ನಮ್ಮ ಸ್ಯಾಂಡಲ್ ವುಡ್ ನಲ್ಲಿ ಇರುವ ಈ ನಟಿಯರ ರಿಯಲ್ ಲೈಫ್ ಅತ್ತೆ ಸೊಸೆ ಯಾರು ಎಂದು ನೋಡೋಣ ಬನ್ನಿ..
ಜಯಂತಿ ಮತ್ತು ಅನುಪ್ರಭಾಕರ್
ಹಿರಿಯ ನಟಿ ಜಯಂತಿ ಅವರ ಮಗ ಕೃಷ್ಣಕುಮಾರ್ ಅವರನ್ನು ನಟಿ ಅನುಪ್ರಭಾಕರ್ ಮೊದಲನೇ ಮದುವೆ ಮಾಡಿಕೊಂಡರು. ನಂತರ ಅವರಿಗೆ ವಿಚ್ಛೇದನ ನೀಡಿ ಅನು ಅವರು ನಟ ರಘು ಮುಖರ್ಜಿ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ.
ಗಿರಿಜಾ ಲೋಕೇಶ್ ಮತ್ತು ಗ್ರೀಷ್ಮಾ ಸೃಜನ್
ಹಿರಿಯ ನಟಿ ಗಿರಿಜಾ ಲೋಕೇಶ್ ಅವರ ಸುಪುತ್ರ ಸೃಜನ್ ಲೋಕೇಶ್ ಅವರನ್ನು ಕಿರುತೆರೆ ನಟಿ ಗ್ರೀಷ್ಮಾ ಅವರು ವಿವಾಹ ಮಾಡಿಕೊಂಡಿದ್ದಾರೆ.
ಚಂದ್ರಲೇಖ ದೇವರಾಜ್ ಮತ್ತು ರಾಗಿಣಿ ಪ್ರಜ್ವಲ್
ಡೈನಮಿಕ್ ಸ್ಟಾರ್ ದೇವರಾಜ್ ಮತ್ತು ಚಂದ್ರಲೇಖ ಅವರ ಮಗ ಪ್ರಜ್ವಲ್ ದೇವರಾಜ್ ಅವರನ್ನು ನಟಿ ರಾಗಿಣಿ ಅವರು ವಿವಾಹ ಮಾಡಿಕೊಂಡಿದ್ದಾರೆ.
ಜಯಮಾಲಾ ಮತ್ತು ಸಾರಿಕಾ
ಟೈಗರ್ ಪ್ರಭಾಕರ್ ಅವರ ಮಗ ವಿನೋದ್ ಪ್ರಭಾಕರ್ ಅವರು ನಟಿ ಸಾರಿಕಾ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇನ್ನೂ ಜಯಮಾಲಾ ಅವರು ಟೈಗರ್ ಪ್ರಭಾಕರ್ ಅವರ ಮಾಜಿ ಪತ್ನಿಯಾಗಿದ್ದು ಸಂಬಂಧದಲ್ಲಿ ಈಕೆಗೆ ಅತ್ತೆ ಆಗಬೇಕು.
ವಿಜಯ್ ಲಕ್ಷ್ಮಿ ಸಿಂಗ್ ಮತ್ತು ರಿಷಿಕಾ ಸಿಂಗ್
ನಟಿ ವಿಜಯಲಕ್ಷ್ಮಿ ಸಿಂಗ್ ಅವರು ಖ್ಯಾತ ನಿರ್ದೇಶಕರಾದ ರಾಜೇಂದ್ರ ಸಿಂಗ್ ಬಾಬು ಅವರಿಗೆ ಸ್ವಂತ ಸಹೋದರಿ ಆಗಬೇಕು. ಇನ್ನು ರಿಷಿಕಾ ಸಿಂಗ್ ಅವರು ರಾಜೇಂದ್ರ ಸಿಂಗ್ ಅವರ ಮಗಳಾಗಿದ್ದು ವಿಜಯಲಕ್ಷ್ಮಿ ಸಿಂಗ್ ಅವರಿಗೆ ಸಂಬಂಧದಲ್ಲಿ ಸೋದರತ್ತೆ ಆಗಬೇಕು.
ವಿನಯ ಪ್ರಸಾದ್ ಮತ್ತು ಕೃಷ್ಣ ಭಟ್
ಹಿರಿಯ ನಟಿ ವಿನಯಾ ಪ್ರಸಾದ್ ಅವರಿಗೆ ನಟ ರವಿ ಭಟ್ ಅವರು ಸ್ವಂತ ಸಹೋದರ ಆಗಬೇಕು. ಕೃಷ್ಣಭಟ್ ಅವರು ರವಿ ಭಟ್ ಅವರ ಮಗಳು. ಹಾಗಾಗಿ ಕೃಷ್ಣ ಭಟ್ ಅವರಿಗೆ ವಿನಯ ಪ್ರಸಾದ್ ಅವರು ಸೋದರತ್ತೆ ಆಗಬೇಕು.
ಪಂಡರಿಬಾಯಿ ಮತ್ತು ಸ್ವಾತಿ
ಹಿರಿಯ ಮತ್ತು ಜನಪ್ರಿಯ ನಟಿಯಾಗಿದ್ದ ಪಂಡರೀಬಾಯಿ ಅವರಿಗೆ ಮೈನಾವತಿ ಎನ್ನುವ ಸ್ವಂತ ತಂಗಿ ಇದ್ದಾರೆ. ಇನ್ನೂ ಮೈನಾವತಿ ಅವರ ಮಗನನ್ನು ಕಿರುತೆರೆ ಮತ್ತು ಸಿನಿಮಾ ನಟಿ ಸ್ವಾತಿ ಅವರು ವಿವಾಹ ಮಾಡಿಕೊಂಡಿದ್ದಾರೆ. ಹಾಗಾಗಿ ಸಂಬಂಧದಲ್ಲಿ ಪಂಡರಿಬಾಯಿ ಮತ್ತು ಸ್ವಾತಿ ಅವರು ಅತ್ತೆ ಸೊಸೆ ಆಗಬೇಕು…..