ಈ ಜಗತ್ತಿನಲ್ಲಿ ತಾಯಿಯೇ ಮೊದಲ ಗುರು ಎಂದು ಹೇಳುತ್ತಾರೆ. ಈ ಮಾತು ನೂರಕ್ಕೆ ನೂರು ಶೇಕಡ ರಷ್ಟು ನಿಜ. ತಾಯಿಯಾದ ಮೇಲೆ ಶಿಕ್ಷಕರು ಎರಡನೆಯ ಸ್ಥಾನವನ್ನು ಪಡೆಯುತ್ತಾರೆ. ಇನ್ನು ಈಗಿನ ಕಾಲದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಬೇಕೆಂದರೆ ಪೋಷಕರ ತುಂಬಾನೇ ಭಯ ಪಡುತ್ತಾರೆ. ಏಕೆಂದರೆ ಎಲ್ಲ ಶಿಕ್ಷಕರು ಒಂದೇ ರೀತಿ ಇರುವುದಿಲ್ಲ ಕೆಲವರು ತುಂಬಾ ಕೋಪಿಷ್ಟರಾಗಿರುತ್ತಾರೆ ಇನ್ನೂ ಕೆಲ ಶಿಕ್ಷಕರು ತುಂಬ ಮೃದುವಾದ ಸ್ವಭಾವವನ್ನು ಹೊಂದಿರುತ್ತಾರೆ.
ಅದರಲ್ಲೂ ಚಿಕ್ಕ ಚಿಕ್ಕ ಮಕ್ಕಳು ಶಾಲೆಗೆ ಹೋಗುತ್ತಿದ್ದರೆ ಅವರಿಗೆ ಪಾಠ ಹೇಳಿಕೊಡುವ ಶಿಕ್ಷಕ ಅಥವಾ ಶಿಕ್ಷಕಿ ಹೇಗಿರುತ್ತಾರೆ ಎನ್ನುವ ಯೋಚನೆ ಪೋಷಕರಲ್ಲಿ ಇರುತ್ತದೆ. ಇನ್ನೂ ಇದರಂತೆಯೇ ಉತ್ತರ ಭಾರತದಲ್ಲಿ ಒಂದು ಘಟನೆ ಜರುಗಿದೆ. ಇನ್ನೂ ಈ ವೀಡಿಯೋ ಎಲ್ಲಾ ಕಡೆ ಸಿಕ್ಕಾಪಟ್ಟೆ ವೈರಲ್ ಆಗಿದೆ ಎಂದು ಹೇಳಬಹುದು.
ಒಬ್ಬ ಪುಟ್ಟ ಬಾಲಕ ಶಾಲೆಯಲ್ಲಿ ಯಾವುದೋ ಒಂದು ವಿಚಾರಕ್ಕೆ ತಪ್ಪು ಮಾಡಿದ್ದಾನೆ. ಇದಕ್ಕಾಗಿ ಆ ಬಾಲಕನ ಶಿಕ್ಷಕಿ ಮುಖ ಊದಿಸಿಕೊಂಡು ಇದ್ದರು. ಇನ್ನು ಆ ಬಾಲಕ ತಾನು ಮಾಡಿದ ಶಿಕ್ಷೆಗೆ ಕ್ಷಮಾಪಣೆಯನ್ನು ಕೂಡ ಕೇಳಿದ್ದಾನೆ. ಇನ್ನು ಶಿಕ್ಷಕಿ ಮತ್ತು ಬಾಲಕನ ನಡುವೆ ಇರುವ ಮಾತುಕತೆಯ ವೀಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದೆ.
ಈ ವೀಡಿಯೋದಲ್ಲಿ ಆ ಬಾಲಕನ ಶಿಕ್ಷಕಿ ಶಿಕ್ಷಕಿಯಾಗಿ ಕಾಣಿಸಲಿಲ್ಲ ಬಳಿಕ ತಾಯಿಯಂತೆ ಕಾಣಿಸಿದರು. ಈ ರೀತಿಯ ಶಿಕ್ಷಕರು ಎಲ್ಲ ಶಾಲೆಯಲ್ಲಿ ಇದ್ದರೆ ಮಕ್ಕಳಿಗೆ ಶಾಲೆಯಲ್ಲಿ ಇರುವ ಸಮಯದಲ್ಲಿ ತಮ್ಮ ಪೋಷಕರು ನೆನಪಾಗುವುದಿಲ್ಲ. ಹಾಗೆಯೇ ಶಿಕ್ಷಕ ಅಥವಾ ಶಿಕ್ಷಕಿ ಎಲ್ಲಾ ಮಕ್ಕಳ ಜೊತೆಗೆ ಈ ರೀತಿಯ ಒಳ್ಳೆಯ ಬಾಂಧವ್ಯವನ್ನು ಇಟ್ಟುಕೊಂಡರೆ ಅವರ ಮಧ್ಯೆ ಪ್ರೀತಿ ಹೆಚ್ಚಾಗುತ್ತದೆ.
ಇದರಿಂದ ಮಕ್ಕಳು ಕೂಡ ಓದಿನ ವಿಷಯದಲ್ಲಿ ತುಂಬಾನೇ ಮುಂದಾಗಿರುತ್ತಾರೆ. ಇದನ್ನು ಬಿಟ್ಟು ಮಕ್ಕಳನ್ನು ಹೊಡೆಯುವುದು ಬೈಯ್ಯುವುದು ಈ ರೀತಿ ಮಾಡಿದರೆ ಶಿಕ್ಷಕರನ್ನು ನೋಡಿದರೆ ಮಕ್ಕಳು ಅವರ ಜೊತೆ ಕೂಡ ಮಾತನಾಡುವುದಿಲ್ಲ. ಇನ್ನು ಈ ವಿಡಿಯೋವನ್ನು ಪ್ರತಿಯೊಬ್ಬರು ಶಿಕ್ಷಕರು ನೋಡಿ ಈ ರೀತಿಯ ಸ್ವಭಾವವನ್ನು ಇಟ್ಟುಕೊಂಡರೆ ತುಂಬಾ ಒಳ್ಳೆಯದು ಎನ್ನುವುದು ನಮ್ಮ ಅನಿಸಿಕೆ…..