Krushi Bhagya : ರಾತ್ರೋರಾತ್ರಿ ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ, ಈ ರೀತಿ ಅರ್ಜಿಯನ್ನು ಸಲ್ಲಿಸಿದರೆ ಸಾಕು ರೈತರ ಬ್ಯಾಂಕ್ ಅಕೌಂಟ್ ಗೆ ನೇರ ಹಣ ಜಮಾವಣೆ.
Under krushi bhagya yojane. state government is giving subsidy for former.
Krushi Bhagya Yojane ರೈತರಿಗೆ ಸಹಾಯವಾಗಲೆಂದೇ ರಾಜ್ಯ ಸರ್ಕಾರ ರೈತರ ಕೃಷಿ ಮತ್ತು ಕೆಲಸಗಳಿಗೆ ನೀರಿನ ಅಭಾವ ಸರಿಪಡಿಸಲು ಮಳೆಯ ನೀರನ್ನು ಸಂಗ್ರಹಿಸಿ ಅದನ್ನು ಕೃಷಿಯ ಕೆಲಸಕ್ಕೆ ಬಳಸಿಕೊಳ್ಳಲು, ರೈತರು ಕೃಷಿಯ ಸಲುವಾಗಿ ಕೆರೆ ಅಥವಾ ಹೋಂಡಾ ನಿರ್ಮಾಣ ಮಾಡುವುದಕ್ಕೆ ರಾಜ್ಯ ಸರ್ಕಾರ ನೆರವಿಗೆ ನಿಂತಿದ್ದು ಸಹಾಯಧನ(subsidy) ಕೊಡಲು ಮುಂದಾಗಿದೆ ಇದಕ್ಕೆ ರಾಜ್ಯ ಸರ್ಕಾರ(State Government ) ನಿಗದಿ ಮಾಡಿರುವ ಹಣ 4 ಲಕ್ಷ , ಈಗಾಗಲೇ ರಾಜ್ಯ ಸರ್ಕಾರ ನಾಲ್ಕು ಲಕ್ಷ ಹಣವನ್ನು ಕೊಡಲು ಅಂದರೆ ಸಹಾಯಧನವನ್ನು ಪಡೆಯಲು ಅರ್ಜಿ ಹಾಕಲು ಕೋರಿದೆ.
ರಾಜ್ಯ ಸರ್ಕಾರ ಕೃಷಿ ಭಾಗ್ಯ ಯೋಜನೆ ಅಡಿ ರೈತರು ತಮ್ಮ ತಮ್ಮ ಜಮೀನಿನಲ್ಲಿ ಕೃಷಿ ಹೋಂಡಾ ಅಥವಾ ಕೆರೆಯನ್ನು ನಿರ್ಮಾಣ ಮಾಡಿಕೊಳ್ಳಲು ಸಹಾಯಧನವನ್ನು ಕೊಡಲು ಮುಂದಾಗಿದ್ದು ಈಗಾಗಲೇ ಅರ್ಜಿ ಸಲ್ಲಿಸಲು ಸರ್ಕಾರ ಎಲ್ಲಾ ರೈತರಿಗೆ ತಿಳಿಸಿದೆ ರೈತರು ತಮ್ಮ ಜಮೀನಿನಲ್ಲಿ ಹೋಂಡಾ ಅಥವಾ ಕೆರೆ ಬಾವಿಗಳನ್ನು ತೋಡಲು ಹಾಗೂ ಆ ನೀರನ್ನು ಸಂಗ್ರಹಿಸಲು ಅದನ್ನು ಕೃಷಿ ಬೆಳವಣಿಗೆಗೆ ಉಪಯೋಗಿಸಲು ಈ ಸಹಾಯಧನವನ್ನು ಬಳಸಿಕೊಳ್ಳಬೇಕು ಎಂದು ಹೇಳಿದೆ ಇದೇ ಕಾರಣದಿಂದ ರಾಜ್ಯ ಸರ್ಕಾರ ರೈತರಿಗೆಲ್ಲರಿಗೂ ಕೃಷಿ ಯೋಜನೆ ಅಡಿ 4 ಲಕ್ಷ, ಸಹಾಯಧನವನ್ನು ನೀಡಲು ಮುಂದಾಗಿದೆ ನೀರು ಸಂಗ್ರಹಣೆ ಮಾಡಲು ಅದಕ್ಕೆ ಬೇಕಾದ ಸಾಮಗ್ರಿ ವಸ್ತುಗಳನ್ನು ಖರೀದಿ ಮಾಡಲು ಕೊಡುವ ಸಹಾಯಧನ ಇದಾಗಿದೆ.
