ಸೆಲೆಬ್ರಿಟಿಗಳು ಬಳಸುವ ಈ ಬ್ಲಾಕ್ ವಾಟರ್ ಬಗ್ಗೆ ನಿಮಗೆಷ್ಟು ಗೊತ್ತು? ಇದರ ಬೆಲೆ ಎಷ್ಟು? ಸಾಮಾನ್ಯ ನೀರಿಗಿಂತ ಇದರಲ್ಲಿ ಅಂತ ವಿಶೇಷತೆ ಏನಿದೆ ನೋಡಿ ತಿಳಿದುಕೊಳ್ಳಿ??
ಸ್ನೇಹಿತರೆ, ಒಮ್ಮೆಯಾದರೂ ಈ ಬ್ಲಾಕ್ ವಾಟರ್ ಎಂಬ ಹೆಸರು ನಿಮ್ಮ ಕಿವಿಗೆ ಬಿದ್ದಿರುತ್ತದೆ. ಮಲ್ಲಿಕಾ ಅರೋರ ವಿರಾಟ್ ಕೊಹ್ಲಿ ಊರ್ವಶಿ ರೌಟೆಲ ಶ್ರುತಿಹಾಸನ್ ಸೇರಿದಂತೆ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳ ಕೈಯಲ್ಲಿ ಈ ರೀತಿಯಾದಂತಹ ಬ್ಲಾಕ್ ವಾಟರ್ ಅಥವಾ ಬ್ಲಾಕ್ ಆಲ್ಕೈಲ್ ನೀರು ಇರುವಂತಹ ದೃಶ್ಯಗಳನ್ನು ನೀವು ಕಣ್ತುಂಬಿಕೊಂಡಿರುತ್ತೀರ. ಏನಿದು ಬ್ಲಾಕ್ ವಾಟರ್ ಇದರಲ್ಲಿ ಅಂತದೇನಿದೆ? ಸಾಮಾನ್ಯ ನೀರಿಗೆ ಹೋಲಿಸಿದರೆ ಯಾವ ವಿಶೇಷತೆಗಳು ಈ ನೀರಿನಲ್ಲಿ ಅಡಗಿದೆ? ಇದನ್ನು ಕುಡಿದರೆ ಏನಾಗುತ್ತದೆ ಹಾಗೂ ಇದರ ಒಂದು ಬಾಟಲಿಯ ಬೆಲೆ ಎಷ್ಟು? ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ಸೆಲೆಬ್ರಿಟಿಗಳ ಜೀವನವೇ ಐಷಾರಾಮಿ ಆಗಿರುತ್ತದೆ ಒಂದೇ ಒಂದು ಸಿನಿಮಾ ಅಥವಾ ಒಂದೇ ಒಂದು ಕ್ರಿಕೆಟ್ ಮ್ಯಾಚ್ ಆಡಿದರೆ ಸಾಕು ಒಂದು ದಿನದಲ್ಲೇ ಕೋಟ್ಯಾಂತರ ರೂಪಾಯಿ ಸಂಪಾದಿಸುತ್ತಾರೆ. ಹೀಗಾಗಿ ಅವರು ಖರ್ಚು ಮಾಡುವಂತಹ ದುಡ್ಡಿಗೆ ಮಿತಿಯೇ ಇರುವುದಿಲ್ಲ. ತಮಗೆ ಇಷ್ಟ ಬಂದಂತಹ ವಸ್ತುಗಳನ್ನು ಹಾಗೂ ತಮಗೆ ಇಷ್ಟ ಬಂದಂತಹ ತಿಂಡಿ ತಿನಿಸುಗಳನ್ನು ತಿನ್ನುತ್ತಾರೆ ಆದರೆ ಎಲ್ಲಿಯೂ ತಮ್ಮ ಡಯಟ್ ಕ್ರಮಗಳಿಗೆ ಮೀರಿ ಸೇವಿಸುವುದಿಲ್ಲ.
