ಲತಾಮಂಗೇಶ್ಕರ್ ಯಾವುದೇ ಪಂದ್ಯಗಳಿಗೂ ಬರದೇ ಇದ್ದರೂ ಕೂಡ ಅವರಿಗಾಗಿಯೇ ಪ್ರತಿ ಪಂದ್ಯದಲ್ಲೂ ಎರಡು ಸೀಟ್ ಕಾದಿರಿಸಿದ್ದು ಯಾಕೆ ಗೊತ್ತಾ??
ಸ್ನೇಹಿತರೆ, ಲತಾ ಮಂಗೇಶ್ಕರ್ ಯಾರಿಗೆ ತಾನೇ ತಿಳಿದಿಲ್ಲ ಹೇಳಿ? ಬರೋಬ್ಬರಿ 25 ವರ್ಷಗಳಿಂದ 36 ಅದಿಕ ಭಾಷೆಗಳಿಗೆ ತಮ್ಮ ಅದ್ಭುತ ಕಂಠದಾನ ಮಾಡುವ ಮೂಲಕ ರಾಷ್ಟ್ರದ ಗಾನಕೋಗಿಲೆ ಎನಿಸಿಕೊಂಡವರು. ಕೇವಲ ಸಿನಿಮಾಗೆ ಸೀಮಿತವಾದ ಹಾಡನ್ನು ಹಾಡದೆ ಗಜಲ್, ದೇಶಪ್ರೇಮಿ ಗೀತೆಗಳು ಹಾಗೂ ಇನ್ನಿತರ.
ಭಾವಗೀತೆಗಳನ್ನು ಹಾಡುವ ಮೂಲಕ ಭಾರತದಾದ್ಯಂತ ಪ್ರಸಿದ್ಧಿಯನ್ನು ಪಡೆದವರು. ಇಂದು ತೊಂಬತ್ತು ವರ್ಷದ ಮುದುಕರಿಂದ ಹಿಡಿದು 9 ವರ್ಷದ ಮಕ್ಕಳು ಕೂಡ ಲತಾ ಮಂಗೇಶ್ವರ್ ಯಾರು ಎಂಬುದನ್ನು ಆಕೆ ಹಾಡಿರುವ ಹಾಡಿನ ಮೂಲಕ ವರ್ಣಿಸುತ್ತಾರೆ.
ಇಂತಹ ಅತ್ಯದ್ಭುತ ಗಾನಕೋಗಿಲೆ ಇಂದು ನಮ್ಮೆಲ್ಲರನ್ನು ಬಿಟ್ಟು ಇಹಲೋಕ ತ್ಯಜಿಸಿ ಸ್ವರ್ಗದಲ್ಲಿ ಸಂಗೀತ ಸಮ್ಮೇಳನ ನಡೆಸಲು ಶುರುಮಾಡಿದ್ದಾರೆ ಅಂದ್ರೆ ತಪ್ಪಾಗುವುದಿಲ್ಲ. ಹಾಗಿದ್ರೆ ಪ್ರತಿ ಪಂದ್ಯದಲ್ಲೂ ಕೂಡ ಲತಾಮಂಗೇಶ್ಕರ್ ಅವರಿಗಾಗಿ ಎರಡು ಸೀಟನ್ನು ಕಾಯುತ್ತಿದ್ದುದು ಯಾಕೆ ಗೊತ್ತಾ? ಇದರ ಹಿಂದಿನ ಕಾರಣ ಏನು ಇಲ್ಲ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಇನ್ನು ಸ್ವತಹಾ ಲತಾ ಮಂಗೇಶ್ಕರ್ ಅವರೇ ಕಾರ್ಯಕ್ರಮಗಳಲ್ಲಿ ಹೇಳಿಕೊಂಡಿರುವ ಹಾಗೆ ಲತಾ ಮಂಗೇಶ್ಕರ್ ಅವರು ಗಾಯಕಿಯಾಗಿದ್ದರು ಕೂಡ ಅವರು ಕ್ರಿಕೆಟ್ ಮೇಲೆ ಅಪಾರ ಆಸಕ್ತಿಯನ್ನು ಹೊಂದಿದ್ದರು. ಅಷ್ಟೇ ಅಲ್ಲದೆ ತಮ್ಮ ನೆಚ್ಚಿನ ಆಟಗಾರ ಸಚಿನ್ ತೆಂಡೂಲ್ಕರ್ ಅಂತ ಕೂಡ ಹೇಳಿಕೊಂಡಿದ್ದರು. ಅಷ್ಟೇ.
ಅಲ್ಲದೆ ನಿಮಗೆಲ್ಲ ತಿಳಿದಿರೋ ಹಾಗೆ 1983 ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ತಂಡ ಮೊದಲ ಬಾರಿಗೆ ವಿಶ್ವಕಪ್ ಗೆಲ್ಲುತ್ತದೆ. ಈ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಉಡುಗೊರೆ ನೀಡಲು ಬಿಸಿಸಿಐನ ಬಳಿ ಹಣ ಇರಲಿಲ್ಲ. ಈ ಸಂದರ್ಭದಲ್ಲಿಯೇ ಲತಾಮಂಗೇಶ್ಕರ್ ಹಾಡನ್ನು ಹಾಡುವ ಮೂಲಕ 20 ಲಕ್ಷ ರೂಪಾಯಿ ಕಲೆ ಹಾಕುತ್ತಾರೆ.
ನಂತರ ಹಣವನ್ನು ವಿಶ್ವಕಪ್ ಗೆದ್ದ ತಂಡಕ್ಕೆ ಉಡುಗೊರೆಯಾಗಿ ನೀಡುವುದಾಗಿ ಹೇಳಿ 20ಲಕ್ಷ ರೂಪಾಯಿಯನ್ನು ಬಿಸಿಸಿಐಗೆ ನೀಡುತ್ತಾರೆ ಲತಾಮಂಗೇಶ್ಕರ್. ಹೀಗಾಗಿಯೇ ಅಂದಿನಿಂದ ಇಂದಿನವರೆಗೂ ಕೂಡ ಲತಾ ಮಂಗೇಶ್ಕರ್ ಅವರಿಗೆ ಪ್ರತಿಯೊಂದು.
ಪಂದ್ಯಕ್ಕೂ ಪ್ರತಿಯೊಂದು ಸ್ಟೇಡಿಯಂನಲ್ಲಿ ಎರಡು ಸೀಟ್ ಗಳನ್ನು ಅವರಿಗಾಗಿ ಆರಿಸಲಾಗುತ್ತದೆ. ಇದು ಅವರ ಸಹಾಯಕ್ಕೆ ನೀಡುತ್ತಿರುವ ಗೌರವ ಅಂತನೇ ಹೇಳಬಹುದು. ಸ್ನೇಹಿತರೆ ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ತಪ್ಪದೆ ನಮಗೆ ಕಮೆಂಟ್ ಮಾಡಿ ತಿಳಿಸಿ ಹಾಗೂ ಈ ಮಾಹಿತಿ ನಿಮಗೆ ಇಷ್ಟವಾದರೆ ಒಂದು ಲೈಕ್ ಮಾಡಿ.