನೀಡಿದ್ದಾರೆ.

ಶಿಲ್ಪಾ ಭಾಗವತರ್ ಅವರು ಕಿರುತೆರೆಯ ನಟಿಯಾಗಿದ್ದು ಮೊದಲು ಇವರು ಮಹಾಮಾಯೆ ಎನ್ನುವ ಧಾರಾವಾಹಿಯ ಮುಖಾಂತರ ತಮ್ಮ ವೃತ್ತಿ ಜೀವನವನ್ನು ಶುರುಮಾಡಿದರು. ಇದಾದ ಮೇಲೆ ಇನ್ನೂ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿ ಜೊತೆಗೆ ಸಾಕಷ್ಟು ನಟಿಯರಿಗೆ ಹಿನ್ನೆಲೆ ಧ್ವನಿಯನ್ನು ಸಹ ನೀಡಿದ್ದಾರೆ. ಶಿಲ್ಪಾ ಅವರು ಕೂಡ ಸುಮಾರು 1000 ಸಿನಿಮಾಗಳಿಗೆ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ಇವರು ಭಾವನಾ ಮೆನನ್, ಪೂಜಾಗಾಂಧಿ, ರಾಗಿಣಿ ದ್ವಿವೇದಿ, ಪಾರುಲ್ ಯಾದವ್ ಇನ್ನೂ ಮುಂತಾದ ನಟಿಯರಿಗೆ ಹಿನ್ನೆಲೆ ಧ್ವನಿಯನ್ನು ನೀಡಿದ್ದಾರೆ.

ಇದರ ಜೊತೆಗೆ ಬೇರೆ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿರುವ ಸಿನಿಮಾಗಳಿಗೂ ಸಹ ನಟಿಯರಿಗೆ ಧ್ವನಿಯನ್ನು ನೀಡಿದ್ದಾರೆ. ಅಂದರೆ ಅನುಷ್ಕಾ ಶೆಟ್ಟಿ, ನಯನತಾರ, ಕಾಜಲ್ ಅಗರ್ವಾಲ್ ಅವರಿಗೂ ಕೂಡ ಹಿನ್ನೆಲೆ ಧ್ವನಿಯನ್ನು ನೀಡಿದ್ದಾರೆ.

ಸುನೇತ್ರಾ ಪಂಡಿತ್ ಅವರು ಮೊದಲು ರಂಗಭೂಮಿಯಿಂದ ಬಂದಿದ್ದಾರೆ. ಇವರು ಕೂಡ ಸಾಕಷ್ಟು ಧಾರಾವಾಹಿಗಳಲ್ಲಿ ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸುನೇತ್ರಾ ಅವರು ಸುಮಾರು 800 ಚಿತ್ರಗಳಿಗೆ ತಮ್ಮ ಹಿನ್ನೆಲೆ ಧ್ವನಿಯನ್ನು ನೀಡಿದ್ದಾರೆ. ಸುನೇತ್ರ ಅವರು ಮೊದಲು ಶಿವರಾಜ್ ಕುಮಾರ್ ಅವರ ಓಂ ಚಿತ್ರದಲ್ಲಿ ನಟಿಸಿದ ಪ್ರೇಮಾ ಅವರಿಗೆ ಮೊದಲನೆಯದಾಗಿ ಹಿನ್ನೆಲೆ ಧ್ವನಿಯನ್ನು ನೀಡಿದ್ದಾರೆ.

ಇವರ ಜೊತೆಗೆ ಇನ್ನೂ ಸಾಕಷ್ಟು ನಟಿಯರಿಗೆ ಕೂಡ ಸುನೇತ್ರಾ ಅವರು ಡಬ್ಬಿಂಗ್ ಆರ್ಟಿಸ್ಟ್ ಆಗಿ ತಮ್ಮ ಧ್ವನಿಯನ್ನು ನೀಡಿದ್ದಾರೆ. ಇನ್ನೂ ಸುನೇತ್ರಾ ಅವರು ಬಹುತೇಕ ಪ್ರೇಮಾ ಅವರು ಅಭಿನಯಿಸಿದ ಚಿತ್ರಗಳಿಗೆ ಹಿನ್ನೆಲೆ ಧ್ವನಿಯನ್ನು ನೀಡಿದ್ದಾರೆ.

ಶ್ರುತಿ ಶಂಕರ್ ಅವರು ಮೊದಲು ತಮ್ಮ ಗಾಯನದಿಂದ ಸಿನಿಮಾ ಜೀವನವನ್ನು ಶುರು ಮಾಡಿಕೊಂಡರು. ಇದಾದ ಮೇಲೆ ಇವರು ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೆಲಸ ಮಾಡುವುದಕ್ಕೆ ಪ್ರಾರಂಭ ಮಾಡಿಕೊಂಡರು. ಇನ್ನು ಶ್ರುತಿ ಅವರು ಗೀತಾ ಬ್ಯಾಂಗಲ್ ಸ್ಟೋರ್ ಚಿತ್ರದ ಮೂಲಕ ತಮ್ಮ ಹಿನ್ನೆಲೆ ಧ್ವನಿಯನ್ನು ಮೊದಲನೆಯದಾಗಿ ನೀಡಿದರು. ಇದಾದ ಮೇಲೆ ಇವರು ಸುಮಾರು 200 ಚಿತ್ರಗಳಿಗೆ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ……

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply