Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Aadhar Link Compulsory : ಮನೆ, ಜಮೀನು ಮತ್ತು ನಿವೇಶನಗಳಿಗೆ ಆಧಾರ್ ಕಾರ್ಡ್ ಏಕೆ ಅವಶ್ಯಕ?

Aadhar Link Compulsory : ಇತ್ತೀಚಿನ ದಿನಗಳಲ್ಲಿ ವಂಚನೆಯ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗಿದೆ. ಜನರನ್ನು ಮೋಸ ಮಾಡಲು ಹೊಂಚು ಹಾಕುವ ವಂಚಕರ ಉಪಟಳ ಹಾಗೂ ವಿವಿಧ ರೀತಿಯ ವಂಚನೆಗಳಿಂದ ಜನಸಾಮಾನ್ಯರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ.

Aadhar Link Compulsory : ಇತ್ತೀಚಿನ ದಿನಗಳಲ್ಲಿ ವಂಚನೆಯ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗಿದೆ. ಜನರನ್ನು ಮೋಸ ಮಾಡಲು ಹೊಂಚು ಹಾಕುವ ವಂಚಕರ ಉಪಟಳ ಹಾಗೂ ವಿವಿಧ ರೀತಿಯ ವಂಚನೆಗಳಿಂದ ಜನಸಾಮಾನ್ಯರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಆಸ್ತಿಗೆ ಸಂಬಂಧಿಸಿದ ವಂಚನೆಗಳು ಈಗ ಹೆಚ್ಚು ಕಾಣಿಸಿಕೊಂಡಿವೆ. ಅದಕ್ಕೆ ಸರ್ಕಾರವು ಆಸ್ತಿ ಖರೀದಿ, ಮಾರಾಟ ಮತ್ತು ನೋಂದಣಿಗೆ ಹಲವಾರು ನಿಯಮಗಳನ್ನು ರೂಪಿಸಲಾಗಿದೆ. ರಾಜ್ಯ ಸರ್ಕಾರವು ಸ್ವಂತ ಜಮೀನು ಆಸ್ತಿಯನ್ನು ಇರುವವರಿಗೆ, ವಿಶೇಷವಾಗಿ ರೈತರಿಗೆ ಆಸ್ತಿಯ ಬಗ್ಗೆ ಮಹತ್ವದ ಆದೇಶ ಹೊರಡಿಸಿದೆ . ಸ್ವಂತ ಆಸ್ತಿಯನ್ನು ಹೊಂದಿರುವವರು ಕಡ್ಡಾಯವಾಗಿ ಆಧಾರ್ ಲಿಂಕ್ ಮಾಡಿಸಬೇಕು.

Aadhar Link Compulsory :

ಆಧಾರ್ ಲಿಂಕ್ ಜೋಡಿಸವುದರಿಂದ ಏನು ಪ್ರಯೋಜನ ?

ಸಣ್ಣ ರೈತರಿಗೆ ಯೋಜನೆಗಳ ಪ್ರಯೋಜನ ಪಡೆಯಲು ಅವಕಾಶ ದೊರೆಯುತ್ತದೆ. ಪ್ರಸ್ತುತ ರಾಜ್ಯದಲ್ಲಿ ಸುಮಾರು 70% ರಷ್ಟು ರೈತರಿದ್ದಾರೆ. ಆದರೆ ಕೇಂದ್ರ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಈ ಸಂಖ್ಯೆ ಕೇವಲ 44% ಮಾತ್ರ. ಲಭ್ಯವಿರುವ ರೈತರು ಅನೇಕ ಕೇಂದ್ರ ಸರ್ಕಾರದ ಯೋಜನೆಗಳ ಪ್ರಯೋಜನಗಳಿಂದ ವಂಚಿತರಾಗುತ್ತಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು ರಾಜ್ಯ ಸರ್ಕಾರವು ರೈತರಿಗೆ ತಮ್ಮ RTC ಜೊತೆಗೆ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.
RTC ಜೊತೆ ಆಧಾರ್ ಲಿಂಕ್ ಮಾಡುವುದರಿಂದ ಯೋಜನೆಗಳ ಅನುಷ್ಠಾನದಲ್ಲಿ ಪಾರದರ್ಶಕತೆ ಹಾಗೂ ವಂಚನೆ ಮತ್ತು ದುರುಪಯೋಗವನ್ನು ತಡೆಗಟ್ಟಬಹುದು. ಹಾಗೂ ರಾಜ್ಯದ ಸಣ್ಣ ರೈತರ ನಿಖರವಾದ ಸಂಖ್ಯೆ ಲಭ್ಯವಾಗುತ್ತದೆ. ಯೋಜನೆಗಳ ಪ್ರಯೋಜನಗಳನ್ನು ಪಡೆಯುವ ರೈತರ ಸಂಖ್ಯೆಯಲ್ಲಿ ಹೆಚ್ಚಳ ಕಾಣಬಹುದು. ಆಧಾರ್ ಕಾರ್ಡ್ ಈಗ ಎಲ್ಲ ಸರಕಾರಿ ಅಥವಾ ಖಾಸಗಿ ಕೆಲಸಗಳಿಗೆ ಬೇಕಾಗಿರುವುದರಿಂದ ಇದು ಬಹಳ ಉಪಯುಕ್ತವಾಗಿದೆ.

Also Read: Solar Panel Subsidy : ಮನೆ ಮೇಲೆ ಸೌರ ಫಲಕ ಅಳವಡಿಸಿ 40% ಸಬ್ಸಿಡಿ ಪಡೆಯಿರಿ!

ಆನ್ಲೈನ್ ಮೂಲಕ Aadhaar ಲಿಂಕ್ ವಿಧಾನ :-

*ರೈತರು ತಮ್ಮ ಜಮೀನಿನ ಪಹಣಿ ಮತ್ತು ಆಧಾರ್ ದಾಖಲಾತಿಗಳನ್ನು ಸಿದ್ಧಪಡಿಸಿಕೊಳ್ಳಬೇಕು.
*ಅಧಿಕೃತ ವೆಬ್ಸೈಟ್ https://landrecords.karnataka.gov.in/service4 ಗೆ ಲಾಗಿನ್ ಮಾಡಬೇಕು.
*ಲಾಗಿನ್ ಮಾಡಿದ ನಂತರ, Aadhaar ಲಿಂಕ್ ಮಾಡುವ ಆಯ್ಕೆಯನ್ನು ಆರಿಸಬೇಕು.
*ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಿ, “ಜಮೀನಿನ ಪಹಣಿ ಮತ್ತು ಆಧಾರ್ ದಾಖಲಾತಿಗಳನ್ನು ಅಪ್ಲೋಡ್ ಮಾಡಬೇಕು.
*ಲಿಂಕ್ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸೂಚನೆಗಳನ್ನು ಅನುಸರಿಸಬೇಕು.

ಆಧಾರ್ ಲಿಂಕ್ ಮಾಡಿಸಲು ಮೇಲೆ ಹೇಳಿರುವ ಮಾರ್ಗವನ್ನು ಅನುಸರಿಸಿ ನಿಮ್ಮ ಸ್ಮಾರ್ಟ್ ಫೋನ್ ಮೂಲಕ ಮಾಡಬಹುದು . ಇಲ್ಲವೇ ನಿಮ್ಮ ಹತ್ತಿರದ ಗ್ರಾಮ್ ಒನ್ ಕೇಂದ್ರ, ಬೆಂಗಳೂರು ಒನ್, ಕೇಂದ್ರಗಳಿಗೆ ಭಟಿ ನೀಡಿ ಆನ್ಲೈನ್ ನಲ್ಲಿ ಅಪ್ಲೈ ಮಾಡಲು ಸಾಧ್ಯವಿದೆ . ಇಲ್ಲವೇ ನಿಮ್ಮ ಹತ್ತಿರದ RTC ಕಚೇರಿಗೆ ಭೇಟಿ ನೀಡುವ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದು. ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ RTC ಕಚೇರಿಗೆ ಭೇಟಿ ನೀಡಿ ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಿ.

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Also Read: Gruhalakshmi Yojane : ಮಹಿಳೆಯರಿಗೆ ಖುಷಿಯ ಸುದ್ದಿ! ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಸಿಗಲಿದೆ 4 ಸಾವಿರ ರೂಪಾಯಿ.

Leave a comment