Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ರಾಜಕೀಯ ಪ್ರವೇಶ ಮಾಡುತ್ತಾರಾ ರವಿ ಡಿ ಚೆನ್ನಣ್ಣನವರ್, ಇಲ್ಲಿದೆ ಅಸಲಿ ಮಾಹಿತಿ

0

ರವಿ ಅವರು ಗದಗ ತಾಲೂಕಿನ ನೀಲಗುಂದ ಗ್ರಾಮದ ಕೃಷಿ ಕುಟುಂಬದಲ್ಲಿ ೨೩ ಜುಲೈ ೧೯೮೫ ರಂದು ಧ್ಯಾಮಪ್ಪ ಚನ್ನಣ್ಣನವರ್ ಹಾಗೂ ರತ್ನಮ್ಮ ದಂಪತಿಗೆ ಜನಿಸಿದರು. ಗದಗದ ನೀಲಗುಂದ ಸರ್ಕಾರಿ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣ,ಗದಗದಲ್ಲಿ ಪದವಿ ಪೂರ್ವ ವಿದ್ಯಾಭ್ಯಾಸ ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು.ತಮ್ಮ ಶೈಕ್ಷಣಿಕ ವೆಚ್ಚಗಳು ಹಾಗೂ ಕೌಟುಂಬಿಕ ಜವಾಬ್ದಾರಿಗಳನ್ನು ನಿಭಾಯಸಲು ಅವರು ಅರೆಕಾಲಿಕ ಕೆಲಸ ಮಾಡುತ್ತಿದ್ದರು.

ಮೇ ೨೦೦೭ ರಲ್ಲಿ, ಐಎಎಸ್ ಪರೀಕ್ಷೆಯ ತರಭೇತಿಯನ್ನು ಅವರು ಹೈದರಾಬಾದ್ ನಲ್ಲಿ ಪಡೆದರು.೨೦೦೮ರಲ್ಲಿ ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (ಯುಪಿಎಸ್ಸಿ) ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ೭೦೩ ನೇ ಸ್ಥಾನ ಪಡೆದರು.ಇವರು ತ್ರಿವೇಣಿಯವರನ್ನು ವಿವಾಹವಾಗಿದ್ದಾರೆ. ಈಗಾಗಲೇ ಐಪಿಎಸ್ ಅಧಿಕಾರಿಯಾಗಿದ್ದಂತ ಅಣ್ಣಾಮಲೈ, ಹುದ್ದೆಗೆ ರಾಜೀನಾಮೆ ನೀಡಿ, ಬಿಜೆಪಿಗೆ ಸೇರ್ಪಡೆಗೊಂಡು, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ.

ಇದೇ ಮಾದರಿಯಲ್ಲಿ, ಕರ್ನಾಟಕದ ಖಡಕ್ ಐಪಿಎಸ್ ಅಧಿಕಾರಿ ಎಂದೇ ಗುರ್ತಿಸಿಕೊಂಡಿರುವಂತ ರವಿ ಡಿ ಚೆನ್ನಣ್ಣನವರ್ ( IPS Officer Ravi D Chennannanavar ) ಕೂಡ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿ, ಶೀಘ್ರವೇ ಬಿಜೆಪಿಗೆ ( BJP Party ) ಸೇರ್ಪಡೆಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ, ಕಳೆದ ಮಂಗಳವಾರ ದೆಹಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ( BL Santosh ) ಅವರನ್ನು ಭೇಟಿಯಾಗಿದ್ದಾರೆ ರವಿ ಡಿ ಚೆನ್ನಣ್ಣನವರ್ ಎಂಬುದಾಗಿ ತಿಳಿದು ಬಂದಿದೆ. ಶಾಸಕ ಎನ್ ಮಹೇಶ್ ಬಿಜೆಪಿ ಸೇರ್ಪಡೆ ( Bjp Join ) ಸಂಬಂಧ ಬಿಎಲ್ ಸಂತೋಷ್ ಜೊತೆಗೆ ಮಾತುಕತೆ ನಡೆಸುತ್ತಿದ್ದಂತ ಸಂದರ್ಭದಲ್ಲಿಯೇ, ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್ ಕೂಡ ಅಲ್ಲಿದ್ದರು ಎಂಬುದಾಗಿ ತಿಳಿದು ಬಂದಿದೆ.

ಇನ್ನೂ ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್ ಬಿಜೆಪಿ ಸೇರ್ಪಡೆ ಕುರಿತಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಬಿಎಲ್ ಸಂತೋಷ್ ಜೊತೆಗೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ( CT Ravi ) ಮಾತುಕತೆ ನಡೆಸಿದ್ದಾರೆ ಎಂದು ಕೂಡ ತಿಳಿದು ಬಂದಿದೆ. ಇದೇ ಸಂದರ್ಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕೂಡ ದೆಹಲಿಯಲ್ಲಿ ಇದ್ದರು ಎಂದು ತಿಳಿದು ಬಂದಿದೆ. ಈ ಮೂಲಕ ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್ ಬಿಜೆಪಿಗೆ ಶೀಘ್ರದಲ್ಲೇ ಸೇರ್ಪಡೆಗೊಳ್ಳೋದಾಗಿ ತಿಳಿದು ಬಂದಿದೆ. ಆ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಬೇಕಿದೆ.

 

Leave A Reply