ನಮ್ಮ ಭಾರತದ ಕೆಲ ಜನಪ್ರಿಯ ನಟಿಯರು ವಿದೇಶದವರನ್ನು ವಿವಾಹ ಮಾಡಿಕೊಂಡಿದ್ದಾರೆ. ಆ ನಟಿಯರು ಯಾರು ಯಾರು ಎಂದು ಇಲ್ಲಿ ನೋಡೋಣ..
ದಕ್ಷಿಣ ಭಾರತದ ಖ್ಯಾತ ನಟಿ ಶ್ರೇಯಾ ಶರಣ್ ಅವರು ಸೆಪ್ಟೆಂಬರ್ 1 1982 ರಂದು ಜನಿಸಿದರು. ಇವರು ರಷ್ಯಾ ಗೆಳೆಯ ಆಗಿರುವ ಆಂಡ್ರಿ ಕೊಶ್ಚೀವ್ ಎನ್ನುವವರನ್ನು 2018 ರಲ್ಲಿ ಉದಯ್ ಪುರ್ ನಲ್ಲಿ ಕೇವಲ ತಮ್ಮ ಆತ್ಮೀಯರ ಬಂಧುಗಳ ಜೊತೆಗೆ ವಿವಾಹ ಮಾಡಿಕೊಂಡಿದ್ದಾರೆ.
ಸೌತ್ ಇಂಡಿಯಾ ದ ಜನಪ್ರಿಯ ನಟಿ ಇಲಿಯಾನ ಅವರು ನವೆಂಬರ್ 1 1986 ರಂದು ಜನಿಸಿದ್ದಾರೆ. ಇವರು ಆಸ್ಟ್ರೇಲಿಯಾ ಗೆಳೆಯ ಆಗಿರುವ ಆ್ಯಂಡ್ರ್ಯೂ ನೀಬೋನ್ ಅವರನ್ನು ಆಗಸ್ಟ್ 28 2019 ರಂದು ವಿವಾಹ ಮಾಡಿಕೊಂಡಿದ್ದಾರೆ.
ಬಾಲಿವುಡ್ ನ ಜನಪ್ರಿಯ ನಟಿ ಪ್ರೀತಿ ಜಿಂಟಾ ಜನವರಿ 31 1975 ರಂದು ಜನಿಸಿದ್ದಾರೆ. ಇವರು ಜೀನ್ ಗುಡ್ ಎನಾಫ್ ಎನ್ನುವವರನ್ನು 2016 ರಲ್ಲಿ ಮದುವೆ ಮಾಡಿಕೊಂಡಿದ್ದಾರೆ.
ನಟಿ ಸೆಲೀನಾ ಜೈಟ್ಲಿ ಅವರು ನವೆಂಬರ್ 24 1981 ರಂದು ಜನಿಸಿದ್ದಾರೆ. ಇವರು ಬಾಲಿವುಡ್ ನ ಜನಪ್ರಿಯ ನಟಿ ಜೊತೆಗೆ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ನಾಲ್ಕನೆಯ ರನ್ನರ್ ಅಪ್ ಆಗಿದ್ದರು. ಇವರು ದುಬೈ ಮೂಲದ ಪೀಟರ್ ಹಾಗ್ ಅವರನ್ನು 2011 ರಂದು ವಿವಾಹ ಮಾಡಿಕೊಂಡಿದ್ದಾರೆ.
ನಟಿ ಲೀಸಾ ರೇ ಅವರು 4 ಎಪ್ರಿಲ್ 1972 ರಂದು ಜನಿಸಿದ್ದಾರೆ. ಇವರು ಕ್ಯಾಲಿಫೋರ್ನಿಯಾ ಮೂಲದ ಮ್ಯಾನೇಜ್ ಮೆಂಟ್ ಕನ್ಸಲ್ಟೆಂಟ್ ಆಗಿರುವ ಜಾಸನ್ ಡೇಹನಿ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ.
ಬಾಲಿವುಡ್ ನ ಖ್ಯಾತ ನಟಿ ಪ್ರಿಯಾಂಕ ಚೋಪ್ರಾ ಅವರು ಜುಲೈ 18 1982 ರಂದು ಜನಿಸಿದ್ದಾರೆ. ಇವರು ಅಮೇರಿಕಾದ ಖ್ಯಾತ ಗಾಯಕ ಮತ್ತು ನಟ ಆಗಿರುವ ನಿಕ್ ಜೋನಾಸ್ ಅವರನ್ನು 2018 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ.
ಜನಪ್ರಿಯ ನಟಿ ಮತ್ತು ಮಾಡೆಲ್ ಕಿಮ್ ಶರ್ಮಾ ಅವರು ಜನವರಿ 21 1980 ರಂದು ಜನಿಸಿದ್ದಾರೆ. ಇವರು ಕೀನ್ಯಾ ಮೂಲದ ಬಿಸಿನೆಸ್ ಮೆನ್ ಅಲಿ ಪುಂಜನಿ ಎನ್ನುವವರನ್ನು 2010 ರಂದು ವಿವಾಹ ಮಾಡಿಕೊಂಡಿದ್ದಾರೆ…..