ಗ್ಲೆನ್ ಜೇಮ್ಸ್ ಮ್ಯಾಕ್ಸ್ ವೆಲ್ ಅವರು ಆಸ್ಟ್ರೇಲಿಯಾ ದೇಶದ ಕ್ರಿಕೆಟಿಗ. ಇವರು ಸಾಕಷ್ಟು ಓಡಿಐ ಮತ್ತು ಟ್ವೆಂಟಿ ಟ್ವೆಂಟಿ ಮ್ಯಾಚ್ ಗಳನ್ನು ಆಡಿದ್ದಾರೆ. ಇದರ ಜೊತೆಗೆ ಸಾಕಷ್ಟು ಟೆಸ್ಟ್ ಕ್ರಿಕೆಟ್ ಅನ್ನು ಕೂಡ ಆಡಿದ್ದಾರೆ. ಇನ್ನೂ ಮುಖ್ಯವಾಗಿ ಇವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂದರೆ ಆರ್.ಸಿ.ಬಿ ತಂಡದ ನಂಬಿಕಸ್ಥ ಕ್ರಿಕೆಟಿಗರಾಗಿದ್ದಾರೆ.
ಇವರು ಅಕ್ಟೋಬರ್ 14 1988 ರಂದು ಆಸ್ಟ್ರೇಲಿಯಾದ ಕೀವ್ ನಲ್ಲಿ ಜನಿಸಿದ್ದಾರೆ. ಇವರ ತಂದೆಯ ಹೆಸರು ನೈಲ್ ಮ್ಯಾಕ್ಸ್ ವೆಲ್ ಮತ್ತು ತಾಯಿಯ ಹೆಸರು ಜಾಯ್ ಮ್ಯಾಕ್ಸ್ ವೆಲ್. ಮ್ಯಾಕ್ಸ್ ವೆಲ್ ಅವರು ಇದೀಗ ತಮ್ಮ ಮದುವೆಯ ಸಂಭ್ರಮದಲ್ಲಿ ಇದ್ದಾರೆ. ಇವರು ಮದುವೆಯಾಗುತ್ತಿರುವ ಹುಡುಗಿ ಯಾರು ಗೊತ್ತಾ. ಆಸಕ್ತಿಕರ ವಿಷಯ ಏನಪ್ಪಾ ಎಂದರೆ ಇವರು ನಮ್ಮ ಭಾರತ ದೇಶದ ಹುಡುಗಿಯನ್ನು ಮದುವೆ ಆಗುತ್ತಿದ್ದಾರೆ.
ಹೌದು ಇವರು ತಮ್ಮ ಹಳೆಯ ಸ್ನೇಹಿತೆಯಾದ ವಿನಿ ರಾಮನ್ ಅವರನ್ನು ವಿವಾಹ ಮಾಡಿಕೊಳ್ಳುತ್ತಿದ್ದಾರೆ. ಇವರಿಬ್ಬರ ಮಧ್ಯೆ ಮೊದಲು ಸ್ನೇಹವಿತ್ತು ತದನಂತರ ಪ್ರೀತಿಯಾಗಿ ಬದಲಾಯಿತು. ವಿನಿ ರಾಮನ್ ಅವರ ಮೂಲತಃ ಚೆನ್ನೈ. ಇವರು ಬ್ರಾಹ್ಮಣ ಕುಟುಂಬಕ್ಕೆ ಸೇರಿದ್ದಾರೆ. ಆದರೆ ಪ್ರಸ್ತುತ ವಿನಿ ಅವರು ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ.
ಇವರಿಬ್ಬರು 2013 ರಿಂದ ಪ್ರೀತಿಯ ಅಲೆಯಲ್ಲಿ ತೇಲಾಡುತ್ತಿದ್ದರೆ. ವಿನಿ ಅವರು ಆಸ್ಟ್ರೇಲಿಯಾದಲ್ಲಿ ಮೆಡಿಕಲ್ ಸೈನ್ಸ್ ಅನ್ನು ಓದಿ ಮುಗಿಸಿದ್ದಾರೆ. ಈಗ ಇವರು ಔಷಧಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಬ್ಬರು ಫೆಬ್ರವರಿ 20 2020 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದಾದ ಮೇಲೆ ಅದೇ ವರ್ಷದಲ್ಲಿ ವಿವಾಹ ಮಾಡಿಕೊಳ್ಳಬೇಕಾಗಿತ್ತು.
ಆದರೆ ಕೋವಿಡ್ ಇದ್ದ ಕಾರಣ ತಮ್ಮ ಮದುವೆಯನ್ನು ಮುಂದೂಡಿಕೆ ಮಾಡಿಕೊಂಡರು.
ಈಗ ಇವರಿಬ್ಬರ ಮದುವೆ ಮುಂದಿನ ತಿಂಗಳು ಮಾರ್ಚ್ 27 ರಂದು ಆಗಲಿದೆ. ಇನ್ನೂ ಇವರ ಮದುವೆಯ ಆಹ್ವಾನ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಾ ಕಡೆ ತುಂಬಾನೇ ವೈರಲ್ ಆಗುತ್ತಿದೆ. ಇದು ತಮಿಳು ಭಾಷೆಯಲ್ಲಿ ಇದ್ದು ಇವರಿಬ್ಬರೂ ಹಿಂದೂ ಸಂಪ್ರದಾಯದಲ್ಲಿ ಮೇಲ್ಬೋರ್ನ್ ನಲ್ಲಿ ಮದುವೆಯಾಗಲಿದ್ದಾರೆ. ಜೇಮ್ಸ್ ಮ್ಯಾಕ್ಸ್ ವೆಲ್ ಮತ್ತು ವಿನಿ ರಾಮನ್ ಅವರ ಹೊಸ ದಾಂಪತ್ಯ ಜೀವನಕ್ಕೆ ಎಲ್ಲರೂ ಶುಭ ಕೋರೋಣ…..