Hasini Foundation: ಹಾಸಿನಿ ಫೌಂಡೇಶನ್ ಟ್ರಸ್ಟ್ ನಿಂದ ಪೌರಕಾರ್ಮಿಕರಿಗೆ ಬಾಗಿನ ನೀಡಿದ ಸವಿತಾ ಗೌಡ, ಎಲ್ಲಕಡೆ ಇಂದಲು ಕೇಳಿ ಬಂದ ಮೆಚ್ಚುಗೆಯ ಮಾತುಗಳು
Savita Gowda gifted to civil servants by Hasini Foundation Trust.
Hasini Foundation: ಕೆಲವೇ ಕೆಲವು ದಿನಗಳ ಹಿಂದೆ ನಡೆದ ಗೌರಿ ಗಣೇಶ ಹಬ್ಬದ ನಿಮಿತ್ತ ಹಾಸಿನಿ ಫೌಂಡೇಶನ್ ಟ್ರಸ್ಟ್ (Hasini Foundation Trust) ವತಿಯಿಂದ ಹಬ್ಬದ ದಿನದಂದು ಸಂಜೆ ನಗರದಲ್ಲಿ ಮಹಿಳಾ ಪೌರಕಾರ್ಮಿಕರಿಗೆ ಬಾಗಿನವನ್ನು ವಿತರಣೆ ಮಾಡಿದರು. ಹಾಸಿನಿ ಫೌಂಡೇಶನ್ ಸಂಸ್ಥಾಪಕಿ ಹಾಗೂ ಅಧ್ಯಕ್ಷೆ ಸವಿತಾ ಗೌಡ (Hasini Foundation Founder Savitha Gowda) ಪೌರಕಾರ್ಮಿಕರಿಗೆ ಬಾಗಿನವನ್ನು ನೀಡಿದ ಕಾರಣ ಅವರಿಗೆ ಜನರ ಪ್ರಶಂಸೆ ಕೂಡ ಸಿಕ್ಕಿತು.

ಬಡವರಿಗೆ ನೆರವು ನೀಡುವುದು ನಮ್ಮ ಫೌಂಡೇಶನ್ ನ ಉದ್ದೇಶ ಹೀಗಾಗಿ ಈ ಬಾರಿ ಪಾಲಿಕೆಯ ಮಹಿಳಾ ಪೌರ ಕಾರ್ಮಿಕರಿಗೆ ನೆರವು ನೀಡಲಾಗಿದೆ ನಗರದ ಸ್ವಚ್ಛತೆ ಮತ್ತು ಅವರ ಶ್ರಮ ಅಪಾರವಾದದ್ದು ಚಳಿ, ಮಳೆ, ಬಿಸಿಲು ಎನ್ನದೆ ಸ್ವಚ್ಛತಾ ಕಾರ್ಯದಲ್ಲಿ ತೊಡಗುತ್ತಾರೆ ಒಂದು ವೇಳೆ ಇವರ ಕೆಲಸ ಸ್ಥಗಿತಗೊಂಡರೆ ಬಡಾವಣೆಗಳು ಆ ನೈರ್ಮಲ್ಯದಿಂದ ಕೊಳೆತು ನಾರುತವೇ ಹೀಗಾಗಿ ನಗುರುಗಳು ಸ್ವಚ್ಛವಾಗಿರಲು ಮಹಿಳಾ ಪೌರಕಾರ್ಮಿಕರ ಶ್ರಮ ಕಾರಣ ಎಂದು ಸವಿತಾ ಗೌಡ ಅವರು ಮೆಚ್ಚುಗೆಯನ್ನ ವ್ಯಕ್ತಪಡಿಸಿದರು.
ಹಾಸಿನಿ ಫೌಂಡೇಶನ್ ಸಮಾಜಮುಖಿ ಕಾರ್ಯದಲ್ಲಿ ತೊಡಗಿದೆ ಬಡ ಮಹಿಳೆಯರು ಹಾಗೂ ಮಕ್ಕಳಿಗೆ ಸ್ವಾವಲಂಬಿ ಬದುಕು ಕೊಡುವಲ್ಲಿ ಕಾರ್ಯನಿರತವಾಗಿದೆ ಹಲವು ವರ್ಷಗಳಿಂದ ಫೌಂಡೇಶನ್ ನಾನಾ ಸೇವೆಯಲ್ಲಿ ತೊಡಗಿಕೊಂಡಿದೆ ಎಂದು ಸವಿತಾ ಗೌಡ ಅವರು ಹೇಳಿದರು.
ಸಂಜಯ ನಗರದಲ್ಲಿ ಫೌಂಡೇಶನ್ ನ ಕಚೇರಿ ಸ್ಥಾಪಿಸಲಾಗಿದೆ ಪ್ರತಿ ದಿನ ಸಮಾಜಮುಖಿ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸಮಾಜದ ಅಭಿವೃದ್ಧಿ ಆಗುವುದಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದ್ದೇವೆ. ಬಡ ಮಕ್ಕಳ ಶಿಕ್ಷಣಕ್ಕೆ ನೆರವು ನೀಡಲಾಗುತ್ತಿದೆ ಮುಂದಿನ ದಿನಗಳಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಗುರಿಯಾಗಿಸಿಕೊಂಡು ದೊಡ್ಡಮಟ್ಟದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸವಿತಾ ಗೌಡ ವಿವರಿಸಿದರು.
Savita Gowda gifted to civil servants by Hasini Foundation Trust.