ಕಾಗೆಗಳು ಈ ರೀತಿ ವಿಚಿತ್ರ ವರ್ತನೆಗಳು ಮತ್ತು ಸಂಕೇತಗಳನ್ನು ಕೊಡುತ್ತಿದ್ದಾರೆ, ಅಥವಾ ಅದನ್ನು ನೀವು ಕಂಡರೆ ಧನವಂತರಾಗುವ ಸೂಚನೆ ಇರುತ್ತವೆ, ಯಾವುವು ಗೊತ್ತೇ ??
ಕಾಗೆಯನ್ನು ಶನಿ ವಾಹನ ಎಂದು ಹೇಳುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಕೂಡ ಕಾಗೆ ಶನಿ ವಾಹನ ಆಗಿದ್ದ ಕಾರಣ ಅದನ್ನು ಎಲ್ಲರೂ ಕೆಟ್ಟ ಸಂಕೇತವಾಗಿ ನೋಡುತ್ತಾರೆ. ಆದರೆ ಇದು ತಪ್ಪು ಕಾಗೆಗಳು ಕೂಡ ಕೆಲ ಶುಭ ಸಂಕೇತಗಳನ್ನು ನೀಡುತ್ತವೆ. ಹೌದು ಕಾಗೆಗಳು ಇಲ್ಲಿರುವ ಸಂಕೇತಗಳನ್ನು ನಿಮಗೆ ನೀಡಿದರೆ ಇವು ಶುಭ ಲಾಭಗಳು ಆಗಿರುತ್ತವೆ. ಹೌದು ಇದು ಶಕುನ ಶಾಸ್ತ್ರದಲ್ಲಿ ಕೂಡ ಒಂದು ಪುಸ್ತಕದಲ್ಲಿ ಬರೆಯಲಾಗಿದೆ.
ನೀವು ಎಲ್ಲಾದರೂ ಹೊರಗಡೆ ಪ್ರಯಾಣ ಮಾಡುತ್ತಿರುವ ಸಮಯದಲ್ಲಿ ಕಾಗೆ ಒಂದು ಪಾತ್ರೆಯಲ್ಲಿ ತನ್ನ ಮುಖವನ್ನು ಹಾಕಿ ನೀರು ಕುಡಿಯುತ್ತಿದ್ದರೆ ಅದು ನಿಮಗೆ ತುಂಬಾ ಶುಭ ಸೂಚನೆಯನ್ನು ಕೊಡುತ್ತದೆ. ಇದರಿಂದ ನಿಮಗೆ ಧನ ಲಾಭ ಬರುತ್ತದೆ ಎಂದು ಹೇಳಲಾಗುತ್ತದೆ.
ಇನ್ನು ನಿಮ್ಮ ಮುಂದೆ ಕಾಗೆ ತನ್ನ ಬಾಯಲ್ಲಿ ರೊಟ್ಟಿ ಅಥವಾ ಮಾಂಸದ ಆಹಾರವನ್ನು ಇಟ್ಟುಕೊಂಡು ನಿಮ್ಮನ್ನು ನೋಡಿದರೆ ನಿಮ್ಮ ಅರ್ಧಕ್ಕೆ ನಿಂತು ಹೋಗಿರುವ ಕೆಲಸಗಳು ಪೂರ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.ನೀವು ಆಚೆ ಇದ್ದಾಗ ಕಾಗೆ ತನ್ನ ಕಾಲನ್ನು ನಿಮಗೆ ಸ್ಪರ್ಶಿಸಿದಾಗ ನೀವು ಉನ್ನತ ಸ್ಥಾನಕ್ಕೆ ಹೋಗುತ್ತೀರಾ ಎಂದು ಹೇಳಲಾಗಿದೆ.
ಇನ್ನು ಕಾಗೆಗಳು ಸಾಮಾನ್ಯವಾಗಿ ಯಾವಾಗಲೂ ಹಾರಾತ್ತಾನೆ ಇರುತ್ತವೆ. ಒಂದು ವೇಳೆ ಅದು ಭೂಮಿಯ ಮೇಲೆ ತುಂಬಾ ಹತ್ತಿರವಾಗಿ ನಿಮ್ಮ ಬಳಿ ಹಾರಿದರೆ ನಿಮಗೆ ಧನ ಲಾಭ ಸಿಗುತ್ತದೆ ಎಂದು ಹೇಳಲಾಗುತ್ತದೆ.ಇನ್ನೂ ಕಾಗೆ ತನ್ನ ಬಾಯಲ್ಲಿ ಬಟ್ಟೆ ತುಂಡನ್ನು ಇಟ್ಟುಕೊಂಡಿದ್ದು ಅದು ನಿಮ್ಮನ್ನು ನೋಡಿದರೆ ನಿಮಗೆ ಶುಭವಾಗುತ್ತದೆ ಎಂದು ಹೇಳಲಾಗಿದೆ.
ಮಧ್ಯಾಹ್ನ 2 ಗಂಟೆ ಒಳಗೆ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಕಾಗೆ ಕುಳಿತು ಕೂಗಿದರೆ ಅದು ನಿಮಗೆ ಶುಭ ಸೂಚನೆಯಾಗಿರುತ್ತದೆ. ಸ್ತ್ರೀಯರು ನೀರಿನ ಬಿಂದಿಗೆಯನ್ನು ತಲೆಯ ಮೇಲೆ ಎತ್ತಿಕೊಂಡು ಹೋದಾಗ ಆ ಬಿಂದಿಗೆಯ ಮೇಲೆ ಕಾಗೆ ಕುಳಿತರೆ ಆ ನೀರನ್ನು ಎತ್ತಿಕೊಂಡಿರುವವರಿಗೆ ಶುಭವನ್ನು ತರುತ್ತದೆ ಎಂದು ಹೇಳಲಾಗಿದೆ. ಇನ್ನು ನಿಮ್ಮ ಮನೆಯ ಬಳಿ ಯಾವುದಾದರೂ ಮರದಲ್ಲಿ ಕಾಗೆ ಗೂಡನ್ನು ಕಟ್ಟುತ್ತಿದ್ದರೆ ನಿಮ್ಮ ಮನೆಯಲ್ಲಿ ಯಾರಿಗಾದರೂ ಸಂತಾನ ಪ್ರಾಪ್ತಿ ಒದಗುತ್ತದೆ ಎಂದು ಸೂಚಿಸುತ್ತದೆ…..