Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಶ್ರೀಯಂತ್ರ ಎಂದರೇನು ?? ಅದರ ಮಹತ್ವವೇನು ?? ಇದರಿಂದ ಆಗುವ ಲಾಭಗಳೇನು ? ಏನೆಲ್ಲಾ ಸಾಧಿಸಬಹುದು ಗೊತ್ತೇ ??

0

ಶ್ರೀ ಎನ್ನುವ ಹೆಸರಿನಲ್ಲಿ ಲಕ್ಷ್ಮಿ ಸರಸ್ವತಿ ಶೋಭಾ ಸಂಪದ ಮತ್ತು ವಿಭೂತಿ ಇದೆ. ಈ ಒಂದು ಹೆಸರಿನಲ್ಲಿ ಎಷ್ಟು ದೇವತೆಗಳು ಇದ್ದಾರೆ ಎಂದು ನೀವು ತಿಳಿಯಬಹುದು. ಇದು ಬ್ರಹ್ಮಾಂಡದ ಒಂದು ಸಂಕೇತ ಕೂಡ ಆಗಿದೆ. ಇನ್ನೂ ಶ್ರೀ ಇಷ್ಟು ದೇವತೆಗಳ ಶಕ್ತಿಯನ್ನು ಹೊಂದಿದ್ದು ಶ್ರೀ ಯಂತ್ರವು ಶ್ರೀ ವಿದ್ಯೆಗೆ ಕೂಡ ಸಂಬಂಧಿಸಿದೆ ಎಂದು ಹೇಳಲಾಗಿದೆ. ಹೌದು ಇದು ಲಕ್ಷ್ಮೀ ಸಂಪತ್ತು ಜ್ಞಾನ ಮತ್ತು ಇತ್ಯಾದಿಗಳನ್ನು ಹೊಂದಿದೆ.

ಶ್ರೀವಿದ್ಯಾ ಯಂತ್ರವನ್ನು ಶ್ರೀಯಂತ್ರ ಎಂದು ಕೂಡ ಕರೆಯುತ್ತಾರೆ. ಈ ಶ್ರೀಯಂತ್ರವನ್ನು ಪೂಜಿಸಿದರೆ ಸಾಕಷ್ಟು ರೀತಿಗಳಲ್ಲಿ ನಾವು ಫಲಗಳನ್ನು ಪಡೆಯಬಹುದು. ಒಬ್ಬ ವ್ಯಕ್ತಿ ಶ್ರೀಯಂತ್ರವನ್ನು ಪೂಜಿಸಿದರೆ ಆದಿಶಕ್ತಿಯ ಅನುಗ್ರಹದಿಂದ ಸುಖ ಭೋಗ ಉಪವರ್ಗ ಇತ್ಯಾದಿಗಳು ಆತನಿಗೆ ಲಭಿಸುತ್ತವೆ. ಇನ್ನು ಶ್ರೀ ಯಂತ್ರವನ್ನು ಆರಾಧಿಸಿದ ನಂತರ ಆ ವ್ಯಕ್ತಿಗೆ 4 ರೀತಿಯ ಪುರುಷಾರ್ಥಗಳು ಲಭಿಸುತ್ತವೆ.

ಇದರ ಕಾರಣದಿಂದಲೇ ಇದನ್ನು ಶ್ರೀಯಂತ್ರ ಎಂದು ಕರೆಯುವುದು. ಶ್ರೀಯಂತ್ರದ ದೇವತೆಯ ಹೆಸರು ತ್ರಿಪುರ ಸುಂದರಿ. ಶಾಸ್ತ್ರಗಳ ಪ್ರಕಾರದಿಂದ ಇದನ್ನು ವಿದ್ಯೆ ಮಹಾವಿದ್ಯೆ ಪರಮ ವಿದ್ಯೆ ಎಂದು ಹೇಳಲಾಗುತ್ತದೆ. ಶ್ರೀ ಯಂತ್ರ ಚಿಕ್ರವು ಒಂದು ರೀತಿಯ ವಿಚಿತ್ರವಾದ ಸಂರಚನೆಯನ್ನು ಹೊಂದಿದೆ.

