ಈಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಮುಖಾಂತರ ಸಾಕಷ್ಟು ಕಲಾವಿದರು ತುಂಬಾನೇ ಜನಪ್ರಿಯತೆಯನ್ನು ಸಾಧಿಸಿಕೊಂಡರು. ಹೌದು ಇದರಲ್ಲಿ ನಟಿಸಿದ್ದ ಕವಿತಾ ಗೌಡ, ಚಂದನ್ ಕುಮಾರ್ ಇನ್ನೂ ಸಾಕಷ್ಟು ಕಲಾವಿದರು ತುಂಬಾನೆ ಫೇಮಸ್ ಆಗಿದ್ದಾರೆ. ಅದರಲ್ಲಿ ನಟ ಚಂದು ಗೌಡ ಅವರು ಕೂಡ ಒಬ್ಬರು ಎಂದು ಹೇಳಬಹುದು.
ಇನ್ನೂ ನಟ ಚಂದು ಗೌಡ ಅವರು ಆಗಸ್ಟ್ 3 1991 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆಯ ಹೆಸರು ಬೈರಪ್ಪ ಇವರು ಬೆಂಗಳೂರಿನಲ್ಲಿ ದೊಡ್ಡ ಬ್ಯುಸಿನೆಸ್ ಮನ್ ಆಗಿದ್ದಾರೆ ಮತ್ತು ತಾಯಿಯ ಹೆಸರು ಶಶಿ. ಇವರಿಗೆ ಸ್ಫೂರ್ತಿ ಎನ್ನುವ ಸ್ವಂತ ಸಹೋದರಿ ಕೂಡ ಇದ್ದಾರೆ. ನಟ ಚಂದು ಗೌಡ ಅವರು ಬೆಂಗಳೂರಿನಲ್ಲಿ ಕಾರ್ಮೆಲ್ ಹೈಸ್ಕೂಲ್ ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿದ್ದಾರೆ.
ಇದಾದ ಮೇಲೆ ಇವರು ಸಪ್ತಗಿರಿ ಕಾಲೇಜಿನಲ್ಲಿ ತಮ್ಮ ಇಂಜಿನಿಯರಿಂಗ್ ಪದವಿಯನ್ನು ಮಾಡಿ ಮುಗಿಸಿದ್ದಾರೆ. ಹಾಗೆಯೇ ಚಂದು ಗೌಡ ಅವರು ತಮ್ಮ ಓದು ಮುಗಿಸಿದ ಮೇಲೆ ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ಇದಾದ ಮೇಲೆ 2015ರ ಲ್ಲಿ ಗೃಹಲಕ್ಷ್ಮಿ ಎನ್ನುವ ಧಾರಾವಾಹಿಯಲ್ಲಿ ಮೊದಲನೆಯದಾಗಿ ನಟಿಸಿದರು. ಇದಾದ ಮೇಲೆ ಇವರು ಲಕ್ಷ್ಮಿ ಧಾರಾವಾಹಿಯಲ್ಲಿ ಅಭಿನಯ ಮಾಡಿದ್ದಾರೆ.
ಇದಾದ ಮೇಲೆ ಇವರು ಬೆಳ್ಳಿತೆರೆಯಲ್ಲೂ ಕೂಡ ಅಭಿನಯ ಮಾಡಿದ್ದಾರೆ. ಹೌದು 2018 ರಲ್ಲಿ ಬಿಡುಗಡೆಯಾದ ಅಟೆಂಪ್ಟ್ ಟು ಮರ್ಡರ್ ಎನ್ನುವ ಚಿತ್ರದಲ್ಲಿ ಮೊದಲನೆಯದಾಗಿ ನಟಿಸಿದ್ದಾರೆ. ತದನಂತರ ಸಂಕಷ್ಟಕರ ಗಣಪತಿ, ಕೃಷ್ಣ ಗಾರ್ಮೆಂಟ್ಸ್, ಕುಷ್ಕಾ, ರಾಬರ್ಟ್, ಫ್ಯಾಮಿಲಿ ಪ್ಯಾಕ್ ಎನ್ನುವ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಇನ್ನು ತೆಲುಗಿನಲ್ಲಿ ಕೂಡ ತ್ರಿನಯನಿ ಎನ್ನುವ ಧಾರಾವಾಹಿಯಲ್ಲಿ ಅಭಿನಯ ಮಾಡಿ ತೆಲುಗು ಕಿರುತೆರೆಯಲ್ಲೂ ಕೂಡ ಒಂದು ಒಳ್ಳೆಯ ಹೆಸರನ್ನು ಸಂಪಾದನೆ ಮಾಡಿಕೊಂಡರು. ಇನ್ನು ನಟ ಚಂದು ಗೌಡ ಅವರು ಅಕ್ಟೋಬರ್ 29 2020 ರಂದು ತಮ್ಮ ಬಾಲ್ಯ ಸ್ನೇಹಿತೆ ಆಗಿರುವ ಶಾಲಿನಿ ನಯನ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇಲ್ಲಿ ನೀವು ನಟ ಚಂದು ಗೌಡ ಅವರ ಮದುವೆಯ ಕೆಲ ಅಪರೂಪದ ಸುಂದರ ಕ್ಷಣಗಳನ್ನು ನೋಡಬಹುದು…..