ಆರ್ ಸಿ ಬಿ ಫ್ಯಾನ್ಸ್ ಬಗ್ಗೆ ನಮ್ಮ ಕೆ ಎಲ್ ರಾಹುಲ್ ಇಟ್ಟಿರುವ ಅಭಿಮಾನ ಎಂತಹುದ್ದು ಗೊತ್ತೇ ? ಆರ್ ಸಿ ಬಿ ಹಾಗೂ ಆರ್ ಸಿ ಬಿ ಫ್ಯಾನ್ಸ್ ಬಗ್ಗೆ ಅವರು ಏನು ಹೇಳಿದ್ದಾರೆ ತಿಳಿಯೋಣ ಬನ್ನಿ..!!
ಇನ್ನೇನು ಐಪಿಎಲ್ ಹಬ್ಬ ಶುರುವಾಗಲಿದ್ದು ಕ್ರಿಕೆಟ್ ಪ್ರೇಮಿಗಳು ಕ್ರಿಕೆಟ್ ಹಬ್ಬವನ್ನು ಸಂಭ್ರಮಿಸಲು ಸಜ್ಜಾಗಿದ್ದಾರೆ. ಐಪಿಎಲ್ ಅಂದರೆ ಕೇವಲ ಅದೊಂದು ಆಟವಾಗಿ ಉಳಿದಿಲ್ಲ ಬದಲಾಗಿ ಪ್ರತಿಯೊಂದು ತಂಡದ ಅಭಿಮಾನಿಗಳಲ್ಲಿ ಅದೊಂದು ಪ್ರತಿಷ್ಠೆಯ ಮಾತಾಗಿರುತ್ತದೆ.
ತಮ್ಮ ತಮ್ಮ ನೆಚ್ಚಿನ ತಂಡಗಳನ್ನು ಬೆಂಬಲಿಸುತ್ತಾ ತಮ್ಮ ನೆಚ್ಚಿನ ಆಟಗಾರರ ಆಟವನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಈಗಾಗಲೇ ಪ್ರತಿಯೊಂದು ತಂಡಗಳು ಅಭ್ಯಾಸ ಶುರು ಮಾಡಿದ್ದು ಕಪ್ ಎತ್ತಿಹಿಡಿಯಬೇಕೆಂಬ ಕನಸಿನೊಂದಿಗೆ ಕ್ರೀಡಾಂಗಣಕ್ಕೆ ಹೆಜ್ಜೆ ಇಡಲಿವೆ. ಮಾರ್ಚ್ 22 ರಿಂದ ಆರಂಭವಾಗುವ ಐಪಿಲ್ ಹಬ್ಬಕ್ಕಾಗಿ ಅಭಿಮಾನಿಗಳು ಕಾತರರಿಂದ ಕಾಯುತ್ತಿದ್ದಾರೆ.
ಇನ್ನು ಈ ಬಾರಿಯ ಐಪಿಎಲ್ ಮೆಗಾ ಹರಾಜು ಸಾಕಷ್ಟು ಕುತೂಹಲದಿಂದ ಕೂಡಿತ್ತು. ತಮ್ಮ ತಂಡದ ಆಟಗಾರರು ತಮ್ಮ ತಂಡದಿಂದ ದೂರಾಗಿ ಬೇರೊಂದು ತಂಡದ ಪಾಲಾಗಿದ್ದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಆದರೂ ಹೊಸ ಆಟಗಾರರ ಆಗಮನ ಕೂಡ ಅಷ್ಟೇ ಸಂತೋಷವನ್ನು ಸಹ ನೀಡಿದೆ.
ಇನ್ನು ಆರ್ ಸಿ ಬಿ ತಂಡದ ವಿಷಯಕ್ಕೆ ಬಂದರೆ ಈ ಬಾರಿ ಆರ್ ಸಿ ಬಿ ಅಭಿಮಾನಿಗಳಿಗೆ ಆದ ಬೇಸರ ಅಷ್ಟಿಷ್ಟಲ್ಲ. ಒಂದು ಕಡೆ ವಿರಾಟ್ ನಾಯಕತ್ವ ತೊರೆದ ಬೇಸರ ಒಂದು ಕಡೆಯಾದರೆ ಎಬಿಡಿ ಇನ್ನುಮುಂದೆ ಕಣಕ್ಕಿಳಿಯುವುದಿಲ್ಲ ಅವರ ಆಟವನ್ನು ನೋಡಲಾಗುವುದಿಲ್ಲ ಎಂಬ ಬೇಸರದ ನಡುವೆಯೇ ನೆಚ್ಚಿನ ಆಟಗಾರರಾದ ದೇವದತ್ ಪಡಿಕ್ಕಲ್ ಹಾಗೂ ಚಾಹಲ್ ಅವರು ಬೇರೊಂದು ತಂಡದ ಪಾಲಾಗಿದ್ದು ಬೇಸರ ತಂದಿದೆ.