ಯಂತ್ರದ ಮಧ್ಯದಲ್ಲಿ ಒಂದು ಬಿಂದು ಮತ್ತು ಹೊರಗಡೆ ಭೂಪುರ ಇವೆ. ಇದರ ಸುತ್ತಲೂ 4 ದ್ವಾರಗಳು ಇದ್ದು ಒಟ್ಟು ಹತ್ತು ವಿಧದ ಘಟಕಗಳು ಇವೆ. ಅಂದರೆ ಬಿಂದು ತ್ರಿಕೋಣ ಅಷ್ಟಭುಜ ಅಂತರದಶರ ವಹೀದಶರ ಚತುರ್ದಶರ ಅಷ್ಟದಳ ಕಮಲ ಶೋಷದಳ ಕಮಲ 3 ವೃತ್ತಗಳು 3 ಗೋಪುರಗಳು ಇವೆ.

ಇನ್ನೂ ಮೇಲೆ 4 ತ್ರಿಕೋಣಗಳು ಇದ್ದು ಇವನ್ನು ಶ್ರೀಕಂಠ ಅಥವಾ ಶಿವ ತ್ರಿಕೋಣ ಎಂದು ಕರೆಯುತ್ತಾರೆ. ಇನ್ನೂ ಕೆಳಗಿನ ಭಾಗದಲ್ಲಿ 5 ತ್ರಿಕೋಣಗಳು ಇದ್ದು ಇದನ್ನು ಶಿವಕನ್ಯೆ ಅಥವಾ ಶಕ್ತಿ ತ್ರಿಕೋಣ ಎಂದು ಕರೆಯುತ್ತಾರೆ. ಈ ಯಂತ್ರದಲ್ಲಿ ಮೊತ್ತ 43 ತ್ರಿಕೋಣಗಳು 28 ಮರ್ಮಸ್ಥಳಗಳು 24 ಸಂಧಿಗಳು ಇವೆ.

ಇನ್ನೂ ಮರ್ಮ ಮತ್ತು ಸಂಧಿ ಏನೆಂದರೆ ಶ್ರೀ ಯಂತ್ರದಲ್ಲಿ 3 ಸಾಲುಗಳ ಸಂಗಮ ಇದ್ದರೆ ಅದನ್ನು ಮರ್ಮ ಮತ್ತು 2 ಸಾಲುಗಳ ಸಂಧಿ ಇತರೆ ಅದನ್ನು ಸಂಧಿ ಎಂದು ಹೇಳುತ್ತಾರೆ. ಶ್ರೀ ಯಂತ್ರವು ಈಗಿನ ಕಾಲದಲ್ಲಿ ಸಾಕಷ್ಟು ಕಷ್ಟಗಳನ್ನು ಹೊಂದಿರುವ ಮಾನವರಿಗೆ ತುಂಬಾ ಉಪಯೋಗವಾಗುತ್ತದೆ ಎಂದು ಹೇಳಬಹುದು.

ಶ್ರೀಯಂತ್ರವನ್ನು ದೇವರ ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ಇಟ್ಟು ಪೂಜಿಸಿದರೆ ಲಕ್ಷ್ಮಿ ಒಲಿಯುತ್ತಾಳೆ. ಇದರ ಜೊತೆಗೆ ಜಾತಕದಲ್ಲಿ ಇರುವ ದುರದೃಷ್ಟವು ಕೂಡ ದೂರವಾಗುತ್ತದೆ. ಇನ್ನೂ ಈ ಯಂತ್ರವನ್ನು ಪೂಜಿಸಿದರೆ ಆರೋಗ್ಯದ ಸಮಸ್ಯೆಗಳನ್ನು ನೀಗಿಸುತ್ತದೆ ಮತ್ತು ಜೀವನದಲ್ಲಿ ಸುಖ ಸಂಪತ್ತು ಐಶ್ವರ್ಯ ಯಶಸ್ಸನ್ನು ಕೊಡುತ್ತದೆ.

ವ್ಯಾಪಾರ ಮಾಡುವವರು ಶ್ರೀಯಂತ್ರವನ್ನು ಪ್ರತಿದಿನ ಪೂಜೆ ಮಾಡಿದರೆ ಅವರ ವ್ಯಾಪಾರ ಸುಖಮಯವಾಗಿ ಆಗುತ್ತದೆ ಮತ್ತು ಯಾವುದೇ ಕೆಲಸಗಳು ನಿಂತು ಹೋಗಿದ್ದರೂ ಕೂಡ ಅದು ಸುಗಮವಾಗಿ ಮುಂದುವರೆಯುತ್ತದೆ……

Leave A Reply