ಸಾಮಾನ್ಯವಾಗಿ ನಾವು ನೀವೆಲ್ಲರೂ ನಮ್ಮ ನಿದ್ರೆಯಲ್ಲಿ ಕಾಣುವ ಕನಸ್ಸು ಬೆಳಗಿನ ಜಾವ ಅಷ್ಟರಲ್ಲಿ ಮರೆತು ಹೋಗಿರುತ್ತದೆ. ಅಥವಾ ಅದು ಅಸ್ಪಷ್ಟ ನೆನಪಾಗಿ ಉಳಿಯುತ್ತದೆ ಅಷ್ಟೇ. ಆದರೆ ಕೆಲವೊಮ್ಮೆ ನಾವು ಕಾಣುವ ಕನಸು ದಿನವಿಡೀ ನಮ್ಮ ತಲೆಯಲ್ಲಿ ಓಡುತ್ತಲೇ ಇರುತ್ತದೆ. ನಮ್ಮ ಕನಸಿನಲ್ಲಿ ದೇವರು ಬಂದರೆ ಅದನ್ನು ಸಹ ಅಶುಭ ಎಂದು ಪರಿಗಣಿಸಲಾಗುವುದು. ಹಲವು ಬಾರಿ ಕೆಲವೊಮ್ಮೆ ರಾತ್ರಿ ಸಮಯದಲ್ಲಿ ಕನಸಿನಲ್ಲಿ ದೇವರನ್ನು ನೋಡುವುದು ಕೆಲವು ಸೂಚನೆಗಳನ್ನು ಸಹ ನೀಡುತ್ತದೆ. ಕನಸಿನಲ್ಲಿ ವಿವಿಧ ದೇವತೆಗಳ ದರ್ಶನವು ವಿವಿಧ ರೀತಿಯ ಅರ್ಥಗಳನ್ನು ಹೊಂದಿರುತ್ತದೆ. ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ದೇವರುಗಳನ್ನು ನೋಡುವುದರ ಅರ್ಥ ಏನೆಂಬುದು ಇಲ್ಲಿ ತಿಳಿಯೋಣ ಬನ್ನಿ.
ಕನಸಿನಲ್ಲಿ ಶಿವಲಿಂಗ ಕಂಡರೆ ಅರ್ಥವೇನು: ಶಿವಾಲಯಕಾರಕ ಅಂದರೆ ಈ ಸೃಷ್ಟಿಯನ್ನು ಕೊನೆಯಲ್ಲಿ ಅವರೊಳಗೆ ಐಕ್ಯವಾಗಿಸಿಕೊಳ್ಳುವವರು ಪರಮೇಶ್ವರ. ಮನುಷ್ಯ ಸತ್ತ ನಂತರ ಶಿವನೊಳಗೆ ಐಕ್ಯವಾಗುತ್ತಾನೆ ಎಂದು ಹೇಳುತ್ತಾರೆ. ಅಂದರೆ ನಾವು ಎಲ್ಲಾ ರೀತಿಯ ಬಂಧನಗಳನ್ನು ತೊರೆದ ಬಳಿಕ ಸೇರುವುದು ಶಿವನ ಪಾದದ ಬಳಿ. ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಶಿವಲಿಂಗವನ್ನು ನೋಡಿದರೆ ನೀವು ಅನುಭವಿಸುತ್ತಿರುವ ಕಷ್ಟವೆಲ್ಲ ಪರಿಹಾರವಾಗುತ್ತದೆ ಎಂದು ನೀವು ಅಂದುಕೊಳ್ಳಿ. ಇದರ ಜೊತೆಗೆ ನೀವು ಹಣ ಮತ್ತು ಸಾಕಷ್ಟು ಮನ್ನಣೆಯನ್ನು ಪಡೆಯಲಿದ್ದೀರಿ ಎಂದು ಅರ್ಥ. ಮತ್ತೊಂದು ಕಡೆ ನೀವು ನಿಮ್ಮ ಕನಸಿನಲ್ಲಿ ಶಿವನನ್ನು ನೋಡಿದರೆ ನಿಮಗೆ ಶೀಘ್ರದಲ್ಲಿಯೇ ಒಳ್ಳೆಯ ದಿನಗಳು ಬರುತ್ತಿವೆ ಒಳ್ಳೆಯದಾಗುತ್ತದೆ ಎಂದು ಇದರ ಅರ್ಥ ಆಗಿರುತ್ತದೆ.
ಕನಸಿನಲ್ಲಿ ದುರ್ಗಾದೇವಿ ಕಂಡರೆ ಅರ್ಥವೇನು: ದುರ್ಗಾದೇವಿಯು ಅಸುರ ಸಂಹಾರ ಮಾಡುವಾಗ ಚಂಡಿಯಂತೆ ದುಷ್ಟ ಸಂಹಾರದ ಬಳಿಕ ಸೌಮ್ಯಳಂತೆ ಬದಲಾಗುತ್ತಾರೆ. ದುರ್ಗೆಯಲ್ಲಿ ನಾವು ಹಲವಾರು ಲಕ್ಷಣಗಳನ್ನು ಕಾಣಬಹುದು. ಸ್ವಪ್ನ ಶಾಸ್ತ್ರದ ಪ್ರಕಾರ ದುರ್ಗಾದೇವಿಯು ನಿಮ್ಮ ಕನಸಿನಲ್ಲಿ ಕೆಂಪು ವಸ್ತ್ರದಲ್ಲಿ ಕಾಣಿಸಿಕೊಂಡರೆ ನಿಮ್ಮ ಜೀವನದಲ್ಲಿ ಏನಾದರೂ ಶುಭ ಸಂಭವಿಸಲಿದೆ ಎಂದು ಅರ್ಥ. ಜೀವನದಲ್ಲಿ ಎಲ್ಲಿ ನಿಮ್ಮ ಅದೃಷ್ಟ ಬರುತ್ತದೆ ಅದು ನಿಮ್ಮ ಕುಟುಂಬ ಜೀವನವಾಗಿರಲಿ ಅಥವಾ ವೃತ್ತಿ ಜೀವನವಾಗಿರಲಿ ಆದರೆ ನೀವು ದುರ್ಗಾದೇವಿಯ ಜೊತೆ ಸೇರಿ ಘರ್ಜಿಸುವ ಸಿಂಹವನ್ನು ಸಹ ನೋಡಿದರೆ ಅದು ನಿಮಗೆ ಬರುವ ಕೆಲವು ಸಮಸ್ಯೆಯ ಸೂಚನೆಯನ್ನು ನೀಡುತ್ತದೆ. ಉದಾಹರಣೆಗೆ ಮನೆಯಲ್ಲಿ ಅಥವಾ ಹೊರಗಡೆ ಗಲಾಟೆಯಾಗುತ್ತದೆ ಎಂಬುದನ್ನು ಇದು ಸೂಚಿಸುತ್ತದೆ.
ಕನಸಿನಲ್ಲಿ ಶ್ರೀರಾಮಚಂದ್ರ ಕಂಡರೆ ಅರ್ಥವೇನು: ಶ್ರೀ ಮಹಾವಿಷ್ಣುವಿನ ಅವತಾರವಾದ ಶ್ರೀ ರಾಮ ಅಯೋಧ್ಯೆಯ ರಾಜವಂಶದಲ್ಲಿ ಜನಿಸಿದವರು. ಪಟ್ಟಾಭಿಷೇಕವಾಗಿ ಅಯೋದ್ಯ ರಾಜ್ಯವನ್ನು ಆಳ ಬೇಕಾದ ಸಮಯದಲ್ಲಿ ತಂದೆಯ ಜವಾಬ್ದಾರಿಯನ್ನು ಪೂರ್ಣಗೊಳಿಸಲು ರಾಜ್ಯ ತೊರೆದು ವನವಾಸಕ್ಕೆ ಪ್ರಯಾಣ ಬೆಳೆಸುತ್ತಾರೆ. ಸೀತಾಮಾತೆಯನ್ನು ರಾವಣನು ಅಪಹರಿಸಿದಾಗ ರಾವಣ ಸುರನನ್ನು ಕೊಂದು ಸೀತಾದೇವಿಯನ್ನು ಕರೆತರುವ ಮೂಲಕ ಗಂಡನ ಜವಾಬ್ದಾರಿಯನ್ನು ಪೂರ್ಣಗೊಳಿಸುತ್ತಾರೆ. ಹೀಗೆ ಜೀವನದ ಉದ್ದಕ್ಕೂ ಅವರ ಜವಾಬ್ದಾರಿಯನ್ನು ಶ್ರದ್ಧೆಯಿಂದ ಮಾಡಿದವರು ಶ್ರೀರಾಮ. ಇನ್ನು ನೀವು ಭಗವಾನ್ ಶ್ರೀ ರಾಮನನ್ನು ಕನಸಿನಲ್ಲಿ ಕಂಡರೆ ನಿಮಗೆ ಜವಾಬ್ದಾರಿ ಹೆಚ್ಚಾಗುತ್ತಿದೆ ಎಂದು ಅರ್ಥ ಸೂಚಿಸುತ್ತದೆ. ಅಂತಹ ಕನಸು ನಿಮಗೆ ಪ್ರಗತಿಯನ್ನು ಸಹ ತರುತ್ತದೆ ಎಂದು ಹೇಳಲಾಗುತ್ತದೆ.
