Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ನೂರಾರು ವರ್ಷಗಳಿಂದ ಈ ಸರ್ಪ ಕಾಯುತ್ತಿದೆ.. ವಿಶ್ವದ ಅತಿ ದೊಡ್ಡ ದೇವಾಲಯ!! ಅಬ್ಬಬ್ಬಾ ನಿಜಕ್ಕೂ ಅದ್ಭುತ ಕಂಡ್ರಿ?!

0

ನಮ್ಮ ಭಾರತದಲ್ಲಿ ಸಾಕಷ್ಟು ದೇವಾಲಯಗಳು ಇರುವುದುಂಟು. ಅದರಲ್ಲೂ ರಸ್ತೆ ರಸ್ತೆಗಳಲ್ಲಿ ಬೇರೆ ಬೇರೆ ಜಾಗಗಳಲ್ಲಿ ಸಾಕಷ್ಟು ಚಿಕ್ಕ ಚಿಕ್ಕ ದೇವಾಲಯಗಳು ಮತ್ತು ದೊಡ್ಡ ದೊಡ್ಡ ದೇವಾಲಯಗಳನ್ನು ಕಾಣುತ್ತೇವೆ. ನಮ್ಮ ಭಾರತದ ಇತಿಹಾಸ ಒಂದು ತೀರ್ಥಕ್ಷೇತ್ರ ಎಂದು ಹೇಳಬಹುದು. ಆದರೆ ನಮ್ಮ ಭಾರತ ಬಿಟ್ಟು ಬೇರೆ ದೇಶಗಳಲ್ಲೂ ಕೂಡ ದೇವಾಲಯಗಳು ಇವೆ. ಅದರಲ್ಲೂ ದೊಡ್ಡ ದೊಡ್ಡ ದೇವಾಲಯಗಳು ಇವೆ. ಅದರ ಬಗ್ಗೆ ನಾವು ಇಲ್ಲಿ ತಿಳಿದುಕೊಳ್ಳೋಣ ಬನ್ನಿ

ಮಲೇಷ್ಯಾದಲ್ಲಿ ಶ್ರೀಸುಬ್ರಮಣ್ಯ ಸ್ವಾಮಿ ದೇವಸ್ಥಾನವಿದೆ. ಇಲ್ಲಿ ಸುಬ್ರಹ್ಮಣ್ಯದ ಮೂರ್ತಿ ತುಂಬಾ ದೊಡ್ಡದಾಗಿದ್ದು ಸುಮಾರು 42.7 ಮೀಟರ್ ಉದ್ದವಿದೆ. ಈ ದೇವಸ್ಥಾನವನ್ನು ತಮಿಳುನಾಡಿನ ತಂಬೂ ಸ್ವಾಮಿ ಪಿಲ್ಲೈ ‍ಅವರು 1890 ರಲ್ಲಿ ನಿರ್ಮಾಣ ಮಾಡಿದ್ದಾರೆ. ಈಗ ಅದು ದೊಡ್ಡ ಪ್ರವಾಸಿ ತಾಣವಾಗಿ ಜನಪ್ರಿಯವಾಗಿದೆ. ಇಲ್ಲಿಗೆ ಸಾಕಷ್ಟು ಭಾರತೀಯರು ಬಂದು ದೇವರ ದರ್ಶನವನ್ನು ಮಾಡುತ್ತಾರೆ. ಕೇವಲ ಮಲೇಷ್ಯಾದ ಜನರು ಮಾತ್ರವಲ್ಲ ಭಾರತ ಇಂಡೋನೇಷ್ಯಾ ಆಸ್ಟ್ರೇಲಿಯಾ ಸಿಂಗಪೂರ್ ಬಾಲಿ ಇನ್ನೂ ಮುಂತಾದ ದೇಶಗಳಿಂದ ಭಕ್ತಾದಿಗಳು ಬರುತ್ತಾರೆ.

ಕ್ಯಾಂಬೋಡಿಯಾದ ಆಂಗೋರ್ ವಾಟ್ ಅನ್ನು ದೇವಾಲಯಗಳಿಗೆ ರಾಜಧಾನಿ ಎಂದು ಕರೆಯುತ್ತಾರೆ ಈ ದೇವಸ್ಥಾನವು 12ನೆಯ ಶತಮಾನದ ಹಿಂದಿನದ್ದಾಗಿದ್ದು ಇದು ಕಾಂಬೋಡಿಯಾದ ಅತಿದೊಡ್ಡ ಭಾರತದ ಹಿಂದೂ ದೇವಾಲಯವಾಗಿದೆ. ಈ ದೇವಾಲಯವನ್ನು ಖಮೇರ್ ಸಾಮ್ರಾಜ್ಯದ ರಾಜ ಸೂರ್ಯವರ್ಮ ನಿರ್ಮಿಸಿದ್ದರು ಎಂದು ಹೇಳಲಾಗಿದೆ ಮತ್ತು ಇದನ್ನು ಕಟ್ಟುವುದಕ್ಕೆ ಸುಮಾರು 27 ವರ್ಷಗಳ ಕಾಲ ತೆಗೆದುಕೊಂಡಿದ್ದಾರೆ. ಮೊದಲು ಈ ದೇವಾಲಯವನ್ನು ವರ ವಿಷ್ಣುಲೋಕ ಎಂದು ಕರೆಯುತ್ತಿದ್ದರು ತದನಂತರ ಆಂಗೋರ್ ವಾಟ್ ಎಂಬ ಹೆಸರನ್ನು ಇಡಲಾಗಿದೆ. ಈ ದೇವಾಲಯದಲ್ಲಿ ದೈತ್ಯ ಹಾವು ಒಂದು ಇದ್ದು ಇದನ್ನು ಕಾಪಾಡುತ್ತಿದೆ ಎಂದು ಹೇಳಲಾಗಿದೆ.

