ಈ ವರ್ಷ ಆಗಸ್ಟ್ 15 ರಂದು ನಾವೆಲ್ಲರು 75ನೆಯ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತೇವೆ. ಇನ್ನೂ ಕಳೆದ 2 ವರ್ಷಗಳಿಂದ ಕರೋನಾ ಇದ್ದ ಕಾರಣ ನಾವು ಯಾರೂ ಕೂಡ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡುವುದಕ್ಕೆ ಆಗಲಿಲ್ಲ. ಆದರೆ ಈ ಬಾರಿ ಸರ್ಕಾರವು ಇದಕ್ಕೆ ಅನುಮತಿ ನೀಡಿದೆ. ಇದರ ಅಡಿಯಲ್ಲಿ ದೇಶಾದ್ಯಂತ ಎಲ್ಲರು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಾರೆ.
ಇದರ ಜೊತೆಗೆ ವಿಶೇಷವಾಗಿ ಹೇಳಬೇಕು ಅಂದರೆ ಪ್ರತಿ ಮನೆಗಳಲ್ಲೂ ಕೂಡ ರಾಷ್ಟ್ರ ಧ್ವಜವನ್ನು ಹಾರಿಸುವ ಯೋಜನೆ ಕೂಡ ಇದೆ. ಇದರಂತೆಯೇ ಎಲ್ಲಾ ಮನೆಗಳ ಮೇಲೂ ಕೂಡ ನಮ್ಮ ರಾಷ್ಟ್ರ ಧ್ವಜವನ್ನು ನೋಡಿದ್ದೇವೆ. ಇನ್ನು ಇಡೀ ದಿನ ದೇಶದಲ್ಲಿ ರಾಷ್ಟ್ರೀಯ ರಜಾದಿನವನ್ನಾಗಿ ಆಚರಿಸಲಾಗುತ್ತದೆ. ಇನ್ನೂ ತ್ರಿವರ್ಣ ಧ್ವಜವನ್ನು ಹಾರಿಸಿ ಎಲ್ಲಾ ಕಡೆ ಸಿಹಿಯನ್ನು ಕೂಡ ಹಂಚಲಾಗುತ್ತದೆ.
ಇನ್ನೂ ನಮ್ಮ ಸ್ವಾತಂತ್ರ್ಯ ದಿನಾಚರಣೆಯನ್ನು ಮುಖ್ಯವಾಗಿ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯುತ್ತದೆ. ಈ ಕಾರ್ಯಕ್ರಮದಲ್ಲಿ ನಮ್ಮ ಭಾರತದ ಪ್ರಧಾನ ಮಂತ್ರಿಗಳು ರಾಷ್ಟ್ರ ಧ್ವಜವನ್ನು ಹಾರಿಸಿ ಭಾರತದ ರಾಷ್ಟ್ರಗೀತೆ ಆಗಿರುವ ಜನಗಣಮನ ಹಾಡನ್ನು ಹಾಡಿ ರಾಷ್ಟ್ರವನ್ನು ಉದ್ದೇಶಿಸಿ ಅದರ ಬಗ್ಗೆ ಭಾಷಣವನ್ನು ಮಾಡುತ್ತಾರೆ. ಹಾಗೆಯೇ ಮುಖ್ಯವಾಗಿ ಈ ದಿನದಂದು ದೇಶದ ಸ್ವಾತಂತ್ರ್ಯಕ್ಕೆ ಮಡಿದ ನಾಯಕರನ್ನು ಸ್ಮರಣೆ ಮಾಡಲಾಗುತ್ತದೆ.
ಇನ್ನು ಮಧ್ಯರಾತ್ರಿಯು ಗಂಟೆ ಹೊಡೆಯುತ್ತಿದ್ದಂತೆ ಜಗತ್ತು ಮಲಗಿರುವಾಗ ಭಾರತವು ಚಲನಶೀಲ ಮತ್ತು ಸ್ವಾತಂತ್ರ್ಯಕ್ಕೆ ಎಚ್ಚರಗೊಳ್ಳುತ್ತದೆ. ಇನ್ನು ಈ ದಿನ ಶಾಲಾ ಕಾಲೇಜುಗಳಲ್ಲಿ ತಮ್ಮ ಆವರಣದಲ್ಲಿ ಧ್ವಜಾರೋಹಣ ಮತ್ತು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ.
ಇನ್ನೂ ಇದರಂತೆಯೇ ನಮ್ಮ ಸ್ಯಾಂಡಲ್ ವುಡ್ ನ ನಟರು ಸ್ವಾತಂತ್ರ್ಯ ದಿನಾಚರಣೆ ಸಲುವಾಗಿ ವಂದೇಮಾತರಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು ಈ ಹಾಡನ್ನು ತುಂಬಾ ವಿಭಿನ್ನವಾಗಿ ವಿಡಿಯೋ ಶೂಟ್ ಮಾಡಲಾಗಿದೆ. ಇದರಲ್ಲಿ ಶಿವಣ್ಣ, ಸುದೀಪ್, ಗಣೇಶ್, ರವಿಚಂದ್ರನ್, ಶ್ರೀಮುರಳಿ, ಧ್ರುವ ಸರ್ಜಾ, ಜಗ್ಗೇಶ್, ಅರ್ಜುನ್ ಸರ್ಜಾ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಈ ವಂದೇ ಮಾತರಂ ಹಾಡನ್ನು ಕನ್ನಡದ ಜನಪ್ರಿಯ ಗಾಯಕ ವಿಜಯ್ ಪ್ರಕಾಶ್ ಅವರು ಹಾಡಿದ್ದಾರೆ. ಈ ಹಾಡನ್ನು ನೀವು ಸಹ ಇಲ್ಲಿ ನೋಡಬಹುದು…..