ನಟ ನಟಿಯರು ನಟನೆಯನ್ನು ಹೇಗೆ ಕಷ್ಟ ಪಟ್ಟು ಮಾಡುತ್ತಾರೆ ಹಾಗೆ ಡಬ್ಬಿಂಗ್ ಮಾಡುವುದು ಕೂಡ ಅಷ್ಟೇ ಕಷ್ಟವಾಗಿರುತ್ತದೆ. ನಾವು ಈಗ 90ರ ಸಮಯದಲ್ಲಿ ನಟ ನಟಿಯರು ಕೇವಲ ನಟನೆಯಲ್ಲಿ ಮಾತ್ರವಲ್ಲದೇ ಕೆಲ ಕಲಾವಿದರಿಗೆ ತಮ್ಮ ಧ್ವನಿಯನ್ನು ಕೂಡ ನೀಡಿದ್ದಾರೆ. ಆ ನಟ ನಟಿಯರು ಯಾವ ಕಲಾವಿದರಿಗೆ ತಮ್ಮ ಧ್ವನಿಯನ್ನು ಅವರಿಗೆ ಹಿನ್ನೆಲೆ ಧ್ವನಿಯಾಗಿ ನೀಡಿದ್ದಾರೆ ಎನ್ನುವುದು ತಿಳಿದುಕೊಳ್ಳೋಣ ಬನ್ನಿ..
ಶ್ರೀನಿವಾಸ ಪ್ರಭು ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರು. ಇವರು ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಅಭಿನಯ ಮಾಡಿದ್ದಾರೆ. ಇನ್ನು ಶ್ರೀನಿವಾಸ್ ಪ್ರಭು ಅವರು ಮತ್ತೊಬ್ಬ ಕಲಾವಿದರಿಗೆ ಹಿನ್ನೆಲೆ ಧ್ವನಿಯಾಗಿ ತಮ್ಮ ಧ್ವನಿಯನ್ನು ನೀಡಿದ್ದಾರೆ. ಹೌದು ಬಹುತೇಕ ರವಿಚಂದ್ರನ್ ಅವರ ಸಿನಿಮಾಗಳಿಗೆ ಶ್ರೀನಿವಾಸ್ ಪ್ರಭು ಅವರು ತಮ್ಮ ಧ್ವನಿಯನ್ನು ನೀಡಿದ್ದಾರೆ. ರವಿಚಂದ್ರನ್ ಅವರು ಅಭಿನಯ ಮಾಡಿರುವ ಪ್ರೇಮಲೋಕ ಚಿತ್ರದಿಂದ ಹಿಡಿದು ಅಭಿಮನ್ಯು ಚಿತ್ರದವರೆಗೂ ಕೂಡ ಶ್ರೀನಿವಾಸ್ ಪ್ರಭು ಅವರು ರವಿಚಂದ್ರನ್ ಅವರ ಹಿನ್ನೆಲೆ ಧ್ವನಿಯಾಗಿ ಡಬ್ಬಿಂಗ್ ಆರ್ಟಿಸ್ಟ್ ಕೆಲಸವನ್ನು ಮಾಡಿದ್ದಾರೆ. ರವಿಚಂದ್ರನ್ ಅವರ ಸುಮಾರು 20 ಚಿತ್ರಗಳಿಗೆ ಶ್ರೀನಿವಾಸ್ ಪ್ರಭು ಅವರು ಹಿನ್ನೆಲೆ ಧ್ವನಿಯನ್ನು ನೀಡಿದ್ದಾರೆ.
ರಾಮಕೃಷ್ಣ ಅವರು 80ಮತ್ತು 90ರ ಸಮಯದಲ್ಲಿ ಟಾಪ್ ಲೀಡಿಂಗ್ ನಟರಾಗಿ ಇದ್ದರು. ರಾಮಕೃಷ್ಣ ಅವರು ನಟರಾಗಿ ಸಾಕಷ್ಟು ಒಳ್ಳೊಳ್ಳೆಯ ಸಿನಿಮಾಗಳನ್ನು ನೀಡಿದ್ದಾರೆ. ಇವರು ಕೇವಲ ನಟ ಮಾತ್ರರಲ್ಲ ಡಬ್ಬಿಂಗ್ ಆರ್ಟಿಸ್ಟ್ ಕೂಡ ಹೌದು. ಪಲ್ಲವಿ ಅನುಪಲ್ಲವಿ ಚಿತ್ರದಲ್ಲಿ ನಟಿಸಿರುವ ಬಾಲಿವುಡ್ ನಟ ಅನಿಲ್ ಕಪೂರ್ ಅವರಿಗೆ ಹಿನ್ನೆಲೆ ಧ್ವನಿಯಾಗಿ ರಾಮಕೃಷ್ಣ ಅವರು ತಮ್ಮ ಕಂಠದಾನವನ್ನು ನೀಡಿದ್ದಾರೆ.
