Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

OnePlus Watch2 : ಶೀಘ್ರದಲ್ಲೇ ಲಾಂಚ್ ಆಗಲಿದೆ OnePlus Watch2! ಏನಿದರ ವಿಶೇಷ ಫೀಚರ್ಸ್!

ಒನ್ ಪ್ಲಸ್ ಸಂಸ್ಥೆ ಸ್ಮಾರ್ಟ್ ವಾಚ್ ವಿಚಾರದಲ್ಲಿ ಕೂಡ ಮುಂದಿದೆ. ಒನ್ ಪ್ಲಸ್ ಸ್ಮಾರ್ಟ್ ವಾಚ್ ನ ಮೊದಲ ಮಾಡೆಲ್ ಅನ್ನು 2021ರಲ್ಲಿ ಬಿಡುಗಡೆ ಮಾಡಲಾಗಿತ್ತು.

OnePlus Watch2 : ಆಪಲ್ ಐಫೋನ್ ಬಿಟ್ಟರೆ ನಮ್ಮ ದೇಶದಲ್ಲಿ ಹೆಚ್ಚು ಜನಪ್ರಿಯತೆ ಹೊಂದಿರುವ ಸಂಸ್ಥೆಗಳ ಸಾಲಿಗೆ ಸೇರುವುದು OnePlus ಎಂದು ಹೇಳಿದರೆ ತಪ್ಪಲ್ಲ. ಟೆಕ್ನಾಲಜಿಯಲ್ಲಿ ಅಡ್ವಾನ್ಸ್ಡ್ ಆಗಿರುವ ಒನ್ ಪ್ಲಸ್ ಫೋನ್ ಗ್ರಾಹಕರನ್ನು ಆಕರ್ಷಿಸುವಂಥ ಅನೇಕ ಹೊಸ ಮಾಡೆಲ್ ಫೋನ್ ಗಳನ್ನು ಬಿಡುಗಡೆ ಮಾಡಿದೆ. ಇದೀಗ ಮತ್ತೊಮ್ಮೆ ಸ್ಮಾರ್ಟ್ ವಾಚ್ ಗಳ ತಯಾರಿಕೆ ಶುರುವಾಹಿದೆ..

OnePlus Smartwatch:

ಒನ್ ಪ್ಲಸ್ ಸಂಸ್ಥೆ ಸ್ಮಾರ್ಟ್ ವಾಚ್ ವಿಚಾರದಲ್ಲಿ ಕೂಡ ಮುಂದಿದೆ. ಒನ್ ಪ್ಲಸ್ ಸ್ಮಾರ್ಟ್ ವಾಚ್ ನ ಮೊದಲ ಮಾಡೆಲ್ ಅನ್ನು 2021ರಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ವಾಚ್ ಗೆ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಕೂಡ ಬಂದಿತ್ತು. ಇದೀಗ ಒನ್ ಪ್ಲಸ್ ವಾಚ್2 ವಾಚ್ ಕೂಡ ರೆಡಿ ಆಗಿದ್ದು, ಲಾಂಚ್ ಆಗುವುದಕ್ಕೆ ರೆಡಿ ಇದೆ. ಶೀಘ್ರದಲ್ಲೇ ಲಾಂಚ್ ಆಗಲಿರುವ ಈ ವಾಚ್ ಬಗ್ಗೆ ಇಂದು ಸಂಪೂರ್ಣವಾಗಿ ತಿಳಿಸಲಿದ್ದೇವೆ.

OnePlus Watch2 :

ಈಗಾಗಲೇ ಈ ವಾಚ್ ನ ಅಧಿಕೃತ ತಯಾರಿಕೆ ಮುಗಿದಿದ್ದು, ಮುಂಬರುವ World Mobile Congress ನಲ್ಲಿ ಅಧಿಕೃತವಾಗಿ ಪರಿಚಯಿಸಲಾಗುತ್ತದೆ. ಆದರೆ ಒನ್ ಪ್ಲಸ್ ವಾಚ್2 ಬಗ್ಗೆ ಈಗಾಗಲೇ ಒನ್ ಪ್ಲಸ್ ಅಧಿಕೃತ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಗಳ ಮೂಲಕ ಟೀಸರ್ ಬಿಡುಗಡೆ ಮಾಡಲಾಗಿದ್ದು, ಈ ಮಾಡೆಲ್ ಗೆ ಇನ್ನು ಕೂಡ ಸರಿಯಾದ ಹೆಸರನ್ನು ನಿಗದಿಪಡಿಸಿಲ್ಲ. ಈ ಪ್ರಾಡಕ್ಟ್ ಏನಿರಬಹುದು ಗೆಸ್ ಮಾಡಿ ಎಂದು ಗ್ರಾಹಕರನ್ನು ಕೇಳಲಾಗಿದೆ. ಆದರೆ ಟೀಸರ್ ನೋಡಿದರೆ ಸ್ಮಾರ್ಟ್ ವಾಚ್ ಎನ್ನುವುದು ಗೊತ್ತಾಗುತ್ತಿದೆ.

Oneplus Watch2 Features:

ಈ ವಾಚ್ ಬಗ್ಗೆ ಇನ್ನೂ ಕೂಡ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಆದರೆ ಲೀಕ್ ಆಗಿರುವ ಮಾಹಿತಿಗಳ ಪ್ರಕಾರ ವಾಚ್ ನ ಫೀಚರ್ಸ್ ಏನು ಎನ್ನುವುದು ತಿಳಿದುಬಂದಿದೆ. ಈ ವಾಚ್ ನಲ್ಲಿ ರೆಂಡರ್ ನಂತೆ ಡಿಸೈನ್ ಹೊಂದಿದೆ. ವಾಚ್ ನ ರೈಟ್ ಸೈಡ್ ನಲ್ಲಿ ಸ್ವಲ್ಪ ಉಬ್ಬಿದ್ದು, ಮೆಟಲ್ ಚಾಸ್ಸಿಸ್ ನೋಡಬಹುದು. ಇಲ್ಲಿ ಡಿಜಿಟಲ್ ಡಿಸ್ಪ್ಲೇ ಹಾಗೂ ಫಿಸಿಕಲ್ ಬಟನ್ ಇರುತ್ತದೆ.

Display Features:

Oneplus Watch2 ಡಿಸ್ಪ್ಲೇ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದರಲ್ಲಿ 1.43 ಇಂಚ್ AMOLED ಡಿಸ್ಪ್ಲೇ ನೋಡಬಹುದು. Snapdragon Gen 1 ಪ್ರೊಸೆಸರ್ ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಪ್ರೊಸೆಸರ್ ಹುಡ್ ಹೊಂದಿದೆ. ಗೂಗಲ್ ನ Wear OS ನಲ್ಲಿ ಲಭ್ಯವಿದೆ. ಹಾಗೆಯೇ ಹೆಲ್ತ್ ಗೆ ಸಂಬಂಧಪಟ್ಟ ಫೀಚರ್ಸ್ ಹೊಂದಿದೆ.

Also Read: Techno Park Go 2024: ಹೊಸದಾಗಿ ಬಿಡುಗಡೆಯಾದ ಟೆಕ್ನೋ ಸ್ಪಾರ್ಕ್ ನ ವೈಶಿಷ್ಟ್ಯತೆಯನ್ನು ತಿಳಿಯಿರಿ

Leave a comment