ಸತತವಾಗಿ ಮೂರು ದಿನದಿಂದ ಇಳಿಕೆ ಕಂಡ ಚಿನ್ನದ ಬೆಲೆ, ಇಂದಿನ ದರ ಎಷ್ಟು !!
The price of gold has decreased for three days in a row, what is the price today!!
(Gold Price) ಚಿನ್ನ ಬೆಳ್ಳಿ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮೊದಲೆಲ್ಲಾ ಹೆಣ್ಣು ಮಕ್ಕಳು ಚಿನ್ನ ಎಂದರೆ ಬಹಳ ಆಸೆ ವ್ಯಕ್ತ ಪಡಿಸುತ್ತಿದ್ದರೂ, ಆದರೆ ಇದೀಗ ಗಂಡಸರು ಸಹ ಹೆಣ್ಣು ಮಕ್ಕಳನ್ನು ಮೀರಿಸುವಂತೆ ಚಿನ್ನದ ಆಭರಣಗಳನ್ನು ಧರಿಸುತ್ತಾರೆ. ಚಿನ್ನ ನೋಡಿದರೆ ಎಂತವರಿಗಾದರು ಅದನ್ನು ಕೊಂದುಕೊಳ್ಳಬೇಕು ಎನ್ನುವ ಆಸೆ ಆಗುತ್ತದೆ.
ಆದರೆ ಅದರ ಬೆಲೆ ನೋಡಿ ಕೆಲವರು ಸುಮ್ಮನಾಗುತ್ತಾರೆ. ಇನ್ನು ಇತ್ತೀಚೆಗೆ ಚಿನ್ನದ ಬೆಲೆಯಲ್ಲಿ ಬಾರಿ ಬೇಡಿಕೆ ಕಂಡುಬಂದಿತ್ತು. ಆದರೆ ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಹೌದು ಕಳೆದ ಕೆಲವು ದಿನಗಳಿಂದ ಬುಲಿಯನ್(Bullion Market) ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಇಳಿಕೆ ಕಂಡು ಬಂದಿದೆ.
ಹೌದು ಕಳೆದ ಮೂರು ದಿನಗಳು ಅಂದರೆ, ಬುಧವಾರ, ಗುರುವಾರ ಹಾಗೂ ಇಂದು ಶುಕ್ರವಾರ ಸಹ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಬಾರಿ ಇಳಿಕೆ ಕಂಡು ಬಂದಿದೆ. ಇಂದು ಜೂನ್ 16, ಶುಕ್ರವಾರ, ಇಂದು ಬೆಳ್ಳಿಗೆ ದಾಖಲಾಗಿರುವ ಚಿನ್ನದ ಬೆಲೆಗಳ ಪ್ರಕಾರ, ಇಂದು ಮಾರುಕಟ್ಟೆಯಲ್ಲಿ,10 ಗ್ರಾಂ 22 ಕ್ಯಾರೆಟ್(22 cararat gold price) ಚಿನ್ನದ ಬೆಲೆ(Gold Price) ಸುಮಾರು 54,700 ರೂಪಾಯಿಗಳು ಆಗಿದ್ದು.
ಇನ್ನು 10 ಗ್ರಾಂ 24 ಕ್ಯಾರೆಟ್(24 carat gold price) ಚಿನ್ನದ ಬೆಲೆ 59,670 ರೂಪಾಯಿಗಳು ಆಗಿದೆ ಎಂದು ತಿಳಿದು ಬಂದಿದೆ. ಇನ್ನು ಪ್ರತಿ ಕೆಜಿ ಬೆಳ್ಳಿಯ ಬೆಲೆಯಲ್ಲಿ ಸುಮಾರು 900 ರೂಪಾಯಿಗಳು ಅಷ್ಟು ಕಡಿತವಾಗಿದ್ದು, ಇನ್ನು ಬೆಳ್ಳಿಯ ಬೆಲೆಯನ್ನು(Silver Price) ನೋಡುವುದಾದರೆ 73,100 ರೂಪಾಯಿಗಳು ರಷ್ಟು ಇದೆ.
ಇನ್ನು ನಮ್ಮ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಯಾವ ಮಟ್ಟಕ್ಕೆ ಇದೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ, ಮುಂದೆಕ್ಕೆ ಓದಿ.
ನಮ್ಮ ದೇಶದ ರಾಜಧಾನಿ ದೆಹಲಿಯಲ್ಲಿ ಇಂದು 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 54,850 ಆಗಿದ್ದು, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ.59,820 ಆಗಿದೆ.
ಇನ್ನು ನಮ್ಮ ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 54,750 ರೂಗಳು ಆಗಿದ್ದು, 10 ಗ್ರಾಂ 24 ಕ್ಯಾರೆಟ್‌ನ ಚಿನ್ನದ ಬೆಲೆ ಸುಮಾರು 59,720 ರೂ ಎಂದು ತಿಳಿದುಬಂದಿದೆ.
QR Code : ಇದರ ಅರ್ಥವೇನು, ಇದು ಹೇಗೆ ಕೆಲಸ ಮಾಡುತ್ತದೆ, ಕ್ಯೂಆರ್ ಕೋಡ್ ವಿಶೇಷತೆಗಳು ಇವು !!
ಇನ್ನು ಮುಂಬೈ ನಗರದಲ್ಲಿ 10 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ 54,700 ರೂಗಳು ಆಗಿದ್ದು, ಮತ್ತು 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 59,670 ರೂಗಳು ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನು ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.55,050, ಮತ್ತು 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ.60,050 ಆಗಿದೆ ಎನ್ನಲಾಗುತ್ತಿದೆ.
ಅಲ್ಲದೆ ಹೈದರಾಬಾದ್ ನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ.54,700 ಆಗಿದ್ದರೆ, 24 ಕ್ಯಾರೆಟ್ ಬೆಲೆ ರೂ.59,670 ಆಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಬೆಳವಣಿಗೆಗಳಲ್ಲಿ ದಿನದಿಂದ ದಿನಕ್ಕೆ ಬದಲಾವಣೆಗಳು ಆಗುತ್ತಿರುವ ಕಾರಣ ನಾವು ದಿನದಿಂದ ದಿನಕ್ಕೆ ಚಿನ್ನ ಹಾಗೇ ಬೆಳ್ಳಿ ಮಾರುಕಟ್ಟೆಯಲ್ಲಿ ಸಹ ಅದರ ಬೆಳೆಗಳಲ್ಲಿ ಬದಲಾವಣೆಗಳನ್ನು ಕಾಣಬಹುದು. ಇನ್ನು ಈ ಚಿನ್ನದ ಬೆಳೆಗಳನ್ನು ಚಿನ್ನದ ಮಾರುಕಟ್ಟೆಯ ಒಂದು ವೆಬ್ ಸೈಟ್ ನಲ್ಲಿ ಇಂದು ಬೆಳ್ಳಿಗೆ ಅಧಿಕೃತವಾಗಿ ದಾಖಲಿಸಲಾಗಿದ್ದು, ಅದನ್ನು ಆಧಾರವಾಗಿ ಇಟ್ಟುಕೊಂಡು ಈ ಮಾಹಿತಿಯನ್ನು ನೀಡಲಾಗುತ್ತಿದೆ.
