Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Kisan Credit Card Loan : ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ: ಹೈನುಗಾರಿಕೆ, ಕುರಿ, ಮೇಕೆ ಸಾಕಾಣಿಕೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ

ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆ, ಕುರಿ, ಮೇಕೆ ಸಾಕಾಣಿಕೆ ಉದ್ಯಮಗಳಿಗೆ ಉತ್ತರ ಕೇಂದ್ರ ಸರ್ಕಾರವು 'ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ' (ಕೆಸಿಸಿ) ಜಾರಿಗೆ ತಂದಿದೆ.

Kisan Credit Card Loan : ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆ, ಕುರಿ, ಮೇಕೆ ಸಾಕಾಣಿಕೆ ಉದ್ಯಮಗಳಿಗೆ ಉತ್ತರ ಕೇಂದ್ರ ಸರ್ಕಾರವು ‘ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ’ (ಕೆಸಿಸಿ) ಜಾರಿಗೆ ತಂದಿದೆ. ಈ ಯೋಜನೆಯಡಿ ರೈತರು ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯು ರೈತರಿಗೆ ಕೃಷಿ ಚಟುವಟಿಕೆಗಳಿಗೆ ಹಣಕಾಸಿನ ನೆರವು ಒದಗಿಸುವ ಯೋಜನೆಯಾಗಿದೆ. ಈ ಯೋಜನೆಯ ಬಗ್ಗೆ ಮಾಹಿತಿ ಪಡೆಯಿರಿ.

Kisan Credit Card Loan

ಯೋಜನೆಯ ಉದ್ದೇಶ:

*ಪಶುಸಂಗೋಪನೆಯಲ್ಲಿ ತೊಡಗಿರುವ ರೈತರಿಗೆ ಆರ್ಥಿಕ ಸಹಾಯ
*ಉದ್ಯಮದ ಅಭಿವೃದ್ಧಿ ಮತ್ತು ಉತ್ಪಾದಕತೆ
*ರೈತರ ಜೀವನಮಟ್ಟ ಸುಧಾರಣೆ

ಮುಖ್ಯ ಅಂಶಗಳು:

ಸಾಲದ ಮೊತ್ತ: ರೂ. 3 ಲಕ್ಷಗಳವರೆಗೆ ಬಡ್ಡಿ ರಿಯಾಯಿತಿ
ಗರಿಷ್ಠ ಸಾಲ: ರೈತರಿಗೆ ರೂ. 10 ಲಕ್ಷ

ಬಡ್ಡಿ ರಿಯಾಯಿತಿ:

ಶೇ. 2ರಷ್ಟು ಬಡ್ಡಿ ಸಹಾಯಧನ
ಸಕಾಲದ ಮರುಪಾವತಿಗೆ ಶೇ. 3 ಹೆಚ್ಚುವರಿ ಬಡ್ಡಿ ಸಹಾಯಧನ
ಒಟ್ಟು ಶೇ. 5ರಷ್ಟು ಬಡ್ಡಿ ರಿಯಾಯಿತಿ

*ಹೈನುಗಾರಿಕೆ – 18,000 ಪ್ರತಿ ದನಕ್ಕೆ ರೂಪಾಯಿ ಸಾಲ 7% ಬಡ್ಡಿದರ
*ಹೈನುಗಾರಿಕೆ- 21,000 ರೂಪಾಯಿ ಪ್ರತಿ ಎಮ್ಮೆಗೆ ಸಿಗುತ್ತದೆ. 7 % ಬಡ್ಡಿದರ ಇದೆ.
*ಕುರಿ ಸಾಕಾಣಿಕೆ – ಪ್ರತಿ ಕೂರಿಗೆ 10,000 ರೂಪಾಯಿ . 7% ಬಡ್ಡಿದರ ಇದೆ.
*ಮೇಕೆ ಸಾಕಾಣಿಕೆ ಪ್ರತಿ ಮೇಕೆ 8,000 . 7% ಬಡ್ಡಿದರ ಇದೆ.

ಅರ್ಜಿ ಸಲ್ಲಿಸುವುದು ಹೇಗೆ:

ಹತ್ತಿರದ ರಾಷ್ಟ್ರೀಕೃತ ಬ್ಯಾಂಕ್ / ಸಹಕಾರ ಸಂಸ್ಥೆಗೆ ಭೇಟಿ ನೀಡಿ
ಫಾರ್ಮ್ ತುಂಬಿ, ಅಗತ್ಯ ಅರ್ಜಿ ಸಲ್ಲಿಸಿ

ದಾಖಲೆಗಳ ಪಟ್ಟಿ:

1)ಭೂಮಿ ದಾಖಲೆ
2)ಗುರುತಿನ ಪುರಾವೆ
3)ವಿಳಾಸ ಪುರಾವೆ
4)ಜಾತಿ ಮತ್ತು ಆದಾಯ 5)ಪ್ರಮಾಣಪತ್ರ
6)ಪಶುಗಳ ಖರೀದಿ ದಾಖಲೆ (ಇದ್ದರೆ)

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಇತರ ಘಟಕಗಳಿಗೆ ಸಾಲ:
ಹಂದಿ ಸಾಕಾಣಿಕೆ:

*10 ಕೊಬ್ಬಿಸುವ ಹಂದಿಗಳ ಸಾಕಾಣಿಕೆ: ₹60,000 ಸಾಲ ಸೌಲಭ್ಯ
ಕೋಳಿ ಸಾಕಾಣಿಕೆ:

*ಮಾಂಸದ ಕೋಳಿ:

ಕೋಳಿಗೆ ₹80
1000 ಕೋಳಿಗಳಿಗೆ ಗರಿಷ್ಠ ₹ 80,000
*ಮೊಟ್ಟೆ ಕೋಳಿ:
ಕೋಳಿಗೆ ₹180
1000 ಕೋಳಿಗಳಿಗೆ ಗರಿಷ್ಠ ₹1, 80,000

*ಮೊಲ ಸಾಕಾಣಿಕೆ:

50+1 ಮೊಲಗಳಿಗೆ ಗರಿಷ್ಠ ₹50,000 ಸಾಲ

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಅರ್ಹ ರೈತರಿಗೆ ಆರ್ಥಿಕ ನೆರವು ಒದಗಿಸುವ ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-3- 2024 ಆಗಿದೆ.
ಯೋಜನೆಯ ಬಗ್ಗೆ ಇನ್ನಿತರ ಯಾವುದೇ ಸಂಶಯ ಇದ್ದಲ್ಲಿ ಈ ದೂರವಾಣಿ ಸಂಖ್ಯೆ ಗೆ ಸಂಪರ್ಕಿಸಿ – 8277 100 200

Also Read: Raita Siri Yojane: ಈ ಒಂದು ಯೋಜನೆಯ ಮೂಲಕ ರೈತರಿಗೆ ಸಿಗಲಿದೆ ₹10,000! ಸ್ವಂತ ಜಮೀನು ಇದ್ರೆ ಸಾಕು!

Leave a comment