ದಕ್ಷಿಣ ಭಾರತದ ಖ್ಯಾತ ನಟಿಯಾಗಿ ಗುರುತಿಸಿಕೊಂಡಿರುವ ಸರಿತಾ ಅವರು ಮೊದಲು ನಟಿಯಾಗಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಈಗ ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇವರು ಎಲ್ಲಾ ಭಾಷೆಗಳಲ್ಲಿ ಸೇರಿ ಸುಮಾರು 130 ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇವರು ನಟಿಯಾಗಿ ಎಷ್ಟು ಜನಪ್ರಿಯವೋ ಅಷ್ಟೇ ಜನಪ್ರಿಯತೆಯನ್ನು ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೂಡ ಮಾಡಿ ಸಂಪಾದನೆ ಮಾಡಿಕೊಂಡಿದ್ದಾರೆ. ಸರಿತಾ ಅವರು ಸುಹಾಸಿನಿ ನಗ್ಮಾ ಭಾನುಪ್ರಿಯಾ ಮೀನಾ ಸೇರಿದಂತೆ ಇನ್ನೂ ಸಾಕಷ್ಟು ನಟಿಯರಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ.
ಸುಂದರ್ ಕೃಷ್ಣ ಅರಸ್ ಅವರು 90ರ ಸಮಯದಲ್ಲಿ ಸಿನಿಮಾಗಳಲ್ಲಿ ನೆಗೆಟಿವ್ ಪಾತ್ರಗಳನ್ನು ಮಾಡಿ ಬಹಳ ಪ್ರಖ್ಯಾತಿಯನ್ನು ಗಳಿಸಿದ್ದರು. ಇನ್ನು ಇವರ ಧ್ವನಿಗೆ ಅದೆಷ್ಟೋ ಅಭಿಮಾನಿಗಳು ಇದ್ದಾರೆ ಎಂದು ಹೇಳಬಹುದು. ಇನ್ನು ಸುಂದರ್ ಕೃಷ್ಣ ಅರಸ್ ಅವರು ತಮ್ಮ ಸಿನಿಮಾಗಳಿಗೆ ಮತ್ತು ಬೇರೊಬ್ಬ ಕಲಾವಿದರಿಗೂ ಕೂಡ ಸಾಕಷ್ಟು ಸಿನಿಮಾಗಳಿಗೆ ಹಿನ್ನೆಲೆ ಧ್ವನಿಯನ್ನು ನೀಡಿದ್ದಾರೆ.
ವಿಶೇಷತೆ ಏನೆಂದರೆ ಸಿಂಹದ ಮರಿ ಸೈನ್ಯ ಚಿತ್ರದಲ್ಲಿ ಬಾಲಿವುಡ್ ನಟ ಅಂಬರೀಶ್ ಪುರಿ ಮತ್ತು ಸುಂದರ್ ಕೃಷ್ಣ ಅರಸ್ ಅವರು ಇಬ್ಬರೂ ನಟನೆ ಮಾಡಿದ್ದಾರೆ. ಇದರಲ್ಲಿ ಅಂಬರೀಶ್ ಪುರಿ ಅವರಿಗೂ ಕೂಡ ಸುಂದರ್ ಕೃಷ್ಣ ಅವರು ಹಿನ್ನಲೆ ಧ್ವನಿಯನ್ನು ನೀಡಿ ಮತ್ತಷ್ಟು ಎಲ್ಲರನ್ನು ಆಕರ್ಷಣೆ ಮಾಡಿಕೊಂಡಿದ್ದಾರೆ.
ಕನ್ನಡದ ಜನಪ್ರಿಯ ನಟಿ ಸುಧಾರಾಣಿ ಅವರು ಕೇವಲ ನಟನೆಯಲ್ಲಿ ಮಾತ್ರವಲ್ಲ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೂಡಾ ಸೈ ಎನಿಸಿಕೊಂಡಿದ್ದಾರೆ. ಹೌದು ಇವರು ಮೀನಾ ರೋಜಾ ರಮ್ಯಾ ಕೃಷ್ಣ ಇನ್ನೂ ಸಾಕಷ್ಟು ನಟಿಯರಿಗೆ ಸಿನಿಮಾಗಳಲ್ಲಿ ಹಿನ್ನೆಲೆ ಧ್ವನಿಯಾಗಿ ತಮ್ಮ ಕಂಠದಾನವನ್ನು ಮಾಡಿದ್ದಾರೆ……