ಯಾರಿದು ಸವಿತಾ ಗೌಡ, ಬೆಂಗಳೂರಿನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತಿದ್ದಾರೆ, ಇವರು ಮಾಡುತ್ತಿರುವ ಕಾರ್ಯಗಳನ್ನು ತಿಳಿದರೆ ನೀವೇ ಗ್ರೇಟ್ ಅಂತೀರಾ ಕಣ್ರೀ !!
ಸಮಾಜವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಹಾಗೂ ಬಡ ಮಕ್ಕಳನ್ನು ಬಡ ವಿದ್ಯಾರ್ಥಿಗಳನ್ನು ಮೇಲೆ ತರುವ ಸಲುವಾಗಿ ಹಗಲು ರಾತ್ರಿ ಶ್ರಮಿಸುತ್ತಿದೆ.
Hasini Foundation: ಸವಿತಾ ಗೌಡ ಅವರ ಸಮಾಜ ಸೇವೆ ಅಪಾರವಾದದ್ದು ಎಂದರೆ ತಪ್ಪಾಗಲಾರದು. ಹೌದು ಸವಿತಾ ಗೌಡ ಅವರು ಕಾರ್ಮಿಕರಿಂದ ಹಿಡಿದು ಮಕ್ಕಳು ವೃದ್ಧರವರೆಗೂ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ತಮ್ಮನ ತಾವು ಪೂರ್ಣವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಮೊನ್ನೆ ಅಷ್ಟೇ ಸಂಜಯ್ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಸಿನಿ ಪೌಂಡೇಶನ್ ಟ್ರಸ್ಟ್ ನ ಸಂಸ್ಥಾಪಕಿ ಸವಿತಾ ಗೌಡ (Hasini Foundation Trust Savitha Gowda) ಅವರು ಪೌರ ಕಾರ್ಮಿಕರಿಗೆ ಬಾಗಿನವನ್ನು ನೀಡಿದರು. ಈಗ ಬಡ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಹಾಗೂ ವೃದ್ಧರಿಗೆ ಬ್ಲಾಂಕೆಟ್ ಗಳನ್ನು ನೀಡುವ ಕಾರ್ಯಕ್ರಮವನ್ನು ಸಾಮಾಜಿಕ ಕಳಕಳಿಯಿಂದ ಮತ್ತೆ ಹಮ್ಮಿಕೊಂಡಿದ್ದಾರೆ.

ಹೌದು, ಹಾಸಿನಿ ಫೌಂಡೇಶನ್ ಪರಿಪೂರ್ಣವಾಗಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿದೆ. ಬಡ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಅವರ ಬದುಕು ಕಟ್ಟಿಕೊಳ್ಳಲು ಸಹಾಯವಾಗುವಂತೆ ನಿರಂತರ ಶ್ರಮವಹಿಸುತ್ತಿದೆ. ಈಗ ಅಷ್ಟೇ ಅಲ್ಲ ಮೊದಲಿನಿಂದಲೂ ಕೂಡ ಹಾಸಿನಿ ಫೌಂಡೇಶನ್ ಒಂದಿಲ್ಲೊಂದು ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿದೆ.
ಸಮಾಜವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಹಾಗೂ ಬಡ ಮಕ್ಕಳನ್ನು ಬಡ ವಿದ್ಯಾರ್ಥಿಗಳನ್ನು ಮೇಲೆ ತರುವ ಸಲುವಾಗಿ ಹಗಲು ರಾತ್ರಿ ಶ್ರಮಿಸುತ್ತಿದೆ. ಹಾಗೂ ಬಡ ಮಕ್ಕಳ ಶಿಕ್ಷಣಕ್ಕೂ ಕೂಡ ನೆರವನ್ನು ನೀಡುತ್ತಿದೆ. ಅಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಮಕ್ಕಳು ಹಾಗೂ ಮಹಿಳೆಯರನ್ನ ಅಭಿವೃದ್ಧಿಪಡಿಸುವ ಸಲುವಾಗಿ ಇನ್ನಷ್ಟು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗುತ್ತದೆ ಎಂದು ಸವಿತಾ ಗೌಡ ಅವರು ಹೇಳಿಕೆಯನ್ನ ನೀಡಿದ್ದಾರೆ.
ಅವರ ಮಾತಿನಂತೆ ಬಡ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಹಾಗೂ ವೃದ್ಧರಿಗೆ ಬ್ಲಾಂಕೆಟ್ ಗಳನ್ನು ನೀಡುವ ಕಾರ್ಯಕ್ರಮವನ್ನು ಸಾಮಾಜಿಕ ಕಳಕಳಿಯಿಂದ ಮತ್ತೆ ಹಮ್ಮಿಕೊಂಡಿದ್ದಾರೆ. ಹಾಸಿನಿ ಫೌಂಡೇಶನ್ ಜೊತೆಗೆ ಆಸಕ್ತಿ ಇದ್ದವರು ಸ್ವಲ್ಪ ಕೈಜೋಡಿಸಿದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಡ ಮಕ್ಕಳ ಹಾಗೂ ಮಹಿಳೆಯರ ಕಲ್ಯಾಣಕ್ಕಾಗಿ ಇನ್ನು ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದಾಗಿದೆ. ಆದ್ದರಿಂದ ಆಸಕ್ತಿ ಇದ್ದವರು ಹಾಸಿನಿ ಫೌಂಡೇಶನ್ ಅನ್ನು ಸಂಪರ್ಕಿಸಿ ತಮ್ಮ ಕೈಲಾದ ಸಹಾಯವನ್ನಿತ್ತರೆ ಸಮಾಜದ ಅಭಿವೃದ್ಧಿಗೆ ನೀವು ಕೂಡ ಕೈಜೋಡಿಸಿದಂತಾಗುತ್ತದೆ.
ಹಾಸಿನಿ ಫೌಂಡೇಶನ್ – No 42, Sanjay Nagar Main Road Bangalore – 560094, ಧೂರವಾಣಿ – 7338252589.