ಮಳೆಗಾಲದಲ್ಲಿ ದೇಹಕ್ಕೆ ಶಕ್ತಿ ನೀಡುವ ಸೌತೆಕಾಯಿ ದೋಸೆ, ಈ ರೀತಿ ಮಾಡಿ ಸಾಕು, ಮನೆಮಂದಿಯೆಲ್ಲ ಬಹಳ ಇಷ್ಟ ಪಟ್ಟು ತಿಂತಾರೆ ಮಾಡಲು ಬಲು ಸುಲಭ.
Cucumber dosa recipe easy to make and gives strength to the body.
Cucumber Dosa Recipe: ನಾವು ಹಲವಾರು ಬಗೆಯ ದೋಸೆಗಳನ್ನು ತಿಂದಿಯೇ ಇರುತ್ತೇವೆ. ಉದಾಹರಣೆಗೆ ರವೆ ದೋಸೆ ಅಕ್ಕಿ ದೋಸೆ ಈ ರೀತಿ ತಿಂದಿದ್ದೇವೆ. ಆದರೆ ಒಮ್ಮೆ ಈ ದೋಸೆಯ ರುಚಿಯನ್ನು ನೋಡಿದರೆ ನೀವು ಖಂಡಿತವಾಗಿಯೂ ಪ್ರತಿ ಬಾರಿಯೂ ಈ ರೀತಿಯ ದೋಸೆಯನ್ನೇ ಮಾಡಿಕೊಂಡು ತಿನ್ನುತ್ತೀರಾ! ಹಾಗಾದರೆ ಆ ದೋಸೆ ಯಾವುದು ಎಂದು ಯೋಚಿಸುತ್ತಿದ್ದೀರಾ ಬೇಸಿಯಲ್ಲಿ ದೇಹಕ್ಕೆ ತಂಪನ್ನು ನೀಡುವ ಸೌತೆಕಾಯಿಯನ್ನು ಬಳಸಿಕೊಂಡು ಮಾಡುವಂತಹ ಒಂದು ದೋಸೆ ಆಗಿದೆ. ಹಾಗಾದರೆ ಈ ಸೌತೆಕಾಯಿ ದೋಸೆಯನ್ನು ಹೇಗೆ ಮಾಡುವುದು ಎಂಬುದನ್ನು ನೋಡುವುದಾದರೆ.
ಸೌತೆಕಾಯಿ ದೋಸೆ ಮಾಡುವ ವಿಧಾನ ಮತ್ತು ಪದಾರ್ಥಗಳು:-
ಒಂದು ಪಾವು ಕೆಜಿ ಅಷ್ಟು ಅಕ್ಕಿಯನ್ನು ಹಿಂದಿನ ದಿನ ರಾತ್ರಿಯೆ ನೆನೆಸಿಟ್ಟು ಮರುದಿನ ಬೆಳಗ್ಗೆ ಆ ಅಕ್ಕಿಯೊಳಗೆ ಒಂದು ಸೌತೆಕಾಯಿಯನ್ನು ಸಣ್ಣಗೆ ಹೆಚ್ಚಿ ಹಾಕಬೇಕು. ನಂತರ ಅದರೊಳಗೆ ಮೂರರಿಂದ ನಾಲ್ಕು ಹಸಿಮೆಣಸಿನಕಾಯಿ ಅರ್ಧ ಇಂಚು ಶುಂಠಿಯನ್ನು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ರುಬ್ಬಿಕೊಳ್ಳಬೇಕು.
ನಂತರ ನೀರನ್ನು ದೋಸೆಗೆ ಯಾವ ರೀತಿ ಕನ್ಸಿಸ್ಟೆನ್ಸಿಯಲ್ಲಿ ಮಾಡಿಕೊಳ್ಳುತ್ತಿವೋ ಆ ರೀತಿಯಲ್ಲಿ ನೀರನ್ನು ಬಳಸಿಕೊಳ್ಳಬೇಕು. ಪ್ಯಾನ್ ಅನ್ನು ಗ್ಯಾಸ್ ನ ಮೇಲಿಟ್ಟು ಸ್ವಲ್ಪ ಎಣ್ಣೆಯನ್ನು ಹಾಕಿ ನೀರ್ ದೋಸೆಗೆ ಯಾವ ರೀತಿಯಲ್ಲಿ ನಾವು ಹಾಕುತ್ತೇವೆಯೋ ಅದೇ ರೀತಿಯಲ್ಲಿ ಈ ದೋಸೆ ಹಿಟ್ಟನ್ನು ಹಾಕಿ ಎರಡರಿಂದ ಮೂರು ನಿಮಿಷ ಬೇಯಿಸಿ ಬೇಕು.
ಒಂದು ವೇಳೆ ನಿಮಗೆ ಕ್ರಿಸ್ಪಿಯಾಗಿ ಬೇಕು ಎಂದಿದ್ದಾರೆ ಇನ್ನು ಸ್ವಲ್ಪ ಹೆಚ್ಚಿನ ಸಮಯದಲ್ಲಿ ಬೇಹಿಸಿಕೊಳ್ಳಬಹುದು. ಆದರೆ ಮಕ್ಕಳಿಗೆ ಸ್ಮೂತ್ ಆಗಿ ಇರುವುದು ಇಷ್ಟವಾಗುತ್ತದೆ . ಇನ್ನು ನಿಮಗೆ ಇಷ್ಟವಾಗಬೇಕು ಎಂದರೆ ಕ್ರಿಸ್ಪಿ ಆಗಿ ಅಥವಾ ಸ್ಪೈಸಿಯಾಗಿ ಬೇಕು ಅಂದರೆ ಅದರೊಳಗೆ ಮತ್ತಷ್ಟು ಹಸಿಮೆಣಸಿನಕಾಯಿಯನ್ನು ಹಾಕಿಕೊಳ್ಳಬಹುದು. ಈಗ ಈ ದೋಸೆಯನ್ನು ಸವಿಯಲು ಸಿದ್ಧವಾಗಿರುತ್ತೆ, ಇದನ್ನು ಚಟ್ನಿಯೊಂದಿಗೆ ಆಗಲಿ ಅಥವಾ ಸಾಂಬಾರ್ ನೊಂದಿಗೆ ಆಗಲಿ ತಿಂದರೆ ಮತ್ತಷ್ಟು ರುಚಿಯನ್ನು ಹೆಚ್ಚಿಸುತ್ತದೆ.
ಈ ರೀತಿಯಾದಂತಹ ದೋಸೆಯನ್ನು ತಿನ್ನುವುದರಿಂದ ದೇಹಕ್ಕೆ ತಂಪು ನೀಡುವುದು ಅಷ್ಟೇ ಅಲ್ಲದೆ ಆರೋಗ್ಯವಾಗಿ ಕೂಡ ಇರುತ್ತೇವೆ. ಈ ದೋಸೆಯು ಅತಿ ಹೆಚ್ಚು ರುಚಿಕರವಾಗಿ ಇರುತ್ತದೆ. ಅಷ್ಟೇ ಅಲ್ಲದೆ ತೆಳ್ಳಗಾಗಬೇಕು ಎನ್ನುವವರಿಗೆ ಹೇಳಿ ಮಾಡಿಸಿದಂತಹ ಒಂದು ರೀತಿಯಾದ ಊಟವಾಗಿದೆ. ಏಕೆಂದರೆ ಸೌತೆಕಾಯಿಯನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿ ಇರುವಂತಹ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೊರ ತೆಗೆದು ಹಾಕುತ್ತದೆ. ಆದ್ದರಿಂದ ತಪ್ಪದೇ ಒಮ್ಮೆಯಾದರೂ ಸಹ ಈ ರೀತಿಯಾದಂತಹ ದೋಸೆಯನ್ನು ಮಾಡಿ ತಿನ್ನಿ, ಈ ದೋಸೆ ಮಾಡುವ ವಿಧಾನವನ್ನು ವಿಡಿಯೋದಲ್ಲಿ ನೋಡಬೇಕೆಂದರೆ ಇಲ್ಲಿ ನೀಲಿ ಅಕ್ಷರಲ್ಲಿ ಪ್ರಕಟಿಸಲಾಗಿದೆ ನೋಡಿ ಸೌತೆಕಾಯಿ ದೋಸೆ ಮಾಡುವ ವಿಧಾನ