ಯುಎಸ್ ನ ಕ್ಯಾಲಿಫೋರ್ನಿಯಾದಲ್ಲಿ ಶ್ರೀ ಸ್ವಾಮಿ ನಾರಾಯಣ ದೇವಾಲಯವು ಇದೆ. ಈ ದೇವಸ್ಥಾನವು ಅಮೇರಿಕಾದಲ್ಲೇ ದೊಡ್ಡ ದೇವಾಲಯವಾಗಿ ಗುರುತಿಸಿಕೊಂಡಿದೆ. ಇನ್ನೂ ಇದನ್ನು 32000 ಚದುರ ಅಡಿಯಲ್ಲಿ ಕಟ್ಟಲಾಗಿದೆ ಎಂದು ಹೇಳಲಾಗಿದೆ. ಈ ದೇವಾಲಯವು 30 ಎಕರೆಯ ಜಾಗದಲ್ಲಿದ್ದು ಇದು ಸುಮಾರು 75 ಅಡಿ ಎತ್ತರವಿದೆ. ಸಾಕಷ್ಟು ಶಿಲ್ಪಿಗಳು ಈ ದೇವಸ್ಥಾನವನ್ನು ನಿರ್ಮಿಸಿದ್ದು ಇದು ವಿಶ್ವದಲ್ಲೇ ಅತಿ ದೊಡ್ಡ ಮಾರ್ಬಲ್ ನಿಂದ ಕಟ್ಟಲಾಗಿರುವ ದೇವಸ್ಥಾನವೆಂದು ಪ್ರಖ್ಯಾತವಾಗಿದೆ.

ಇಂಡೋನೇಷ್ಯಾದಲ್ಲಿ ಪ್ರಂಬನನ್ ದೇವಸ್ಥಾನ ಮಧ್ಯ ಜಾವದಲ್ಲಿ ಎದ್ದು ಇಲ್ಲಿ ಮೊತ್ತ 8 ಮುಖ್ಯ ದೇವಾಲಯಗಳು ಇವೆ. ಇವನ್ನು ಗೋಪುರಗಳು ಎಂದು ಕರೆಯುತ್ತಾರೆ. ಈ ದೇವಾಲಯವು ಸುಮಾರು 47 ಮೀಟರ್ ಎತ್ತರದಲ್ಲಿದೆ ಮತ್ತು ಈ ದೇವಾಲಯದ ಸುತ್ತಮುತ್ತಲೂ ಸುಮಾರು 250 ಚಿಕ್ಕ ಚಿಕ್ಕ ದೇವಾಲಯಗಳು ಇವೆ. ಈ ದೇವಸ್ಥಾನವು ಸುಮಾರು 800 ಹಿಂದಿನ ಶತಮಾನದ ಪುರಾತನವಿದ್ದು ಈ ದೇವಾಲಯದಲ್ಲಿ ಸಾಕಷ್ಟು ಕೆತ್ತನೆಗಳನ್ನು ನೋಡಬಹುದು.

ಶ್ರೀ ಶಿವ ವಿಷ್ಣು ದೇವಸ್ಥಾನ ಆಸ್ಟ್ರೇಲಿಯಾ ದೇಶದಲ್ಲಿ ಇದ್ದು ಶಿವ ಮತ್ತು ವಿಷ್ಣು ದೇವರಿಗೆ ಅರ್ಪಿತವಾಗಿದೆ ಎಂದು ಹೇಳಲಾಗಿದೆ. ಈ ದೇವಾಲಯವು ಆಸ್ಟ್ರೇಲಿಯದ ವಿಕ್ಟೋರಿಯಾ ರಾಜ್ಯದ ಅತಿದೊಡ್ಡ ದೇವಾಲಯವಾಗಿ ಗುರುತಿಸಿಕೊಂಡಿದೆ. ಈ ದೇವಸ್ಥಾನವನ್ನು ಸುಮಾರು 25 ವರ್ಷಗಳ ಹಿಂದೆ ಹಿಂದೂ ಸಂಘದ ಜನರು ನಿರ್ಮಾಣ ಮಾಡಿದ್ದಾರೆ.

ಇಂಗ್ಲೆಂಡ್ ನಲ್ಲಿ ಶ್ರೀ ವೆಂಕಟೇಶ್ವರ ದೇವಸ್ಥಾನವನ್ನು ಭಾರತದ ತಿರುಪತಿಯ ದೇವಸ್ಥಾನದ ಪ್ರತಿರೂಪ ಎಂದು ಹೇಳಲಾಗುತ್ತದೆ. ಪ್ರವಾಸಿಗರು ಈ ದೇವಸ್ಥಾನವನ್ನು ಇಂಗ್ಲೆಂಡ್ ನ ತಿರುಪತಿ ದೇವಸ್ಥಾನ ಎಂದೇ ಕರೆಯುತ್ತಾರೆ. ಇಲ್ಲಿರುವ ಶ್ರೀ ವೆಂಕಟೇಶ್ವರನ ಸುಮಾರು 12 ಅಡಿ ಎತ್ತರವಿದ್ದು ಯೂರೋಪ್ ನ ಭಾರತೀಯರು ಮತ್ತು ಬೇರೆ ದೇಶಗಳಲ್ಲಿ ಇರುವ ಹಿಂದೂ ಜನರು ಬಂದು ದರ್ಶನ ಮಾಡುತ್ತಾರೆ……

Leave A Reply