ಸಮಯಕ್ಕೆ ತಕ್ಕಂತೆ ಮಳೆ ಬರದೆ ಇದ್ದಾಗ ರೈತರು ಕೃತಕ ವಾದ ಕೆರೆ ಅಥವಾ ಹೋಂಡಾ ನಿರ್ಮಿಸಿಕೊಳ್ಳಲು ಅಥವಾ ಕೃಷಿ ಅಭಿವೃದ್ಧಿ ಮಾಡಲು ಈ ಹಣವನ್ನು ಕೊಡುವುದು ರಾಜ್ಯ ಸರ್ಕಾರದ ಮುಖ್ಯ ಉದ್ದೇಶವಾಗಿದೆ, ಇದರ ಮುಖ್ಯ ಉದ್ದೇಶವೇನೆಂದರೆ, ರೈತರು ಮಳೆ ಬಂದ ಕಾಲದಲ್ಲಿ ಮಳೆ ನೀರನ್ನು ಸಂಗ್ರಹಿಸಿ ಮಳೆ ಬಾರದ ಸಮಯದಲ್ಲಿ ಕೃಷಿಗೆ ಉಪಯೋಗವಾಗಲೆಂದು ರಾಜ್ಯ ಸರ್ಕಾರ ಈ ಯೋಜನೆಯನ್ನು ರೈತರಿಗೆ ಕೊಟ್ಟಿದೆ, ಬಿಜೆಪಿ ಸರ್ಕಾರ ಇರುವ ಸಂದರ್ಭದಲ್ಲಿ ಈ ಯೋಜನೆ ನಿಸ್ಕ್ರಿಯವಾಗಿದ್ದ ಕಾರಣ ಈ ಯೋಜನೆಯನ್ನು ಮತ್ತೆ ರೈತರಿಗೆ ನೆರವು ಮಾಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ.
ಇನ್ನು ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಯಾವೆಲ್ಲ ದಾಖಲಾತಿಗಳು ಬೇಕಾಗುತ್ತವೆ.
ಈ ಯೋಜನೆಯನ್ನು ನೀವು ಸದುಪಯೋಗಪಡಿಸಿಕೊಳ್ಳಬೇಕಾದರೆ ಇದಕ್ಕೆ ಅರ್ಜಿ ಹಾಕಲು ಬೇಕಾಗಿರುವ ದಾಖಲಾತಿಗಳು ಆಧಾರ್ ಕಾರ್ಡ್(Aadhaar Card) ಬ್ಯಾಂಕಿನ ಪಾಸ್ ಬುಕ್(Bank Pass Book) ಮತ್ತು ಜಮೀನಿನ ಪಹಣಿ ಪತ್ರ(RTC) ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಂದ ಪಡೆದ ಫೋರ್ಡಿಂಗ್. ಎಲ್ಲ ದಾಖಲಾತಿಗಳನ್ನು ತೋಟಗಾರಿಕೆ ಇಲಾಖೆಯ ಅಥವಾ ರೈತ ಸಂಪರ್ಕ ಕೇಂದ್ರ ದಲ್ಲಿ ಅರ್ಜಿ ಸಲ್ಲಿಸಿದರೆ ಸರ್ಕಾರದ ಸಹಾಯ ಧನ ನಿಮ್ಮ ಖಾತೆಗೆ ಜಮವಾಗುತ್ತದೆ, ಮಹಾತ್ಮ ಗಾಂಧಿ ಹಾಗೂ ಉದ್ಯೋಗ ಖಾತರಿ ಅಡಿಯಲ್ಲಿ ಕೂಲಿ ಕಾರ್ಮಿಕರಿಂದ ತಮ್ಮ ತಮ್ಮ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಬಹುದಾಗಿದೆ ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರದಲ್ಲಿ ಅಥವಾ ತೋಟಗಾರಿಕೆ ಇಲಾಖೆಯಲ್ಲಿ ಸಂಪರ್ಕಿಸಬಹುದು.