ಸ್ನೇಹಿತರೆ ನಮ್ಮ ಹಿಂದೂ ಪುರಾಣಗಳ ಪ್ರಕಾರ ಯಾವ ಪಕ್ಷಿಗೂ ನೀಡದೇ ಇರುವಂತಹ ಸ್ಥಾನವನ್ನು ನಾವು ಕಾಗೆಗೆ ನೀಡಿದ್ದೇವೆ. ಕಾಗೆ ಎಂಬುದು ಬರಿ ಪಕ್ಷಿಯಲ್ಲ ಅದು ನಮ್ಮ ಹಿರಿಯರು ಎಂದು ಕೂಡ ನಾವು ಭಾವಿಸುತ್ತೇವೆ. ಅದಕ್ಕಾಗಿಯೇ ಮನೆಯಲ್ಲಿ ಹಿರಿಯರು ಯಾರಾದರೂ ಸತ್ತುಹೋಗಿದ್ದರೆ ಮೂರನೇ ದಿನದಿಂದ ಹಿಡಿದು 9ನೇ ದಿನದವರೆಗೂ ಪಿಂಡವನ್ನು ಇಡಲಾಗುತ್ತದೆ. ಅಷ್ಟೇ ಅಲ್ಲದೆ ಆ ಪಿಂಡವನ್ನು ಕಾಗೆ ಬಂದು ತಿಂದರೆ ತಮ್ಮ ಹಿರಿಯರು ಯಾವುದೇ ರೀತಿಯ ಕಷ್ಟ ಇಲ್ಲದೆ ನರಕದಲ್ಲಾದರೂ ಸಹ ಸುಖವಾಗಿ ಬಾಳುತ್ತಾರೆ ಎಂಬ ಪ್ರತಿತಿಯಿದೆ.
ಸ್ನೇಹಿತರೆ ನಮ್ಮ ಮನೆಗಳಲ್ಲಿ ಯಾರಾದರೂ ಸತ್ತು ಹೋದರೆ ಅವರಿಗೆ ಪಿಂಡ ಪ್ರಧಾನವನ್ನು ಮಾಡುವ ಆಚಾರ ಇವತ್ತಿನದಲ್ಲ ನಮ್ಮ ಮುತ್ತತಾ ಹಾಗೂ ಅವರ ತಾತನ ಕಾಲದಿಂದಲೂ ಬಂದಂತಹ ಒಂದು ಸಂಪ್ರದಾಯವಾಗಿದೆ. ಒಂದು ವೇಳೆ ನಾವು ಇಟ್ಟಂತಹ ಪಿಂಡವನ್ನು ಕಾಗೆಗಳು ಬಂದು ತಿನ್ನದಿದ್ದರೆ ಅವರಿಗೆ ಇನ್ನೂ ಏನೋ ಆಸೆ ಇದೆ ಅದು ನೆರವೇರಿಲ್ಲ ಎಂಬ ಅರ್ಥವನ್ನು ಸೂಚಿಸುತ್ತದೆ. ಮುಖ್ಯವಾಗಿ ನಾವು ಕಾಗೆಯನ್ನು ಶನಿ ದೇವರ ಸ್ವರೂಪ ಎಂದು ನಂಬಲಾಗುತ್ತದೆ. ಆದ್ದರಿಂದಲೇ ಕಾಗೆಯನ್ನು ಪೂಜಿಸಿದರು ಸಹ ಶನಿ ದೇವರು ನಮಗೆ ಕರುಣಿಸುತ್ತಾನೆ ಎಂದು ತಿಳಿಯುತ್ತೇವೆ.