ವಿರಾಟ್ ನಾಯಕತ್ವ ತೊರೆದ ನಂತರ ಆರ್ ಸಿ ಬಿ ನಾಯಕ ಯಾರಾಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇತ್ತು ಕೆಲವರ ಊಹೆಯಂತೆ ಡುಪ್ಲೆಸಿಸ್ ಅವರಿಗೆ ಆರ್ ಸಿ ಬಿ ನಾಯಕತ್ವದ ಹೊಣೆ ಹೊರಿಸಿದೆ. ಇದರೊಂದಿಗೆ ಆರ್ ಸಿ ಬಿ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಡುಪ್ಲೆಸಿಸ್ ಹೊತ್ತಿದ್ದಾರೆ.
ಇನ್ನು ಎಲ್ಲರಿಗೂ ತಿಳಿದಿರುವಂತೆ ಆರ್ ಸಿ ಬಿ ಕಪ್ ಗೆದ್ದಿಲ್ಲವಾದರೂ ಈ ತಂಡದ ಮೇಲಿರುವ ಕ್ರೇಜ್ ಹೆಚ್ಚಾಗಿಯೇ ಇದೆ. ಇನ್ನು ಇತ್ತೀಚೆಗೆ ಕೆ ಎಲ್ ರಾಹುಲ್ ಅವರನ್ನು ಆರ್ ಸಿ ಬಿ ಅಭಿಮಾನಿಗಳ ಬಗ್ಗೆ ಕೇಳಿದಾಗ ಆರ್ ಸಿ ಬಿ ಅಭಿಮಾನಿಗಳ ಬಗ್ಗೆ ಕೆ ಎಲ್ ರಾಹುಲ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ನಾನು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿಯೇ. ಇದು ನನ್ನ ತವರು. ಚಿಕ್ಕಂದಿನಿಂದಲೂ ಸಹ ಈ ಜನರ ಮಧ್ಯೆಯೇ ನಾನು ಆಡಿ ಬೆಳೆದಿದ್ದೇನೆ ನನಗೆ ಇಲ್ಲಿನ ಜನರಿ ಬಹಳಷ್ಟು ಪ್ರೀತಿ ಕೊಟ್ಟು ಪ್ರೋತ್ಸಾಹಿಸಿದ್ದಾರೆ. ನಾನು ಎರಡು ವರ್ಷ ಆರ್ ಸಿ ಬಿ ತಂಡದ ಪರ ಕ್ರಿಕೆಟ್ ಆಡಿದ್ದೇನೆ ಆಗಲೂ ಈ ಜನ ಕೊಟ್ಟ ಪ್ರೀತಿಯನ್ನು ನಾನು ಮರೆತಿಲ್ಲ. ನಾನು ಯಾವ ತಂಡದಲ್ಲಿ ಆಡಿದರೂ ಸಹ ಇಲ್ಲಿನ ಜನ ನನ್ನ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ.
ಪಂಜಾಬ್ ತಂಡದಲ್ಲಿ ನಾನು ಆಡುವಾಗಲೂ ಸಹ ಇಲ್ಲಿನ ಜನ ನನ್ನನ್ನು ಬೆಂಬಲಿಸುವುದನ್ನು ಮರೆಯಲಿಲ್ಲ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇನ್ನು ಈ ಬಾರಿ ಲಕ್ನೋ ಪರ ಆಡುತ್ತಿರುವ ವಿಷಯದ ಬಗ್ಗೆ ಕೇಳಿದಾಗ ನಾವು ಅಂದುಕೊಂಡತೆಯೆ ನಾವು ಆಟಗಾರರನ್ನು ಖರೀದಿಸಿದ್ದು ಉತ್ಸಾಹದಿಂದ ಕಣಕ್ಕಿಳಿಯಲಿದ್ದು ಕಪ್ ಎತ್ತಿ ಹಿಡಿಯುವ ವಿಶ್ವಾಸವಿದೆ ಎಂದು ಹೇಳಿದರು…..