Hair Care Tips: ಸ್ನಾನ ಮಾಡಿದ ಬಳಿಕ ನಿಮಗೆ ಈ ಅಭ್ಯಾಸವಿದ್ದರೆ ತಕ್ಷಣ ಅದನ್ನು ಬದಲಾಯಿಸಿಕೊಳ್ಳಿ. ಇಲ್ಲದಿದ್ದರೆ ತಲೆಯಲ್ಲಿ ಕೂದುಲು ಉದುರುವ ಸಮಸ್ಯೆ ಹೆಚ್ಚಾಗಬಹುದು.
Hair Care Tips: How to take care of the wet hairs safely.
Hair Care Tips: ನಮ್ಮ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಎಲ್ಲಾ ಹುಡುಗಿಯರು ಹಾಗೂ ಸ್ತ್ರೀಯರು ಸ್ನಾನದ ನಂತರ ಒಂದು ಟವಲ್ ಅನ್ನು ತೆಗೆದುಕೊಂಡು ತಲೆಗೆ ಸುತ್ತಿಕೊಳ್ಳುತ್ತಾರೆ. ಅದು ಅರ್ಧ ಗಂಟೆಯಾಗಲಿ ಅಥವಾ ಒಂದು ಗಂಟೆಯಾಗಲಿ ಕಟ್ಟಿದ ಟವಲ್ ಅನ್ನು ತೆಗೆಯುವುದೇ ಇಲ್ಲ. ಇದರಿಂದ ತಲೆ ಬೇಗನೆ ಒಣಗುತ್ತದೆ ಆದರೆ ಹಲವಾರು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹಾಗಾದರೆ ಟವಲ್ ಹೀಗೆ ಕಟ್ಟುವುದರಿಂದ ಆಗುವ ಸಮಸ್ಯೆಗಳು ಯಾವುವು ಎಂಬುದನ್ನು ಒಂದೊಂದಾಗಿ ತಿಳಿಯೋಣ ಬನ್ನಿ.
ಟವಲ್ ಅನ್ನು ತಲೆಗೆ ಅರ್ಧ ಗಂಟೆ ಅಥವಾ ಅದಕ್ಕಿಂತ ಹೆಚ್ಚಿನದಾಗಿ ಸುತ್ತಿಕೊಳ್ಳುವುದರಿಂದ ಆಗುವ ಮೊದಲನೆಯ ಸಮಸ್ಯೆ ಎಂದರೆ ಫಂಗಲ್ ಇನ್ಫೆಕ್ಷನ್(Fungal infection) ಆಗುತ್ತದೆ. ಏಕೆಂದರೆ ತಲೆ ಮೊದಲೇ ಒದ್ದೆ ಆಗಿರುತ್ತದೆ ಹಾಗೂ ಟವಲ್ ಅನ್ನು ಒಂದೇ ಸಮನೆ ಕಟ್ಟಿರುವುದರಿಂದ ಫಂಗಲ್ ಇನ್ಫೆಕ್ಷನ್ ಆಗುವ ಎಲ್ಲಾ ಸಾಧ್ಯತೆಗಳು ಇರುತ್ತವೆ.
ಎರಡನೆಯದಾಗಿ ತಲೆ ಹೊಟ್ಟು ಹೆಚ್ಚಾಗುತ್ತದೆ. ಒಂದು ವೇಳೆ ನಿಮ್ಮ ತಲೆಯಲ್ಲಿ ಏನಾದರೂ ಹೊಟ್ಟು ಇದ್ದರೆ ಅದೇ ಸಮಯದಲ್ಲಿ ನೀವು ತಲೆಯನ್ನು ಸ್ನಾನ ಮಾಡಿದ ನಂತರ ಟವಲ್ ನಿಂದ ಕಟ್ಟುವುದರಿಂದ ಒದ್ದೆ ಅಲ್ಲಿಯೇ ಇರುತ್ತದೆ. ಆದ್ದರಿಂದ ತಲೆಯಲ್ಲಿ ಹೊಟ್ಟು(Dandruff ) ಕಾಣಿಸಿಕೊಳ್ಳುವುದು ಹಾಗೂ ಮೊದಲೇ ಹೊಟ್ಟು ಇದ್ದರೆ ಅದರ ಪ್ರಮಾಣ ಹೆಚ್ಚಾಗುವುದು ಆಗುತ್ತದೆ.