ಕನಸಿನಲ್ಲಿ ಶ್ರೀ ಕೃಷ್ಣ ಕಂಡರೆ ಅರ್ಥವೇನು: ಶ್ರೀ ಕೃಷ್ಣ ಪರಮಾತ್ಮ ಸ್ನೇಹಜೀವಿ, ಎಲ್ಲರೊಂದಿಗೆ ಪ್ರೀತಿಯಿಂದ ಜೀವಿಸಿದವರು ಕೃಷ್ಣನನ್ನು ಪ್ರೀತಿಸದವರು ಯಾರು ಇರುವುದಿಲ್ಲ. ಪ್ರೀತಿಗೆ ಮತ್ತೊಂದು ಹೆಸರು ಶ್ರೀ ಕೃಷ್ಣ ಎಂದು ಹೇಳಬಹುದು. ಹಲವಾರು ಜನರ ಮನಸ್ಸನ್ನು ಕದ್ದ ಶ್ರೀ ಕೃಷ್ಣ ನಿಮ್ಮ ಕನಸಿನಲ್ಲಿ ಕಂಡರೆ ನಿಮ್ಮ ಜೀವನದಲ್ಲಿ ನಿಮಗೆ ಪ್ರೀತಿಯ ಹೂವುಗಳು ಅರಳುತ್ತೇವೆ ಎಂದು ಅರ್ಥ. ಅದರೊಂದಿಗೆ ಇದು ಕೆಲವು ಯಶಸ್ಸಿನ ಸಂಕೇತವನ್ನು ಸಹ ನಿಮಗೆ ಸೂಚಿಸುತ್ತದೆ. ಏಕೆಂದರೆ ಶ್ರೀಕೃಷ್ಣ ಕೈ ಇಟ್ಟಂತಹ ಪ್ರತಿಯೊಂದು ಕೆಲಸದಲ್ಲೂ ಯಶಸ್ಸನ್ನು ಕಂಡವರು.
ಕನಸಿನಲ್ಲಿ ಲಕ್ಷ್ಮಿ ದೇವಿ ಕಂಡರೆ ಅರ್ಥವೇನು: ಈಗಿನ ಆಧುನಿಕ ಯಾಂತ್ರಿಕ ಪ್ರಪಂಚದಲ್ಲಿ ಹಣದ ಅವಶ್ಯಕತೆ ಪ್ರತಿಯೊಬ್ಬರಿಗೂ ಬಹಳ ಮುಖ್ಯ ಎಂದು ಹೇಳಬಹುದು. ಹಣ ಬೇಕು ಎನ್ನುವ ಪ್ರತಿಯೊಬ್ಬ ವ್ಯಕ್ತಿಯು ಲಕ್ಷ್ಮಿ ಮೊರೆ ಹೋಗಲೇಬೇಕು. ಸ್ವಪ್ನ ಶಾಸ್ತ್ರದ ಪ್ರಕಾರ ತಾಯಿ ಲಕ್ಷ್ಮಿ ದೇವಿಯು ನಿಮ್ಮ ಕನಸಿನಲ್ಲಿ ಕಮಲದ ಹೂವಿನ ಮೇಲೆ ಕುಳಿತುಕೊಂಡು ಇರುವ ಹಾಗೆ ನಿಮಗೆ ಕನಸು ಕಂಡರೆ ಆ ವ್ಯಕ್ತಿಯು ಅಪಾರ ಸಂಪತ್ತನ್ನು ಪಡೆಯುತ್ತಾನೆ. ಅದೇ ಸಮಯದಲ್ಲಿ ಒಬ್ಬ ಉದ್ಯಮಿ ಅಂತಹ ಕನಸನ್ನು ಕಂಡರೆ ಅವನು ಸಾಕಷ್ಟು ಹಣವನ್ನು ಗಳಿಸಲಿದ್ದಾನೆ ಎಂದು ಇದು ಸೂಚಿಸುತ್ತದೆ.
ಕನಸಿನಲ್ಲಿ ಶ್ರೀ ಮಹಾವಿಷ್ಣು ಕಂಡರೆ ಅರ್ಥವೇನು: ಶ್ರೀ ಮಹಾವಿಷ್ಣು ಸ್ಥಿತಿ ಕಾರಕರು. ಅಂದರೆ ಮನುಷ್ಯನ ಏಳಿಗೆಯನ್ನು ರೂಪಿಸುವವರು ಎಂದರ್ಥ. ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಶ್ರೀ ಭಗವಾನ್ ವಿಷ್ಣು ವನ್ನು ಕಂಡರೆ ನಿಮ್ಮ ಅದೃಷ್ಟವು ಒಳೆಯಲು ಆರಂಭವಾಗುತ್ತದೆ. ನೀವು ಅತಿ ಶೀಘ್ರದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಕಾಣುತ್ತೀರಿ ಎಂದು ಇದರ ಅರ್ಥ ಸೂಚಿಸುತ್ತದೆ..