ಹೌದು ಗೆಳೆಯರೇ ಪ್ರತಿಯೊಂದನ್ನು ತೂಕ ಹಾಕಿ ಸೇವಿಸುವಂತಹ ಸೆಲೆಬ್ರಿಟಿಗಳು ಸಾಮಾನ್ಯವಾಗಿ ನಮ್ಮ ನಿಮ್ಮೆಲ್ಲರಂತೆ ಬಿಸಿಲರಿ ವಾಟರ್ ಪ್ಯೂರಿಫೈಡ್ ವಾಟರ್ ಅನ್ನು ಕುಡಿಯುವುದಿಲ್ಲ. ವಿಶೇಷತೆಯಲ್ಲಿ ವಿಶೇಷತೆಗಳನ್ನು ಒಳಗೊಂಡಿರುವ ಬ್ಲಾಕ್ ವಾಟರ್ ಅಥವಾ ಕಪ್ಪು ಆಲ್ಕಲೈನ ನೀರನ್ನು ಸೇವಿಸುತ್ತಾರೆ. ಇದರಲ್ಲಿ ಅಂತ ವಿಶೇಷತೆ ಏನಿದೆ ಎಂಬುದನ್ನು ನೋಡುವುದಾದರೆ ಸಾಮಾನ್ಯವಾಗಿ ನಾವು ಕುಡಿಯುವಂತಹ ನೀರಿನಲ್ಲಿ ಪಿಎಚ್ ಪ್ರಮಾಣವು ಆರರಿಂದ ಏಳು ಇರುತ್ತದೆ ಅದರ ಬ್ಲಾಕ್ ವಾಟರ್ ನಲ್ಲಿ ಪಿಎಚ್ ಪ್ರಮಾಣ ಎಂಟು ಇರುತ್ತದೆ.
ಇದು ಹೃದ.ಯಘಾತ ಸಮಸ್ಯೆಯಿಂದ ಹಾಗೂ ಹೃದಯ ಸಂ ಬಂಧಿ ಕಾ ಯಿಲೆಗಳಿಂದ ನಮ್ಮನ್ನು ಸಂರಕ್ಷಿಸುತ್ತದೆ ಎಂದು ನಂಬಲಾಗಿದೆ. ಆದರೆ ವೈಜ್ಞಾನಿಕವಾಗಿ ಇದು ಎಲ್ಲಿಯೂ ಸಾಬೀತಾಗಿಲ್ಲ. ಇನ್ನು ಪ್ರತಿದಿನ ನಿಗದಿತ ಪ್ರಮಾಣದಲ್ಲಿ ಬ್ಲಾಕ್ ಕ್ವಾಟರ್ ಸೇವಿಸುವುದರಿಂದ ತ್ವಚೆಯ ಕಾಂತಿ ಹೆಚ್ಚಾಗುತ್ತದೆ. ಚರ್ಮ ಸುಕ್ಕುಗಟ್ಟಿದ ಹಾಗೆ ವಯಸ್ಸಾದ ಹಾಗೆ ಕಾಣುವುದಿಲ್ಲ ಬದಲಿಗೆ ಯವ್ವನದಂತೆ ಹೊಳೆಯುತ್ತಿರುತ್ತದೆ. ಇನ್ನು ನೀರು ಕಪ್ಪಾಗಿರುವುದರಿಂದ ಇದರಲ್ಲಿ ಪುಲ್ವಿಕ್ ಆಮ್ಲ ಎಂಬ ಮುಖ್ಯವಾದ ಖನಿಜಾಂಶ ಇರುತ್ತದೆ. ಇದು ಆರೋಗ್ಯ ದೃಷ್ಟಿಯಿಂದ ಬಹಳಾನೇ ಒಳ್ಳೆಯದು.
ಇನ್ನು ಈ ನೀರನ್ನು ಕಂಪನಿಗಳು ತಯಾರಿಸುವ ಕಾರಣ ಇದರ ಒಂದು ಲೀಟರ್ ಬೆಲೆ ಬರೋಬ್ಬರಿ 300 ರೂಪಾಯಿಗಳು. ಅತಿಯಾದ ಅಮೃತವು ವಿಷ ಎಂಬಂತೆ ಈ ನೀರನ್ನು ಅತಿಯಾಗಿ ಸೇವಿಸಿದರೆ ಅದು ಬೇರೆ ರೀತಿಯಾದಂತಹ ಅಡ್ಡ ಪರಿಣಾಮ ಬೀರಬಹುದು. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮೂಲಕ ತಿಳಿಸಿ.