Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ವಿಶ್ವದ ಏಕೈಕ ಜೀವಂತ ಶಿವಲಿಂಗ!! ಪರಮಾತ್ಮನ ಲೀಲೆ ತಿಳಿದರೆ ಖಂಡಿತ ನೀವೇ ಈ ಜಾಗಕ್ಕೆ ಭೇಟಿ ನೀಡುತ್ತೀರಾ?!

0

ನಮ್ಮ ಭಾರತವು ಸಾಕಷ್ಟು ವಿಸ್ಮಯಗಳು ಮತ್ತು ಇತಿಹಾಸಗಳನ್ನು ತುಂಬಿದೆ. ನಮ್ಮ ಭಾರತದ ಹಿಂದಿನ ಪುರಾಣಗಳಲ್ಲಿ ಸಾಕಷ್ಟು ರಹಸ್ಯಗಳಿವೆ. ಈ ರೀತಿಯ ರಹಸ್ಯಗಳು ಬೇರೆ ಎಲ್ಲೂ ಕೂಡ ಸಿಗುವುದಿಲ್ಲ. ಇದರ ಜೊತೆಗೆ ಸಾಕಷ್ಟು ವಿಸ್ಮಯಗಳಿರುವ ದೇವಸ್ಥಾನಗಳು ಕೂಡ ನಮ್ಮ ಭಾರತದಲ್ಲಿ ಇವೆ. ಅದರಲ್ಲಿ ತುಂಬ ರೋಚಕ ಮತ್ತು ವಿಸ್ಮಯಕಾರಿ ಆಗಿರುವ ಶಿವಲಿಂಗ ದೇವಸ್ಥಾನದ ಬಗ್ಗೆ ತಿಳಿಯೋಣ.

ಈ ಶಿವಲಿಂಗ ದೇವಸ್ಥಾನದ ಬಗ್ಗೆ ನೀವು ಕೇಳಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಏಕೆಂದರೆ ಈ ದೇವಾಲಯದಲ್ಲಿರುವ ಶಿವಲಿಂಗವು ಪ್ರತಿ ದಿನ ಸ್ವಲ್ಪ ಸ್ವಲ್ಪ ಬೆಳೆಯುತ್ತದೆ. ಹೌದು ಈ ಶಿವಲಿಂಗ ವಿಶ್ವದ ಏಕೈಕ ಜೀವಂತ ಶಿವಲಿಂಗವಾಗಿದೆ. ಸಾಮಾನ್ಯವಾಗಿ ಎಲ್ಲರಿಗೂ ಬರುವ ಪ್ರಶ್ನೆ ಏನೆಂದರೆ ಕಲ್ಲುಗಳು ಬೆಳೆಯುತ್ತದಾ ಎಂದು. ಹೌದು ಈ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.

ಈ ಏಕೈಕ ಜೀವಂತ ಶಿವಲಿಂಗ ದೇವಸ್ಥಾನವು ನಮ್ಮ ಭಾರತದ ಮಧ್ಯಪ್ರದೇಶ ರಾಜ್ಯದ ಕಜರಾಹೋ ಎನ್ನುವ ಊರಿನಲ್ಲಿ ಇದೆ. ಹೌದು ಇದು ಮಾತಂಗೇಶ್ವರ ದೇವಸ್ಥಾನವಾಗಿದ್ದು ಈ ದೇವಾಲಯದ ಗರ್ಭ ಗುಡಿಯಲ್ಲಿರುವ ಲಿಂಗವೇ ಜೀವಂತ ಶಿವಲಿಂಗ. ಇಲ್ಲಿಯವರೆಗೂ ಅಂದರೆ ಈ ವರ್ಷಕ್ಕೆ ಶಿವಲಿಂಗದ ಎತ್ತರ 9 ಅಡಿ ಆಗಿದೆ.

ಇನ್ನೂ ಇತಿಹಾಸದ ಪ್ರಕಾರ ನೋಡಿದರೆ ಈ ಶಿವಲಿಂಗ ಭೂಮಿಯ ಮೇಲೆ ಎಷ್ಟು ಅಡಿ ಎತ್ತರವಿದೆ ಅಷ್ಟೇ ಅಡಿ ಕೂಡ ಭೂಮಿಯ ಒಳಗೆ ಸೇರಿಕೊಂಡಿದೆ ಎಂದು ಹೇಳಲಾಗಿದೆ. ಅಲ್ಲಿನ ಪೂಜಾರಿಗಳು ಮತ್ತು ಜನರ ಪ್ರಕಾರ ಈ ಶಿವಲಿಂಗವು ಪ್ರತಿವರ್ಷ 1 ಇಂಚು ಎತ್ತರ ಬೆಳೆಯುತ್ತದೆ ಎಂದು ಹೇಳಲಾಗಿದೆ.

ಪ್ರತಿ ವರ್ಷ ಶಿವರಾತ್ರಿ ಹಬ್ಬದ ಹಿಂದಿನ ದಿನದಂದು ಈ ಶಿವಲಿಂಗದ ಎತ್ತರದ ಅಳತೆಯನ್ನು ತೆಗೆದುಕೊಂಡು ಸರ್ಕಾರದ ವಿಭಾಗಕ್ಕೆ ಹೇಳುತ್ತಾರೆ. ಈ ಏಕೈಕ ಜೀವಂತ ಶಿವಲಿಂಗದ ಬಗ್ಗೆ ಪುರಾಣಗಳಲ್ಲಿ ಮತ್ತು ಇತಿಹಾಸಗಳಲ್ಲಿ ಕೂಡ ಉಲ್ಲೇಖಿಸಲಾಗಿದೆ.

ಇನ್ನೂ ಇತಿಹಾಸಗಳ ಪ್ರಕಾರ ಈ ಲಿಂಗವು ಕಲಿಯುಗಕ್ಕೆ ಸೇರಿದ್ದು ಮೇಲಿನ ಭಾಗ ಸ್ವರ್ಗಕ್ಕೆ ಬೆಳೆಯುತ್ತಿದ್ದರೆ ಕೆಳಗಿನ ಭಾಗ ಪಾತಾಳಕ್ಕೆ ಬೆಳೆಯುತ್ತಿದೆ. ಈ ಜೀವಂತ ಶಿವಲಿಂಗವು ಯಾವಾಗ ಪಾತಾಳಕ್ಕೆ ಪೂರ್ತಿ ತಲಪುತ್ತದೆ ಆಗ ಕಲಿಯುಗದ ಅಂತ್ಯವು ಆಗುತ್ತದೆ ಎಂದು ಇತಿಹಾಸದಲ್ಲಿ ಹೇಳಿದ್ದಾರೆ. ಇದರ ಕಾರಣದಿಂದಲೇ ಈ ವಿಸ್ಮಯಕಾರಿ ಶಿವಲಿಂಗವನ್ನು ನೋಡುವುದಕ್ಕೆ ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ದರ್ಶನ ಮಾಡುತ್ತಾರೆ……

Leave A Reply