ಸ್ಯಾಂಡಲ್ ವುಡ್ ಸ್ಟಾರ್ ರಾಧಿಕಾ ಪಂಡಿತ್ ಮತ್ತು ಯಶ್ ಅವರು ವಿದೇಶ ಪ್ರವಾಸಕ್ಕೆ ಹೋಗಿದ್ದು ಎಲ್ಲರಿಗೂ ಗೊತ್ತೇ ಇದೆ. ಇನ್ನು ರಾಧಿಕಾ ಪಂಡಿತ್ ಮತ್ತು ತಮ್ಮ ಮಕ್ಕಳ ಜೊತೆಗೆ ಕಾಲವನ್ನು ಕಳೆಯುವುದಕ್ಕೆ ತುಂಬಾನೇ ಇಷ್ಟ ಪಡುತ್ತಾರೆ. ಹಾಗೆಯೇ ಯಶ್ ಅವರು ಕೂಡ ತಮ್ಮ ಕುಟುಂಬದೊಂದಿಗೆ ಎಷ್ಟೇ ಬ್ಯುಸಿ ಇದ್ದರೂ ಅಷ್ಟೇ ಸಮಯವನ್ನು ಅವರಿಗೂ ಕೊಡುತ್ತಾರೆ.
ಇನ್ನು ರಾಧಿಕಾ ಪಂಡಿತ್ ಅವರು ಎಲ್ಲೇ ಹೋಗಲಿ ಪ್ರತಿಯೊಂದು ಕ್ಷಣಗಳನ್ನು ಅವರು ಫೋಟೋ ಅಥವಾ ವೀಡಿಯೋ ತೆಗೆದು ಅವುಗಳನ್ನು ಹಾಗೆಯೇ ಮಧುರ ಕ್ಷಣಗಳಾಗಿ ಇಟ್ಟುಕೊಳ್ಳುತ್ತಾರೆ. ಇನ್ನೂ ಇದರಂತೆಯೇ ವಿದೇಶ ಪ್ರವಾಸದಲ್ಲಿದ್ದಾಗ ರಾಧಿಕಾ ಪಂಡಿತ್ ಅವರು ತಮ್ಮ ಪತಿ ಯಶ್ ಅವರಿಗೆ ವೀಡಿಯೋ ಹಾಗೆ ತೆಗೆಯಿರಿ ಎಂದು ಹೇಳಿರುವ ಒಂದು ಚಿಕ್ಕ ವೀಡಿಯೊವನ್ನು ನೀವು ನೋಡಬಹುದು.
ಇನ್ನು ರಾಧಿಕಾ ಪಂಡಿತ್ ಅವರು ಕೂಡ ತಮ್ಮ ಇನ್ ಸ್ಟಾಗ್ರಾಂ ಖಾತೆ ಮತ್ತು ಇತರೆ ಸೋಷಿಯಲ್ ಮೀಡಿಯಾದಲ್ಲಿ ವಿಭಿನ್ನವಾಗಿ ಫೋಟೋಗಳನ್ನು ತೆಗೆಸಿಕೊಂಡು ಅವುಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಳ್ಳುತ್ತಾನೆ ಇರುತ್ತಾರೆ. ಈ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ನೋಡಿದ ಅಭಿಮಾನಿಗಳು ತುಂಬಾ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ.
ಇನ್ನೂ ನಟ ಯಶ್ ಅವರು ಕೆಜಿಎಫ್ ಚಿತ್ರದ ಮುಖಾಂತರ ಎಲ್ಲೆಡೆ ವಿಶ್ವದ್ಯಾದಂತ ಜನಪ್ರಿಯರಾಗಿ ಕನ್ನಡದ ಮೊದಲನೆಯ ಪಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡರು. ಇನ್ನು ಯಶ್ ಅವರು ಎಷ್ಟೇ ಬ್ಯುಸಿ ಇದ್ದರೂ ಕೂಡ ತಮ್ಮ ಪತ್ನಿ ಮತ್ತು ಮಕ್ಕಳಿಗೆ ಒಂದಿಷ್ಟು ಸಮಯವನ್ನು ತೆಗೆದಿಟ್ಟು ಅವರೊಂದಿಗೆ ಎಂಜಾಯ್ ಮಾಡುತ್ತಾರೆ.
ಯಶ್ ಅವರು ಒಂದು ಕಡೆ ತಮ್ಮ ವೃತ್ತಿ ಜೀವನವನ್ನು ಮತ್ತು ತಮ್ಮ ದಾಂಪತ್ಯ ಜೀವನವನ್ನು ಎರಡು ಸಮವಾಗಿ ತೂಗಿಸುತ್ತಿದ್ದಾರೆ. ಇದಕ್ಕಾಗಿಯೇ ಅವರು ಎಲ್ಲರಿಗೂ ತುಂಬಾನೆ ಇಷ್ಟವಾಗುತ್ತಾರೆ. ಹಾಗೆಯೇ ರಾಧಿಕಾ ಪಂಡಿತ್ ಅವರು ಕೂಡ ಅಷ್ಟು ದೊಡ್ಡ ನಟಿಯಾಗಿದ್ದರು ತುಂಬಾ ಹೋಮ್ಲಿ ಕ್ಯಾರೆಕ್ಟರ್ ಅವರದ್ದು ಜೊತೆಗೆ ಇವರಿಗೆ ಯಾವುದೇ ರೀತಿಯ ಅಹಂ ಕೂಡ ಇಲ್ಲ.
ತಮ್ಮ ