ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ವಿಜಯಲಕ್ಷ್ಮಿ ಅವರನ್ನು ಮೇ 14 2000 ರಂದು ವಿವಾಹ ಮಾಡಿಕೊಂಡಿದ್ದಾರೆ. ಇನ್ನೂ ಇವರು ಧರ್ಮಸ್ಥಳದಲ್ಲಿ ವಿವಾಹ ಮಾಡಿಕೊಂಡಿದ್ದು ಇವರ ಮದುವೆಯ ಕೆಲ ಸುಂದರ ಅಪರೂಪದ ಕ್ಷಣಗಳನ್ನು ಇಲ್ಲಿ ನೀವು ನೋಡಬಹುದು.
ದರ್ಶನ್ ಅವರನ್ನು ಹೆಚ್ಚಾಗಿ ಡಿ ಬಾಸ್ ಎಂದೇ ಅಭಿಮಾನಿಗಳು ಕರೆಯುತ್ತಾರೆ. ಇವರು ನಟಿಸಿದ ಬಾಸ್ ಚಿತ್ರದಿಂದ ಇವರಿಗೆ ಈ ಹೆಸರು ಬಂತು. ಇನ್ನೂ ದರ್ಶನ್ ಅವರು ಫೆಬ್ರವರಿ 16 1977 ರಂದು ಪೊನ್ನಂಪೇಟೆಯಲ್ಲಿ ಜನಿಸಿದ್ದಾರೆ. ಇವರಿಗೆ ಈಗ 45 ವರ್ಷಗಳಾಗಿವೆ. ಇವರ ತಂದೆಯ ಹೆಸರು ತೂಗುದೀಪ ಶ್ರೀನಿವಾಸ್ ಮತ್ತು ತಾಯಿಯ ಹೆಸರು ಮೀನಾ ತೂಗುದೀಪ.
ದರ್ಶನ್ ಅವರ ತಂದೆ ಕೂಡ ಆಗಿನ ಕಾಲದಲ್ಲಿ ವಿಲನ್ ಪಾತ್ರದಲ್ಲಿ ಹೆಚ್ಚಾಗಿ ನಟಿಸಿದ್ದರು. ಇನ್ನೂ ಇವರೆಗೆ ದಿನಕರ್ ತೂಗುದೀಪ ಮತ್ತು ದಿವ್ಯಾ ತೂಗುದೀಪ ಎಂಬ ಸಹೋದರ ಸಹೋದರಿ ಕೂಡ ಇದ್ದಾರೆ. ದರ್ಶನ್ ಅವರು ತಮ್ಮ ಶಾಲೆಯ ಶಿಕ್ಷಣವನ್ನು ಮೈಸೂರಿನಲ್ಲಿ ಮಾಡಿ ಮುಗಿಸಿದ್ದಾರೆ. ಇದಾದ ಮೇಲೆ ಇವರು ಎಸ್ ನಾರಾಯಣ್ ಅವರ ನಿರ್ದೇಶನದ ಒಂದು ಧಾರಾವಾಹಿಯಲ್ಲಿ ನಟಿಸಿದರು.
ಇದಾದ ಮೇಲೆ 1997 ರಲ್ಲಿ ಮಹಾಭಾರತ ಎನ್ನುವ ಚಿತ್ರದಲ್ಲಿ ಮೊದಲನೆಯದಾಗಿ ನಟಿಸಿದರು. ಇದಾದ ಮೇಲೆ ಕೆಲ ಚಿತ್ರಗಳಲ್ಲಿ ಸಹಾಯಕ ನಟರಾಗಿ ಅಭಿನಯಿಸಿದ್ದು 2002 ರಲ್ಲಿ ಮೆಜೆಸ್ಟಿಕ್ ಚಿತ್ರದ ಮೂಲಕ ಹೀರೋ ಆಗಿ ಪಾದಾರ್ಪಣೆ ಮಾಡಿದರು. ತದನಂತರ ಇವರು ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿದ್ದಾರೆ. ಇವರು 2021 ರಲ್ಲಿ ಬಿಡುಗಡೆಯಾದ ರಾಬರ್ಟ್ ಚಿತ್ರದಲ್ಲಿ ಕೊನೆಯದಾಗಿ ನಟಿಸಿದ್ದಾರೆ.
ಇದಾದ ಮೇಲೆ ಇವರ ಯಾವ ಸಿನಿಮಾಗಳು ಇನ್ನೂ ಬಿಡುಗಡೆಯಾಗಿಲ್ಲ. ಆದರೆ ಕ್ರಾಂತಿ ಎನ್ನುವ ಇವರ ಸಿನಿಮಾ ಪ್ರಸ್ತುತ ಶೂಟಿಂಗ್ ಕೆಲಸದಲ್ಲಿ ಇದೆ. ದರ್ಶನ್ ಅವರು ಜೊತೆಜೊತೆಯಲಿ, ನವಗ್ರಹ, ಬುಲ್ ಬುಲ್, ಮದುವೆಯ ಮಮತೆಯ ಕರೆಯೋಲೆ ಚಿತ್ರಗಳನ್ನು ನಿರ್ಮಾಣ ಸಹ ಮಾಡಿದ್ದಾರೆ. ಇದರ ಜೊತೆಗೆ ಸಾಕಷ್ಟು ಸಿನಿಮಾಗಳನ್ನು ಡಿಸ್ಟ್ರಿಬ್ಯೂಟ್ ಕೂಡ ಮಾಡಿದ್ದಾರೆ. ದರ್ಶನ್ ಮತ್ತು ವಿಜಯಲಕ್ಷ್ಮಿ ಅವರಿಗೆ ವಿನೀಶ್ ತೂಗುದೀಪ್ ಎನ್ನುವ ಮುದ್ದಾದ ಮಗ ಕೂಡ ಇದ್ದಾನೆ…..