ಮೂರನೆಯದಾಗಿ ಕೂದಲು ಉದುರುವಿಕೆ(Hair Fall ). ಇತ್ತೀಚಿನ ಕಾಲದಲ್ಲಂತೂ ಎಲ್ಲಾ ಮಹಿಳೆಯರ ಸಮಸ್ಯೆ ಇದೆ ಆಗಿದೆ. ಯಾವುದೇ ಶಾಂಪ್(Shampoo ) ಅಥವಾ ಯಾವುದೇ ರೀತಿಯ ಎಣ್ಣೆಗಳನ್ನು(Hair oil ) ಬಳಸಿದರೂ ಸಹ ಕೂದಲು ಉದುರುವಿಕೆಯ ಸಮಸ್ಯೆ ಕಡಿಮೆ ಆಗುತ್ತಿಲ್ಲ. ಈ ರೀತಿ ಟವಲ್ ಅನ್ನು ಸುತ್ತು ಇರುವುದರಿಂದ ಕೂದಲು ಉದುರುವಿಕೆ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ.
ನಂತರ ಟವಲ್ ಅನ್ನು ಸುತ್ತಿಕೊಳ್ಳುವುದರಿಂದ ಕೂದಲಿಗೆ ಇರುವಂತಹ ಒಂದು ರೀತಿಯ ಶೈನ್(Hair shine ) ಅನ್ನು ಕಳೆದುಕೊಳ್ಳುತ್ತದೆ. ಅಷ್ಟೇ ಅಲ್ಲದೆ ನೀವು ದೇಹವನ್ನು ಒರೆಸಿದ ಟವಲ್ನಿಂದ ಮತ್ತೆ ಆಟವಲ್ಲನ್ನು ಕೂದಲಿಗೆ ಸುತ್ತುವುದರಿಂದ ಟವರ್ ನಲ್ಲಿ ಇರುವಂತಹ ಕೊಳೆ ಆಗಲಿ ಅಥವಾ ಬ್ಯಾಕ್ಟೀರಿಯಗಳಾಗಲಿ ಕೂದಲಿಗೆ ಹಾನಿಯನ್ನು ಉಂಟುಮಾಡುತ್ತದೆ.
ಕೂದಲನ್ನು ಒಣಗಿಸುವ ವಿಧಾನ
ಹಾಗಾದರೆ ತಲೆಯನ್ನು ಹೇಗೆ ಒಣಗಿಸಿಕೊಳ್ಳಬೇಕು ಎಂದು ನೋಡುವುದಾದರೆ ಅದಕ್ಕೆ ಮುಖ್ಯವಾಗಿ ಸ್ನಾನ ಮಾಡಿದ ನಂತರ ನೀರು ಸುರಿಯುವವರೆಗೂ ಟವಲ್ನಿಂದ ಒರೆಸಿಕೊಂಡು ನಂತರ ಬಿಸಿಲಿನಲ್ಲಿ ಆರಿಸಿಕೊಳ್ಳಬೇಕು. ಒಂದು ವೇಳೆ ಬಿಸಿಲು ಇಲ್ಲದಿದ್ದರೆ ಟವಲ್ ನಲ್ಲಿ ಸ್ವಲ್ಪ ಒರೆಸಿಕೊಂಡು ನಂತರ ಫ್ಯಾನ್ ನ ಕೆಳಗೆ ಕೂದಲನ್ನು ಒಣಗಿಸಿಕೊಳ್ಳಬೇಕು. ಈ ರೀತಿ ಮಾಡುವುದು ಉತ್ತಮವಾದಂತಹ ಉಪಾಯ. ಇಲ್ಲದಿದ್ದರೆ ಇರುವ ಸ್ವಲ್ಪ ಕೂದಲನ್ನು ಸಹ ಕಳೆದುಕೊಳ್ಳಬೇಕಾಗುತ್ತದೆ.