Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಚಿಕ್ಕ ಪಾತ್ರಗಳಿಂದ ಜನಪ್ರಿಯತೆ ಗಳಿಸಿದ ಕಲಾವಿದರು ಯಾರ್ ಯಾರು ಗೊತ್ತೇ ?? KGF ಚಿತ್ರದ ಈ ತಾತ ಮತ್ತು ಜೋಶ್ ಚಿತ್ರದ ಈ ರೋಬೋ ಯಾರು ಗೊತ್ತೇ ??

0

ಕೆಲ ಪೋಷಕ ನಟರು ಸಿನಿಮಾಗಳಲ್ಲಿ ನಟಿಸಿರುವ ಕೇವಲ ಒಂದು ಚಿಕ್ಕ ಪಾತ್ರಗಳಲ್ಲಿ ನಟಿಸಿ ಆ ಪಾತ್ರದಿಂದ ತುಂಬಾನೇ ಜನಪ್ರಿಯರಾಗಿದ್ದಾರೆ. ಅಂತಹ ಕಲಾವಿದರು ಯಾರು ಎಂದು ಇಲ್ಲಿ ತಿಳಿದುಕೊಳ್ಳೋಣ..

ರಾಕೇಶ್ ಅವರು ಗೋಲ್ಡನ್ ಸ್ಟಾರ್ ಗಣೇಶ್ ಅವರ ಅಭಿನಯದ ಚೆಲುವಿನ ಚಿತ್ತಾರ ಚಿತ್ರದ ಬುಲ್ಲಿ ಪಾತ್ರದಲ್ಲಿ ನಟಿಸಿ ಸಖತ್ ಫೇಮಸ್ ಆದರು. ಈ ಚಿತ್ರದ ಮೂಲಕ ಇವರು ಬುಲ್ಲಿ ರಾಕೇಶ್ ಎಂದೇ ಜನಪ್ರಿಯರಾದರು. ಹೀಗೆ ಇವರು ಸರಿಸುಮಾರು 45 ಕನ್ನಡ ಚಿತ್ರಗಳಲ್ಲಿ ನಟಿಸಿ ಸ್ಟಾರ್ ನಟರಂತೆಯೇ ಫೇಮಸ್ ಆದರು. ಆದರೆ ಕೆಲ ಅನಾರೋಗ್ಯ ಸಮಸ್ಯೆಗಳಿಂದ ಬುಲ್ಲಿ ರಾಕೇಶ್ ಅವರು 2017 ರಲ್ಲಿ ಸಾ.ವನ್ನಪ್ಪಿದರು.

ರವಿಚಂದ್ರನ್ ಅವರ ಅಭಿನಯದ ಹಳ್ಳಿಮೇಷ್ಟ್ರು ಚಿತ್ರದಲ್ಲಿ ಕಪ್ಪೆರಾಯ ಪಾತ್ರದಲ್ಲಿ ಫಕೀರಪ್ಪ ದೊಡ್ಡಮನಿ ಅವರು ನಟಿಸಿದ್ದಾರೆ. ಇವರ ಮೂಲತಃ ಹಾವೇರಿ ಜಿಲ್ಲೆಯಾಗಿದ್ದು ಹಳ್ಳಿಮೇಷ್ಟ್ರು ಚಿತ್ರದ ಮೂಲಕ ಇವರು ಸಖತ್ ಫೇಮಸ್ ಆದರು. ಇದಾದ ಮೇಲೂ ಕೂಡ ಇವರು ಸಾಕಷ್ಟು ಚಿತ್ರಗಳಲ್ಲಿ ನಟಿಸಿದರೂ ಇವರನ್ನು ಎಲ್ಲರೂ ಹೆಚ್ಚಾಗಿ ಕಪ್ಪೆರಾಯ ಎಂದೂ ಕರೆಯುತ್ತಾರೆ.

 

ಕೆಜಿಎಫ್ 1 ಮತ್ತು ಕೆಜಿಎಫ್ 2 ಚಿತ್ರದಲ್ಲಿ ನಟಿಸಿದ ತಾತನ ಡೈಲಾಗ್ ಗಳು ಎಲ್ಲರಿಗೂ ತುಂಬಾನೇ ಇಷ್ಟವಾಗುತ್ತದೆ. ಇನ್ನೂ ಇವರು ಇದಕ್ಕೂ ಮುನ್ನ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಅಸೋಸಿಯೇಟ್ ಡೈರೆಕ್ಟರ್ ಆಗಿ ಸಹ ಕೆಲಸ ಮಾಡಿದ್ದಾರೆ. ಆದರೂ ಇವರಿಗೆ ಅಷ್ಟು ಜನಪ್ರಿಯತೆ ಸಿಗಲಿಲ್ಲ. ನಂತರ ಯಶ್ ಅವರ ಕೆಜಿಎಫ್ ಚಿತ್ರದ ಡೈಲಾಗ್ ಗಳಿಂದ ಫೇಮಸ್ ಆದರು.

ಲವ್ ಮಾಕ್ಟೈಲ್ ಚಿತ್ರವು 2020 ರಲ್ಲಿ ಬಿಡುಗಡೆಯಾಗಿ ಸಖತ್ ಫೇಮಸ್ ಆಯ್ತು. ಇನ್ನೂ ಇದರಲ್ಲಿರುವ ಎಲ್ಲಾ ಪಾತ್ರಗಳು ಕೂಡ ತುಂಬಾ ವಿಭಿನ್ನವಾಗಿವೆ. ಅದರಲ್ಲೂ ರಚನಾ ಅವರು ಅದಿತಿ ಪಾತ್ರದಲ್ಲಿ ನಟಿಸಿ ಅವರು ಹೇಳುವ ಹೆಂಗೆ ನಾವು ಡೈಲಾಗ್ ಸಖತ್ ಫೇಮಸ್ ಆಯಿತು. ಇದಾದ ಮೇಲೆ ರಚನಾ ಅವರು ಮುಂದಿನ ಕೆಲ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ರೋಬೋ ಗಣೇಶ್ ಅವರು ಜೋಶ್ ಚಿತ್ರದ ಮೂಲಕ ನಟಿಸಿ ತುಂಬಾ ಪೇಮಸ್ ಆದರು. ಇದರಲ್ಲಿ ಇವರು ಮಾಡಿದ ನಟನೆಗೆ ಸಾಕಷ್ಟು ಅಭಿಮಾನಿಗಳು ಫಿದಾ ಆಗಿದ್ದರು…..

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply