ಸಾಮಾನ್ಯವಾಗಿ ಬೇರೆ ಭಾಷೆಯಲ್ಲಿ ಹಿಟ್ ಆದ ಸಿನಿಮಾಗಳನ್ನು ಮತ್ತೊಂದು ಭಾಷೆಗೆ ಅದನ್ನು ರಿಮೇಕ್ ಮಾಡುತ್ತಾರೆ. ಹಾಗೆಯೇ ಹಿಟ್ ಆಗಿರುವ ಹಳೆಯ ಕಾಲದ ಹಾಡುಗಳನ್ನು ಸಹ ಕೆಲ ವರ್ಷಗಳ ನಂತರ ರಿಮೇಕ್ ಮಾಡುತ್ತಾರೆ. ಅಂತಹ ಹಾಡುಗಳು ಯಾವುವು ಎಂದು ನೋಡೋಣ..
ಡಾ ರಾಜ್ ಕುಮಾರ್ ಮತ್ತು ಜಯಂತಿ ಅವರ ಅಭಿನಯದ ಪರೋಪಕಾರಿ ಚಿತ್ರದ ಜೋಕೆ ನಾನು ಬಳ್ಳಿಯ ಮಿಂಚು ಎನ್ನುವ ಹಾಡು ತುಂಬಾನೇ ಜನಪ್ರಿಯ ಆಗಿತ್ತು. ಇದೇ ಹಾಡನ್ನು ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಕನ್ನಡದ ಕೆ.ಜಿ.ಎಫ್ 1 ಚಿತ್ರದಲ್ಲಿ ರಿಮೇಡ್ ಮಾಡಲಾಗಿದೆ.
ಕಮಲ್ ಹಾಸನ್ ಮತ್ತು ಸುಹಾಸಿನಿ ಅವರ ಅಭಿನಯದ ಬೆಂಕಿಯಲ್ಲಿ ಅರಳಿದ ಹೂವು ಚಿತ್ರದಲ್ಲಿ ಇರುವ ಮುಂದೆ ಬನ್ನಿ ಎನ್ನುವ ಹಾಡು ತುಂಬ ಫೇಮಸ್ ಆಗಿತ್ತು. ಈ ಹಾಡನ್ನು ಅನೂಪ್ ಭಂಡಾರಿ ಅವರ ಅಭಿನಯದ ರಾಜರಥ ಚಿತ್ರದಲ್ಲಿ ರೀಮೇಡ್ ಮಾಡಲಾಗಿದೆ.
ರಮೇಶ್ ಅರವಿಂದ್ ಮತ್ತು ಹೇಮಾ ಅವರ ಅಭಿನಯದ ಅಮೇರಿಕಾ ಅಮೇರಿಕಾ ಚಿತ್ರದಲ್ಲಿ ಇರುವ ನೂರು ಜನ್ಮಕು ಎನ್ನುವ ಹಾಡು ತುಂಬಾನೇ ಸಕ್ಸಸನ್ನು ಕಂಡಿತು. ಇದೇ ಹಾಡನ್ನು ಸಂತೋಷ್ ಮತ್ತು ಐಂದ್ರಿತಾ ರೇ ಅವರ ಅಭಿನಯದ ನೂರು ಜನ್ಮಕು ಚಿತ್ರದಲ್ಲಿ ರೀಮೇಡ್ ಮಾಡಲಾಗಿದೆ.
ಸಾಹಸಸಿಂಹ ವಿಷ್ಣುವರ್ಧನ್ ಮತ್ತು ಮಂಜುಳಾ ಅವರ ಅಭಿನಯದ ಸೊಸೆ ತಂದ ಸೌಭಾಗ್ಯ ಚಿತ್ರದಲ್ಲಿ ಇರುವ ರವಿವರ್ಮನ ಕುಂಚದ ಎನ್ನುವ ಹಾಡು ತುಂಬಾನೇ ಜನಪ್ರಿಯ ಆಗಿತ್ತು. ಈ ಹಾಡನ್ನು ಉಪೇಂದ್ರ ಅವರ ಅಭಿನಯದ ಬುದ್ದಿವಂತ ಚಿತ್ರದಲ್ಲಿ ರೀಮೇಡ್ ಮಾಡಲಾಗಿದೆ.
ಸಾಹಸಸಿಂಹ ವಿಷ್ಣುವರ್ಧನ್ ಅವರ ಅಭಿನಯದ ಕಿಟ್ಟು ಪುಟ್ಟು ಚಿತ್ರದಲ್ಲಿ ಕಾಲವನ್ನು ತಡೆಯೋರು ಯಾರೂ ಇಲ್ಲ ಎನ್ನುವ ಹಾಡು ತುಂಬಾನೇ ಹಿಟ್ ಆಗಿತ್ತು. ಇದೇ ಹಾಡನ್ನು ಮತ್ತೆ ಸಾಹಸಸಿಂಹ ವಿಷ್ಣುವರ್ಧನ್ ಅವರ ಅಭಿನಯದ ಆಪ್ತಮಿತ್ರ ಚಿತ್ರದಲ್ಲಿ ರೀಮೇಡ್ ಮಾಡಲಾಗಿದೆ.
ಡಾ ರಾಜ್ ಕುಮಾರ್ ಅಂಬಿಕಾ ಮತ್ತು ಸರಿತಾ ಅವರ ಅಭಿನಯದ ಚಲಿಸುವ ಮೋಡಗಳು ಚಿತ್ರದಲ್ಲಿ ಕಾಣದಂತೆ ಮಾಯವಾದನು ಹಾಡು ಸೂಪರ್ ಡೂಪರ್ ಹಿಟ್ ಆಗಿತ್ತು. ಈ ಹಾಡನ್ನು ಪುನೀತ್ ರಾಜ್ ಕುಮಾರ್ ಅವರೇ ಹಾಡಿದ್ದರು. ಹಾಗೆಯೇ ಇದನ್ನು ಪುನೀತ್ ಅವರ ಸಿನಿಮಾ ಆಗಿರುವ ಅಣ್ಣಾಬಾಂಡ್ ಚಿತ್ರದಲ್ಲಿ ರೀಮೇಕ್ ಮಾಡಲಾಗಿದೆ.
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಅಭಿನಯದ ನಾನು ನನ್ನ ಹೆಂಡತಿ ಚಿತ್ರದಲ್ಲಿ ಇರುವ ಯಾರೇ ನೀನು ರೋಜಾ ಹೂವೇ ಹಾಡು ಕೂಡ ಸಕ್ಸಸ್ ಕಂಡಿತು. ಇದೇ ಹಾಡನ್ನು ರವಿಚಂದ್ರನ್ ಅವರ ಮಗ ಮನೋರಂಜನ್ ರವಿಚಂದ್ರನ್ ಅವರ ಸಾಹೇಬ ಚಿತ್ರದಲ್ಲಿ ರಿಮೇಕ್ ಮಾಡಲಾಗಿದೆ.
ಡಾ ರಾಜ್ ಕುಮಾರ್ ಮತ್ತು ಕಲ್ಪನಾ ಅವರ ಅಭಿನಯದ ಎರಡು ಕನಸು ಚಿತ್ರದಲ್ಲಿ ಇರುವ ತಂನಂ ತಂನಂ ಎನ್ನುವ ಹಾಡು ಸಖತ್ ಫೇಮಸ್ ಆಗಿತ್ತು. ಇದೇ ಹಾಡನ್ನು ಪೂಜಾಗಾಂಧಿ ಅವರ ಅಭಿನಯದ ಅಭಿನೇತ್ರಿ ಚಿತ್ರದಲ್ಲಿ ರಿಮೇಡ್ ಮಾಡಲಾಗಿದೆ.
ಡಾ ರಾಜ್ ಕುಮಾರ್ ಅವರ ಅಭಿನಯದ ಕಸ್ತೂರಿ ನಿವಾಸ ಚಿತ್ರದಲ್ಲಿ ಇರುವ ಆಡಿಸಿ ನೋಡು ಬೀಳಿಸಿ ನೋಡು ಹಾಡು ಎವರ್ ಗ್ರೀನ್ ಸಾಂಗ್ ಆಗಿದೆ. ಇದೇ ಹಾಡನ್ನು ಇನ್ ಸ್ಪೈರ್ ಆಗಿ ತೆಗೆದುಕೊಂಡು ಪುನೀತ್ ರಾಜ್ ಕುಮಾರ್ ಅವರ ಅಭಿನಯದ ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಎನ್ನುವುದಕ್ಕೆ ರೀಮೇಡ್ ಮಾಡಲಾಗಿದೆ.
ಡಾ ರಾಜ್ ಕುಮಾರ್ ಗೀತಾ ಮತ್ತು ಮಾಧವಿ ಅವರ ಅಭಿನಯದ ಆಕಸ್ಮಿಕ ಚಿತ್ರದಲ್ಲಿ ಇರುವ ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು ಹಾಡು ನಮ್ಮ ಕರ್ನಾಟಕದ ಬಗ್ಗೆ ಹೇಳುತ್ತಾ ಈ ಹಾಡನ್ನು ಬರೆದಿದ್ದು ಇದು ಸಖತ್ ಫೇಮಸ್ ಆಗಿದೆ. ಇದೇ ಹಾಡನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಭಿನಯದ ಚೆಲುವೆಯೇ ನಿನ್ನ ನೋಡಲು ಚಿತ್ರದಲ್ಲಿ ರಿಮೇಕ್ ಮಾಡಲಾಗಿದೆ…..