ಸಾಕಷ್ಟು ಪಕ್ಷಿಗಳು ನಮ್ಮ ಮನೆಯ ಸುತ್ತಮುತ್ತಲು ಹಾರಾಡುತ್ತಿರುತ್ತವೆ. ಕೆಲ ಪಕ್ಷಗಳು ಮಾತ್ರ ಮನೆಯೊಳಗೆ ಅಥವಾ ಮನೆಯ ಆಚೆ ಕೂರುತ್ತವೆ. ಅದರಲ್ಲಿ ಗಿಣಿ ಪಾರಿವಾಳ ಕಾಗೆ ಇನ್ನೂ ಸಾಕಷ್ಟು ಪಕ್ಷಿಗಳು ಎಂದು ಹೇಳಬಹುದು. ಹಾಗಾದರೆ ಬನ್ನಿ ನಿಮ್ಮ ಮನೆಯ ಒಳಗೆ ಯಾವ ಪಾರಿವಾಳ ಬಂದರೆ ಮತ್ತೆ ಹೇಗೆ ಮಾಡಿದರೆ ನಿಮಗೆ ಮತ್ತು ನಿಮ್ಮ ಮನೆಗೆ ಒಳ್ಳೆಯದಾಗುತ್ತದೆ ಎಂದು ನೋಡೋಣ.
ಕೆಲ ಜನರು ಪಾರಿವಾಳಕ್ಕೆ ಧಾನ್ಯ ದವಸಗಳನ್ನು ಹಾಕಬೇಡಿ ಇದರಿಂದ ಒಳ್ಳೆಯದಾಗುವುದಿಲ್ಲ ಎಂದು ಸಾಕಷ್ಟು ಜನರು ಹೇಳಿರುತ್ತಾರೆ. ಆದರೆ ಒಂದು ವಿಚಾರ ಏನೆಂದರೆ ಪಾರಿವಾಳ ಕೂಡ ನಮ್ಮಂತೆಯೇ ಒಂದು ಜೀವ. ಅದು ದೇವರ ಸೃಷ್ಟಿ ಆಗಿರುವುದರಿಂದ ಅದಕ್ಕೆ ನಾವು ಹಾಕಿದ ಧಾನ್ಯ ಅಥವಾ ಧವಸ ತಿಂದು ತೃಪ್ತಿ ಆದರೆ ಅದರಿಂದ ನಮಗೆ ಒಳ್ಳೆಯದಾಗುತ್ತದೆ ಹೊರತು ಯಾವುದೇ ರೀತಿ ಕೆಟ್ಟದಾಗುವುದಿಲ್ಲ.
ಇನ್ನೂ ಸಾಕಷ್ಟು ಜನರು ಅಕ್ಕಿ ದವಸ ಧಾನ್ಯಗಳನ್ನು ಅಟ್ಟದ ಮೇಲೆ ಅಥವಾ ಟೆರೇಸ್ ಮೇಲೆ ಹಾಕುತ್ತಾರೆ. ಇಂತಹವರು ಒಂದು ವಿಷಯವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಅದೇನೆಂದರೇ ಟೆರೇಸ್ ಮೇಲೆ ಪಾರಿವಾಳಗಳು ಅಕ್ಕಿಯನ್ನು ತಿಂದರೆ ಅದು ಅಲ್ಲೇ ಗಲೀಜು ಮಾಡುವ ಸಾಧ್ಯತೆಗಳಿರುತ್ತವೆ. ಇದರಿಂದ ನಿಮಗೆ ತೊಂದರೆ ಆಗಬಹುದು. ಏಕೆಂದರೆ ಮನೆಯ ಮೇಲೆ ರಾಹುವಿನ ಪರಿಣಾಮ ಹೆಚ್ಚು ಇರುವುದರಿಂದ ಅಲ್ಲಿ ಗಲೀಜು ಮಾಡಿದರೆ ನಿಮ್ಮ ಮೇಲೆ ರಾಹುವಿನ ಪರಿಣಾಮ ಹೆಚ್ಚು ಇರುತ್ತದೆ. ಹಾಗಾಗಿ ನೀವು ತಕ್ಷಣವೇ ಅಲ್ಲಿ ಶುಚಿ ಮಾಡಿದರೆ ರಾಹುವಿನ ಯಾವುದೇ ತೊಂದರೆ ಕೂಡ ನಿಮಗೆ ಬರುವುದಿಲ್ಲ.
ಇನ್ನೂ ಎರಡು ಪಾರಿವಾಳಗಳು ಮನೆಗೆ ಬಂದು ಜಗಳ ಆಡುತ್ತಿದ್ದರೆ ಆ ಮನೆಯಲ್ಲಿ ಶೀಘ್ರದಲ್ಲೇ ಯಾರಿಗಾದರೂ ಇಬ್ಬರ ಸದಸ್ಯರ ಮಧ್ಯೆ ಕಿರಿಕಿರಿ ಉಂಟಾಗುತ್ತದೆ ಎಂದು ಅರ್ಥ. ಹೀಗೆ ನಿಮ್ಮ ಮನೆಯೊಳಗೆ ಎರಡು ಪಾರಿವಾಳಗಳು ಬಂದು ಜಗಳ ಆಡಿದರೆ ಎಲ್ಲರೂ ಮನಶ್ಶಾಂತಿಯಿಂದ ಇದ್ದು ಕೋಪವನ್ನು ಕಡಿಮೆ ಮಾಡಿಕೊಳ್ಳಬೇಕಾಗುತ್ತದೆ.
ಹಾಗೆಯೇ ಪಾರಿವಾಳ ಮನೆಯೊಳಗೆ ಬಂದು ಒಂಟಿ ಕಾಲಿನಲ್ಲಿ ನಿಂತುಕೊಂಡರೆ ಅದು ಮನೆಗೆ ಅಷ್ಟು ಒಳ್ಳೆಯದಾಗುವುದಿಲ್ಲ ಎಂದು ಹೇಳುತ್ತಾರೆ. ಅದರಲ್ಲೂ ಹೆಚ್ಚಾಗಿ ಆರ್ಥಿಕ ಸಮಸ್ಯೆ ಬರುತ್ತದೆ ಎಂದು ಹೇಳಲಾಗಿದೆ