ನಮ್ಮ ಸ್ಯಾಂಡಲ್ ವುಡ್ ನಲ್ಲಿ ಇರುವ ಸಾಕಷ್ಟು ನಟನಟಿಯರು ಸೈಮಾ ಅವಾರ್ಡ್ಸ್ ಪ್ರಶಸ್ತಿ ಗಳನ್ನು ತೆಗೆದುಕೊಂಡಿದ್ದಾರೆ ಈ ಸೈಮಾ ಅವಾರ್ಡ್ ಕೊಡುವುದನ್ನು 2011ರಿಂದ ಪ್ರಾರಂಭವಾಗಿದೆ ಹಾಗಾದರೆ ಬನ್ನಿ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಇರುವ ಯಾವ ನಟಿಯರು ಸೈಮಾ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತೆಗೆದುಕೊಂಡಿದ್ದಾರೆ ಎಂದು ನೋಡೋಣ
ಮೋಹಕ ತಾರೆ ರಮ್ಯಾ ಅವರು ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಸಾಕಷ್ಟು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ರಮ್ಯಾ ಅವರು ನಟಿಸಿರುವ ಸಂಜು ವೆಡ್ಸ್ ಗೀತಾ ಮತ್ತು ಸಿದ್ಲಿಂಗು ಚಿತ್ರಗಳಿಗೆ ಬೆಸ್ಟ್ ಆಕ್ಟ್ರೆಸ್ ಆಗಿ ನಾಮಿನೇಟ್ ಆಗಿದ್ದರು. ಇದರಲ್ಲಿ ಇವರಿಗೆ ಸಂಜು ವೆಡ್ಸ್ ಗೀತಾ ಚಿತ್ರಕ್ಕೆ ರಮ್ಯಾ ಅವರಿಗೆ ಬೆಸ್ಟ್ ಆಕ್ಟರ್ ಆಗಿ ಸೈಮಾ ಅವಾರ್ಡ್ ಅನ್ನು 2011 ವರ್ಷದಲ್ಲಿ ಪಡೆದುಕೊಂಡಿದ್ದಾರೆ.
ದಕ್ಷಿಣ ಭಾರತದ ಜನಪ್ರಿಯ ನಟಿ ಪ್ರಿಯಾಮಣಿ ಅವರು ಒಂದು ಚಿತ್ರಕ್ಕೆ ಬೆಸ್ಟ್ ಆಕ್ಟ್ರೆಸ್ ಆಗಿ ನಾಮಿನೇಟ್ ಆಗಿದ್ದರು. ಇನ್ನೂ ಪ್ರಿಯಾಮಣಿ ಅವರಿಗೆ ಅತ್ಯುತ್ತಮ ನಟಿಯಾಗಿ ಚಾರುಲತಾ ಸಿನಿಮಾಗೆ ಸೈಮಾ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಕನ್ನಡದ ಖ್ಯಾತ ನಟಿ ಐಂದ್ರಿತಾ ರೇ ಅವರು ಸೈಮಾ ಅವಾರ್ಡ್ ಗೆ ಒಂದು ಬಾರಿ ಆಯ್ಕೆ ಆಗಿದ್ದರು. ಇನ್ನೂ ಇವರಿಗೆ ಭಜರಂಗಿ ಚಿತ್ರಕ್ಕೆ ಸೈಮಾ ಪ್ರಶಸ್ತಿ ದೊರಕಿದೆ.
ಕನ್ನಡದ ಸಿಂಡ್ರೆಲಾ ಆಗಿರುವ ರಾಧಿಕಾ ಪಂಡಿತ್ ಅವರು ಸೈಮಾ ಅವಾರ್ಡ್ಸ್ ಗೆ 4 ಬಾರಿ ಆಯ್ಕೆಯಾಗಿದ್ದರು. ರಾಧಿಕಾ ಅವರು ನಟಿಸಿದ ಅದ್ದೂರಿ, ದಿಲ್ ವಾಲಾ, ಮಿಸ್ಟರ್ & ಮಿಸಸ್ ರಾಮಾಚಾರಿ ಮತ್ತು ಎಂದೆಂದಿಗೂ ಚಿತ್ರಗಳು ನಾಮಿನೇಟ್ ಆಗಿದ್ದವು. ಇನ್ನೂ ಇದರಲ್ಲಿ ರಾಧಿಕಾ ಪಂಡಿತ್ ಅವರಿಗೆ ಮಿಸ್ಟರ್ & ಮಿಸಸ್ ರಾಮಾಚಾರಿ ಚಿತ್ರಕ್ಕೆ ಸೈಮಾ ಅವಾರ್ಡ್ ದೊರಕಿದೆ.