ರಾಮಾಯಣದ ಪ್ರಕಾರ ರಾವಣ ಬ್ರಹ್ಮನನ್ನು ನವಗ್ರಹದಲ್ಲಿ ಬಂಧಿಸಲು ಯಮ ಬಂದಾಗ ರಾವಣನನ್ನು ನೋಡಿ ಹೆದರಿದ ಯಮ ಅಲ್ಲೇ ಹತ್ತಿರದಲ್ಲಿ ಇದ್ದ ಕಾಗೆಯನ್ನು ಸಹಾಯ ಕೇಳುತ್ತಾನೆ. ಆಗ ಕಾಗೆಯು ತನ್ನ ದೇಹದೊಳಕ್ಕೆ ಬಂದು ಸೇರಿಕೋ ಎಂದುಯಮನಿಗೆ ಹೇಳಿದಾಗ ಯಮನು ಬಂದು ಸೇರಿಕೊಂಡು ಸೇರಿಕೊಳ್ಳುತ್ತಾನೆ ಆಗ ಕಾಗೆಯೂರಿ ಯಮನನ್ನು ರಕ್ಷಿಸುತ್ತದೆ. ಆ ಸಂದರ್ಭದಲ್ಲಿ ಕಾಗೆಗೆ ಒಂದು ವರವನ್ನು ನೀಡುತ್ತಾನೆ. ಯಾರಾದರೂ ಹಿರಿಯರು ಸತ್ತು ಹೋದರೆ ಪಿಂಡಗಳ ರೂಪದಲ್ಲಿ ನಿನಗೆ ಆಹಾರವನ್ನು ನೀಡುತ್ತಾರೆ ಎಂದು ಪ್ರತೀತಿ ಇದೆ. ಅಷ್ಟೇ ಅಲ್ಲದೆ ಕಾಗೆಯೂ ಮಾಡುವ ಒಂದೊಂದು ಕೆಲಸದಿಂದಲೂ ಸಹ ಒಂದೊಂದು ಕಾರಣವನ್ನು ನಮ್ಮ ಹಿರಿಯರು ಹೇಳಿದ್ದಾರೆ ಅವು ಯಾವು ಎಂದರೆ
ಒಂದು ವೇಳೆ ಕಾಗೆಯು ಏನಾದರೂ ನಿಮ್ಮ ಮನೆಯಲ್ಲಿ ಕಿರುಚಿದರೆ ಅಥವಾ ಬಂದು ಮುಟ್ಟಿದರೆ ಹಾಗೆಯೇ ಹಾರಿ ಹೋದರೆ ಅದು ನಿಮಗೆ ಕೆಟ್ಟದ್ದು ಎಂದು ಸೂಚನೆಯನ್ನು ನೀಡುತ್ತದೆ. ಒಂದು ವೇಳೆ ನೀವು ಏನಾದರೂ ಕೆಲಸದ ಮೇರೆಗೆ ಹೊರಗೆ ಹೋಗುತ್ತಿದ್ದರೆ ಕಾಗೆಯು ನಿಮ್ಮ ಬಳಿ ಬಂದು ಗಟ್ಟಿಯಾಗಿ ಕಿರುಚಿದರೆ ಆ ಕೆಲಸವು ಯಾವುದೇ ರೀತಿಯ ನಿರ್ವಿಘ್ನವಿಲ್ಲದೆ ಜಯವಾಗುತ್ತದೆ ಎಂದು ಅರ್ಥ. ನಂತರ ನೀರು ತುಂಬಿದ ಕೊಡದಲ್ಲಿ ಏನಾದರೂ ಅಥವಾ ಕೊಡದ ಮೇಲೆ ಏನಾದರೂ ಕಾಗೆಯನ್ನು ನೀವು ನೋಡಿದರೆ ನೀವು ಅತ್ಯಂತ ಬೇಗ ಧನವಂತರಾಗುತ್ತೀರಾ ಎಂದು ಅರ್ಥ.
ಒಂದು ವೇಳೆ ಬಾಯಿಂದ ಏನಾದರೂ ಕಚ್ಚಿಕೊಂಡು ಹೋಗುವುದನ್ನು ನೋಡಿದರೆ ಅದು ಅಶುಭ ಸಂಕೇತ ಎಂದು. ನಂತರ ಒಂದು ವೇಳೆ ಬಾಯಿಯಿಂದ ಮೂಳೆಯನ್ನು ಅಥವಾ ಮಾಂಸವನ್ನು ಕಚ್ಚಿಕೊಂಡು ಹೋಗುತ್ತಿದ್ದು ಒಬ್ಬ ಮನುಷ್ಯನ ಮೇಲೆ ಹಾಕಿದರೆ ಅವನು ಹತ್ತಿರದಲ್ಲೇ ಸಾಯುತ್ತಾನೆ. ಅಷ್ಟೇ ಅಲ್ಲದೆ ಹೆಂಗಸರ ಮೈಮೇಲೆ ಅಥವಾ ತಲೆಯ ಮೇಲೆ ಕಾಗೆಯು ಹಾರಾಡುತ್ತಿದ್ದರೆ ಅವರ ಗಂಡನಿಗೆ ಹತ್ತಿರದಲ್ಲೇ ಏನೋ ಅಶುಭ ನಡೆಯುತ್ತದೆ ಅಥವಾ ಅನಾರೋಗ್ಯಕ್ಕೆ ಒಳಗಾಗುತ್ತಾನೆ ಎಂದು ಅರ್ಥ ನೀಡುತ್ತದೆ.ನೋಡಿದಿರಲ್ಲ ಸ್ನೇಹಿತರೆ ಒಂದು ಕಾಗೆಯು ನಮಗೆ ಎಷ್ಟು ಸೂಚನೆಗಳನ್ನು ನೀಡುತ್ತದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.