ಹೆಣ್ಣು ಮಕ್ಕಳಿಗೆ ಕಿವಿ ಚುಚ್ಚಿಸಿದರೆ ಅವರ ಅಂದ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ. ಇನ್ನೂ ಪ್ರತಿ ಹುಟ್ಟಿದ ಮಗುವಿಗೂ ಕೂಡ 5 ತಿಂಗಳು ಅಥವಾ 6 ತಿಂಗಳಿಗೆ ಕಿವಿಯನ್ನು ಚುಚ್ಚಿಸುತ್ತಾರೆ. ಆದರೆ ಈಗ ಹೆಣ್ಣು ಮಕ್ಕಳು ಮಾತ್ರವಲ್ಲ ಗಂಡು ಮಕ್ಕಳು ಕೂಡ ಬೆಳೆದು ದೊಡ್ಡವರಾದ ಮೇಲೆ ಫ್ಯಾಷನ್ ಗಾಗಿ ಕಿವಿಯನ್ನು ಚುಚ್ಚಿಸಿಕೊಳ್ಳುತ್ತಿದ್ದಾರೆ.
ಇನ್ನೂ ನನ್ನಮ್ಮ ಸೂಪರ್ ಸ್ಟಾರ್ ಮತ್ತು ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮಗಳಿಂದ ಫೇಮಸ್ ಆಗಿರುವ ಮಾಸ್ಟರ್ ಆನಂದ್ ಅವರ ಮಗಳು ವಂಶಿಕಾ ಅಂಜನಿ ಕಶ್ಯಪ ಗೆ ಕೂಡ ಕಿವಿಯನ್ನು ಚುಚ್ಚಿಸಿ ಆ ವೀಡಿಯೋವನ್ನು ಮಾಸ್ಟರ್ ಆನಂದ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿ ನೀವು ವಂಶಿಕಾಗೆ ಕಿವಿ ಚುಚ್ಚಿಸುವ ವೀಡಿಯೋವನ್ನು ನೋಡಬಹುದು.
ಇನ್ನೂ ಯಾವುದೇ ವೀಡಿಯೋ ನೋಡಿದರೂ ಸಹ ವಂಶಿಕಾ ಅಭಿನಯ ಮಾಡಿರುವ ಸ್ಕಿಟ್ ಗಳೇ ತುಂಬಾ ಇವೆ ಎಂದು ಹೇಳಬಹುದು. ಇನ್ನೂ ತಂದೆಯಂತೆ ಮಗಳು ಎನ್ನುವಂತೆ ಮಾಸ್ಟರ್ ಆನಂದ್ ಅವರು ಬಾಲನಟರಾಗಿ ಹೇಗೆ ಸೊಗಸಾಗಿ ಅಭಿನಯಿಸಿದ್ದಾರೆ ಹಾಗೆಯೇ ವಂಶಿಕ ಕೂಡ ತನ್ನ ತಂದೆಯಂತೆ ಆ ಹೆಸರನ್ನು ಉಳಿಸಿಕೊಂಡು ಬರುತ್ತಿದ್ದಾಳೆ.
ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ವಂಶಿಕಾ ಮಾಡಿರುವ ಕೀಟಲೆ ಹುಡುಗಾಟ ತಮಾಷೆ ಆಕ್ಟಿಂಗ್ ಎಲ್ಲವನ್ನು ಕೂಡ ನೀವು ನೋಡಿರುತ್ತೀರಾ. ಇನ್ನು ವಂಶಿಕಾ ಜೊತೆ ತನ್ನ ತಾಯಿ ಯಶಸ್ವಿನಿ ಆನಂದ್ ಅವರು ಕೂಡ ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇನ್ನು ಮಾಸ್ಟರ್ ಆನಂದ್ ಅವರು ತನ್ನ ಮಗಳ ಜೊತೆಗೆ ಇರುವ ಕೆಲ ವಿಡಿಯೋಗಳು ಮತ್ತು ಫೋಟೋಗಳನ್ನು ಆಗಾಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಇನ್ನು ಮಾಸ್ಟರ್ ಆನಂದ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಇವರು ಬಾಲನಟರಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಆಗಲೇ ಒಂದು ಒಳ್ಳೆ ಹೆಸರನ್ನು ಸಾಧಿಸಿಕೊಂಡವರು.
ಇವರು ಜನವರಿ 4 1984 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರು ಗೌರಿಗಣೇಶ ಚಿತ್ರದ ಮೂಲಕ ತಮ್ಮ ಸಿನಿಮಾ ಕೆರಿಯರ್ ಅನ್ನು ಶುರು ಮಾಡಿಕೊಂಡರು. ಇನ್ನು ಇವರು ಸಾಕಷ್ಟು ರಿಯಾಲಿಟಿ ಶೋಗಳನ್ನು ಹೋಸ್ಟ್ ಮಾಡಿದ್ದಾರೆ. ಹೌದು ಡ್ರಾಮಾ ಜೂನಿಯರ್ಸ್, ಕಾಮಿಡಿ ಕಿಲಾಡಿಗಳು ಹೇಗೆ ಇದರ ಸಾಕಷ್ಟು ಸೀಸನ್ ಗಳಲ್ಲಿ ಹೋಸ್ಟ್ ಮಾಡಿದ್ದಾರೆ.
ಇದರ ಜೊತೆಗೆ ಡಾನ್ಸಿಂಗ್ ಸ್ಟಾರ್ ಸೀಸನ್ ಎರಡರಲ್ಲಿ ಕಂಟೆಸ್ಟೆಂಟ್ ಆಗಿ ಭಾಗವಹಿಸಿ ಅದರಲ್ಲಿ ವಿನ್ನರ್ ಆಗಿದ್ದರು ಜೊತೆಗೆ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಕೂಡ ಭಾಗವಹಿಸಿ ಅದರಲ್ಲಿ ಫೈನಲಿಸ್ಟ್ ಆಗಿ ಆಯ್ಕೆಯಾಗಿದ್ದರು. ಇನ್ನೂ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮಾಸ್ಟರ್ ಆನಂದ್ ಅವರು ಯಶಸ್ವಿನಿ ಅವರನ್ನು 2010 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಇನ್ನು ಇವರ ಮಗನ ಹೆಸರು ಕೃಷ್ಣ ಚೈತನ್ಯ…..