ನಮ್ಮ ಭಾರತದಲ್ಲಿ ಆಗಸ್ಟ್ 12 ರಂದು ರಕ್ಷಾಬಂಧನ ಜರುಗಿದೆ. ಇನ್ನೂ ಈ ದಿನ ತಮ್ಮನಿಗೆ ಅಕ್ಕ ಅಥವಾ ಅಣ್ಣನಿಗೆ ತಂಗಿ ರಾಖಿಯನ್ನು ಕಟ್ಟಿ ಅವರ ಭಾಂದವ್ಯ ಹೀಗೆ ಗಟ್ಟಿಯಾಗಿರಬೇಕೆಂದು ಮತ್ತು ಅಣ್ಣ ಅಥವಾ ತಮ್ಮನ ಸುರಕ್ಷತೆಯನ್ನು ಕಾಪಾಡುತ್ತಾರೆ.
ಇನ್ನು ಇದರಂತೆಯೇ ನಮ್ಮ ಕನ್ನಡದ ಸ್ಯಾಂಡಲ್ ವುಡ್ ಕ್ವೀನ್ ರಾಧಿಕಾ ಪಂಡಿತ್ ಅವರು ಕೂಡ ತಮ್ಮ ಪ್ರೀತಿಯ ತಮ್ಮ ಆಗಿರುವ ಗೌರವ್ ಪಂಡಿತ್ ಅವರ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡು “ನೀನು ನನ್ನ ಪ್ರೀತಿಯ ತಮ್ಮ ನೀನು ನನ್ನ ಮೇಲಿಟ್ಟಿರುವ ಆರೈಕೆ ಪ್ರೀತಿ ಇನ್ನೂ ಹಾಗೆಯೇ ಇದೆ ಎಂದೆಂದಿಗೂ ನೀನು ನನ್ನ ಪ್ರೀತಿಯ ಸಹೋದರ” ಎಂಬ ಸಂದೇಶವನ್ನು ಬರೆದಿದ್ದಾರೆ.
ಇದರ ಜೊತೆಗೆ ರಾಧಿಕಾ ಪಂಡಿತ್ ಅವರು ತಮ್ಮನ ಜೊತೆಗೆ ಇರುವ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ ಮತ್ತು ತಮ್ಮನಿಗೆ ರಾಖಿ ಹಬ್ಬದ ಶುಭಾಶಯಗಳನ್ನು ಕೂಡ ತಿಳಿಸಿದ್ದಾರೆ. ಇನ್ನು ರಾಧಿಕಾ ಪಂಡಿತ್ ಅವರು ಮಾರ್ಚ್ 7 1984 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆಯ ಹೆಸರು ಕೃಷ್ಣ ಪ್ರಸಾದ್ ಪಂಡಿತ್ ಮತ್ತು ತಾಯಿಯ ಹೆಸರು ಮಂಗಳ ಪಂಡಿತ್.
ರಾಧಿಕಾ ಪಂಡಿತ್ ಅವರು ಮೊದಲು ಕಿರುತೆರೆಯಲ್ಲಿ ನಂದಗೋಕುಲ, ಕಾದಂಬರಿ ಮತ್ತು ಸುಮಂಗಲಿ ಎನ್ನುವ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇದಾದ ಮೇಲೆ ಇವರು 2008 ರಲ್ಲಿ ಬಿಡುಗಡೆಯಾದ ಮೊಗ್ಗಿನ ಮನಸು ಚಿತ್ರದ ಮೂಲಕ ಬೆಳ್ಳಿತೆರೆಯ ಮೇಲೆ ಕಾಲಿಟ್ಟರು.
ತದನಂತರ ಒಲವೇ ಜೀವನ ಲೆಕ್ಕಾಚಾರ, ಲವ್ ಗುರು, ಕೃಷ್ಣನ್ ಲವ್ ಸ್ಟೋರಿ, ಗಾನಬಜಾನ, ಹುಡುಗರು, ಅಲೆಮಾರಿ, ಬ್ರೇಕಿಂಗ್ ನ್ಯೂಸ್, ಅದ್ದೂರಿ, 18 ಕ್ರಾಸ್, ಸಾಗರ್, ಡ್ರಾಮಾ, ಕಡ್ಡಿಪುಡಿ, ದಿಲ್ವಾಲಾ, ಬಹದೂರ್, ಮಿಸ್ಟರ್ & ಮಿಸ್ಸೆಸ್ ರಾಮಾಚಾರಿ, ಎಂದೆಂದಿಗೂ, ಜೂಮ್, ದೊಡ್ಮನೆ ಹುಡುಗ, ಸಂತು ಸ್ಟ್ರೈಟ್ ಫಾರ್ವರ್ಡ್, ಆದಿ ಲಕ್ಷ್ಮೀ ಪುರಾಣ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಇನ್ನು ರಾಧಿಕಾ ಪಂಡಿತ್ ಅವರು ಡಿಸೆಂಬರ್ 9 2016 ರಂದು ರಾಕಿಂಗ್ ಸ್ಟಾರ್ ಯಶ್ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಇಬ್ಬರು ಮುದ್ದಾದ ಮಕ್ಕಳು ಕೂಡ ಇದ್ದಾರೆ…..