Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಗಾಳಿಪಟ ಚಿತ್ರದ ನಟಿ ಡೈಸಿ ಬೋಪಣ್ಣ ಈಗ ಹೇಗಿದ್ದಾರೆ ಗೊತ್ತಾ? ಅವರ ಇತ್ತೀಚಿನ ಫೋಟೋಗಳು ಇಲ್ಲಿವೆ ನೋಡಿ!!

0

ಕನ್ನಡದ ಖ್ಯಾತ ನಟಿ ಡೈಸಿ ಬೋಪಣ್ಣ ಅವರು ಡಿಸೆಂಬರ್ 4 1982 ರಂದು ಕೊಡಗಿನಲ್ಲಿ ಜನಿಸಿದ್ದಾರೆ. ಇವರು ಕನ್ನಡ ಹಿಂದಿ ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಡೈಸಿ ಬೋಪಣ್ಣ ಅವರು ಬೆಂಗಳೂರಿನಲ್ಲಿ ಚಿತ್ರಕಲಾ ಪರಿಷತ್ ನಲ್ಲಿ ಬಿ.ಎ ಪದವಿಯನ್ನು ಮಾಡಿ ಮುಗಿಸಿದ್ದಾರೆ. ಇವರು ಮೊದಲು ಬಿ ಜಯಶ್ರೀ ಸ್ಪಂದನ ಥಿಯೇಟರ್ ಕ್ಯಾಂಪ್ ನಲ್ಲಿ ಕೆಲಸ ಮಾಡುತ್ತಿದ್ದರು ತದನಂತರ ಸಿನಿಮಾ ರಂಗಕ್ಕೆ ಬಂದರು.

ಡೈಸಿ ಬೋಪಣ್ಣ ಅವರು ಮೊದಲು 2003 ರಲ್ಲಿ ತಮಿಳಿನ ಇಂದ್ರು ಮುದಲ್ ಎನ್ನುವ ಚಿತ್ರದ ಮೂಲಕ ತೆರೆಯ ಮೇಲೆ ಮೊದಲನೆಯದಾಗಿ ಕಾಣಿಸಿಕೊಂಡರು. ಇನ್ನೂ ನಮ್ಮ ಕನ್ನಡದಲ್ಲಿ ನೋಡಿದರೆ 2004 ರಲ್ಲಿ ಕಿಚ್ಚ ಸುದೀಪ್ ಅವರ ಅಭಿನಯದ ರಂಗ ಎಸ್ಸೆಸ್ಸೆಲ್ಸಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು.

ಇದಾದ ಮೇಲೆ ಬಿಂಬ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿನಯದ ಭಗವಾನ್, ಕಮಲ್ ಹಾಸನ್ ಮತ್ತು ರಮೇಶ್ ಅರವಿಂದ್ ಅವರ ಅಭಿನಯದ ರಾಮ ಶಾಮ ಭಾಮ, ದ್ಯಾನ್ ಅವರ ಅಭಿನಯದ ಜಾಕ್ ಪಾಟ್, ಉಪೇಂದ್ರ ಅವರ ಅಭಿನಯದ ಐಶ್ವರ್ಯ,

 

ಶಿವರಾಜ್ ಕುಮಾರ್ ಅವರ ಅಭಿನಯದ ತವರಿನ ಸಿರಿ, ಶಾಮ್ ಅವರ ಅಭಿನಯದ ತನನಂ ತನನಂ, ರಮೇಶ್ ಅರವಿಂದ್ ಅವರ ಅಭಿನಯದ ಸತ್ಯವಾನ್ ಸಾವಿತ್ರಿ, ಗಣೇಶ್ ಅವರ ಅಭಿನಯದ ಗಾಳಿಪಟ, ಶ್ರೀನಗರ ಕಿಟ್ಟಿ ಅವರ ಅಭಿನಯದ ಒಲವೇ ಜೀವನ ಲೆಕ್ಕಾಚಾರ, ರವಿಚಂದ್ರನ್ ಅವರ ಅಭಿನಯದ ಕ್ರೇಜಿಲೋಕ ಚಿತ್ರಗಳಲ್ಲಿ ನಟಿಸಿದ್ದಾರೆ.

ಡೈಸಿ ಬೋಪಣ್ಣ ಅವರು ನಟಿಸಿದ ಬಿಂಬ ಚಿತ್ರಕ್ಕೆ ಇವರಿಗೆ ಅವಾರ್ಡ್ ಕೂಡ ಬಂದಿದೆ. ಇದರ ಜೊತೆಗೆ ಕೆಲ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಕೂಡ ಅಭಿನಯ ಮಾಡಿದ್ದಾರೆ. ಇನ್ನು ಡೈಸಿ ಬೋಪಣ್ಣ ಅವರು 2011 ರಲ್ಲಿ ಮುಂಬೈನ ಉದ್ಯಮಿ ಆಗಿರುವ ಅಮಿತ್ ಜಾಜು ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ.

ಇವರು ಮದುವೆ ಮಾಡಿಕೊಂಡ ಮೇಲೆ ಯಾವುದೇ ಸಿನಿಮಾಗಳಲ್ಲಿ ಕೂಡ ನಟಿಸುತ್ತಿಲ್ಲ. ಡೈಸಿ ಬೋಪಣ್ಣ ಅವರು ಮದುವೆ ಮಾಡಿಕೊಂಡ ಮೇಲೆ ಈಗ ಹೇಗಿದ್ದಾರೆ ಎನ್ನುವ ಕೆಲ ಸುಂದರ ದೃಶ್ಯಗಳನ್ನು ನೋಡಬಹುದು…..

Leave A Reply