ಮದುವೆಗೂ ಮುನ್ನ ಗಂಡು – ಹೆಣ್ಣು ಸಂಬಂಧ ಬೆಳೆಸುವುದು ಪಾಪವೇ ?? ಇದರ ಬಗ್ಗೆ ನಮ್ಮ ಸನಾತನ ಧರ್ಮ ಏನು ಹೇಳುತ್ತದೆ ಗೊತ್ತೇ ?? ತಪ್ಪದೆ ತಿಳಿಯಿರಿ !!
ಆಧುಕನಿಕತೆ ಬೆಳೆದಂತೆ ಅನಾಚಾರ, ಅಪರಾಧಗಳು ಕೂಡ ಹೆಚ್ಚಾಗುತ್ತಿದೆ. ಮನುಷ್ಯ ಅನ್ನುವ ಅತ್ಯಮೂಲ್ಯ ಜನ್ಮ ಇದ್ದರೂ ಅದನ್ನು ದುರ್ಬಳಕೆ ಮಾಡಿಕೊಂಡು ಪಾಪಕರ್ಮವನ್ನು ಬರಮಾಡಿಕೊಳ್ಳುತ್ತಾರೆ. ಪುರಾಣ ಕಾಲದಿಂದಲೂ ಪತಿ – ಪತ್ನಿ, ಅಣ್ಣ- ತಂಗಿ, ಅತ್ತಿಗೆ- ಮೈದುನ, ಅಪ್ಪ- ಅಮ್ಮ , ಅಜ್ಜ- ಅಜ್ಜಿ , ಮಗ- ಮಗಳು, ಹೀಗೆ ಪ್ರತಿಯೊಂದು ಸಂಬಂಧಕ್ಕೂ ಬೆಲೆ ಇತ್ತು.
ಗೌರವಪೂರ್ವಕವಾಗಿ ಎಲ್ಲಾ ಸಂಬಂಧಗಳನ್ನು ನೋಡಲಾಗುತ್ತಿತ್ತು. ಆದರೆ ಈಗ ಯಾವ ಸಂಬಂಧಕ್ಕೂ ಬೆಲೆ ಇಲ್ಲ. ಗಂಡ ಹೆಂಡತಿ ಮಧ್ಯೆ ಅನ್ಯೂನ್ಯತೆ ಇರುವುದಿಲ್ಲ, ಪರ ಪುರುಷ ಅಥವಾ ಪರ ಹೆಣ್ಣಿನ ಸಂಪರ್ಕ ಹೊಂದಿರುತ್ತಾರೆ, ಅದೇ ರೀತಿ ತಂಗಿ, ಮಗಳು ಅಂತ ನೋಡದೇನೇ ಅತ್ಯಾಚಾರ , ಬಲಾತ್ಕಾರದಂತಹ ಪಾಪ ಕಾರ್ಯಗಳು ನಡೆಯುತ್ತಿದೆ.
ಒಂದು ಹೆಣ್ಣನ್ನು ಕೆಟ್ಟ ಭಾವನೆಯಿಂದ ನೋಡುವವರೇ ಹೆಚ್ಚು ವಿನಃ ಆಕೆಯನ್ನು ಗೌರವಿಸುವವರು ಕಡಿಮೆ ಆಗಿದ್ದಾರೆ. ಅದರಲ್ಲೂ ಈಗ ಅನೈತಿಕ ಸಂಬಂಧ ಅನ್ನುವುದು ಕ್ರೇಜ್ ಆಗಿಬಿಟ್ಟಿದೆ. ಆದರೆ ಈ ಅನೈತಿಕ ಸಂಬಂಧ ಇಟ್ತುಕೊಳ್ಳುವುದು ಎಷ್ಟು ಸರಿ ಅನ್ನುವುದರ ಬಗ್ಗೆ ಯಾರು ಕೂಡ ಯೋಚನೆ ಮಾಡುವುದಿಲ್ಲ.
ಕ್ಷಣಿಕ ಸುಖಕ್ಕಾಗಿ ಸಂಸ್ಕೃತಿಯನ್ನೇ ಮರೆತು , ಕಟ್ಟು ಪಾಡುಗಳನ್ನು ಬಿಟ್ಟು ಹೋಗುತ್ತಾರೆ. ಅದರಲ್ಲೂ ಈಗಿನ ಕಾಲದಲ್ಲಿ ಮದುವೆ ಮುಂಚೆ ಸಂಬಂಧ ಇಟ್ಟುಕೊಳ್ಳುವುದು ಕಾಮನ್ ಆಗಿ ಬಿಟ್ಟಿದೆ. ಕಾಲೇಜ್ ಲೈಫ್ ನಲ್ಲಿಯೇ ಗಂಡು – ಹೆಣ್ಣು ಆಕರ್ಷಣೆಗೆ ಒಳಗಾಗಿ ಒಂದಾಗುತ್ತಾರೆ.
ಕೆಲವರು ಪ್ರೀತಿ ಪ್ರೇಮ ಅನ್ನುವ ಹೆಸರಲ್ಲಿ ಸಂಬಂಧ ಬೆಳೆಸಿದರೆ ಇನ್ನು ಕೆಲವರು ಫ್ಲರ್ಟ್ ಮಾಡುತ್ತಾ ಅದೆಷ್ಟೋ ಗಂಡು ಮಕ್ಕಳ ಜೊತೆ, ಹೆಣ್ಣು ಮಕ್ಕಳ ಜೊತೆ ಸಂಬಂಧ ಇಟ್ಟುಕೊಂಡು ಲೈಫ್ ಎಂಜಾಯ್ ಮಾಡುತ್ತಿದ್ದೇವೆ ಅಂದುಕೊಂಡು ಜೀವನ ನಡೆಸುತ್ತಾರೆ. ಆದರೆ ಈ ರೀತಿ ಸಮಾಜ ಒಪ್ಪದ ಅಥವಾ ಅನೈತಿಕ ಸಂಬಂಧ ಇಟ್ಟುಕೊಳ್ಳುವುದು ಪಾಪ ಕಾರ್ಯ ಮಾಡಿದಂತೆ.
ಹೌದು, ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆಯಲ್ಲಿ , ಇಸ್ಲಾಂರ ಖುರಾನ್ ನಲ್ಲಿ, ಕ್ರಿಶ್ಚಿಯನ್ನರ ಬೈಬಲ್ ನಲ್ಲಿ ಈ ಅನೈತಿಕ ಸಂಬಂಧ ಮಾಡುವುದು ಮಹಾ ಪಾಪ ಎನ್ನಲಾಗಿದೆ. ಮದುವೆ ನಂತರ ಹಾಗೂ ತಾಳಿ ಕಟ್ಟಿದ ಗಂಡ , ಹಾಗೂ ಪತ್ನಿ ಜೊತೆ ಮಾತ್ರ ಸಂಬಂಧ ಬೆಳೆಸಬೇಕು , ಇಲ್ಲದೇ ಹೋದಲ್ಲಿ ಪಾಪ ಕರ್ಮಗಳು ಅಂಟಿಕೊಳ್ಳುತ್ತವೆ ಎಂದು ಉಲ್ಲೇಖಿಸಲಾಗಿದೆ.