ಡಿಂಪಲ ಕ್ವೀನ್ ನಟಿ ರಚಿತಾ ರಾಮ್ ಅವರು ಸೈಮಾ ಅವಾರ್ಡ್ಸ್ ಗೆ 4 ಬಾರಿ ಆಯ್ಕೆಯಾಗಿದ್ದರು. ಇನ್ನೂ ರಚಿತಾ ರಾಮ್ ಅವರು ನಟಿಸಿದ ಬುಲ್ ಬುಲ್, ರನ್ನ, ಅಯೋಗ್ಯ, ಆಯುಷ್ಮಾನ್ ಭವ ಚಿತ್ರಗಳು ನಾಮಿನೇಟ್ ಆಗಿದ್ದವು. ಇದರಲ್ಲಿ ರಚಿತಾ ರಾಮ್ ಅವರಿಗೆ ರನ್ನ, ಅಯೋಗ್ಯ, ಆಯುಷ್ಮಾನ್ ಭವ ಚಿತ್ರಗಳಿಗೆ ಸೈಮಾ ಅವಾರ್ಡ್ ಗಳು ಇವೆ.
ಶ್ರದ್ಧಾ ಶ್ರೀನಾಥ್ ಅವರು ಸೈಮಾ ಅವಾರ್ಡ್ಸ್ ಗೆ 2 ಬಾರಿ ಆಯ್ಕೆಯಾಗಿದ್ದರು. ಶ್ರದ್ಧಾ ಶ್ರೀನಿವಾಸ್ ಅವರು ನಟಿಸಿದ ಯೂ ಟರ್ನ್ ಮತ್ತು ಆಪರೇಷನ್ ಅಲಮೇಲಮ್ಮ ಚಿತ್ರಗಳು ನಾಮಿನೇಟ್ ಆಗಿದ್ದವು. ಇದರಲ್ಲಿ ಶ್ರದ್ಧಾ ಶ್ರೀನಾಥ್ ಅವರಿಗೆ ಯೂ ಟರ್ನ್ ಚಿತ್ರಕ್ಕೆ ಸೈಮಾ ಅವಾರ್ಡ್ ದೊರಕಿದೆ.
ಶಾನ್ವಿ ಶ್ರೀವಾತ್ಸವ ಅವರು 2 ಬಾರಿ ಸೈಮಾ ಅವಾರ್ಡ್ ಗೆ ಆಯ್ಕೆಯಾಗಿದ್ದರು. ಶಾನ್ವಿ ಅವರು ನಟಿಸಿದ ತಾರಕ್ ಮತ್ತು ಅವನೇ ಶ್ರೀಮನ್ನಾರಾಯಣ ಚಿತ್ರಗಳು ನಾಮಿನೇಟ್ ಆಗಿದ್ದವು. ಇದರಲ್ಲಿ ಶಾನ್ವಿ ಅವರಿಗೆ ತಾರಕ್ ಚಿತ್ರಕ್ಕೆ ಸೈಮಾ ಅವಾರ್ಡ್ ದೊರಕಿದೆ.
ಲವ್ ಮಾಕ್ಟೇಲ್ ಚಿತ್ರದ ಜನಪ್ರಿಯ ನಟಿ ಮಿಲನಾ ನಾಗರಾಜ್ ಅವರು ನಟಿಸಿದ ಇದೇ ಚಿತ್ರಕ್ಕೆ ಸೈಮಾ ಅವಾರ್ಡ್ ಅನ್ನು ಪಡೆದುಕೊಂಡಿದ್ದಾರೆ…..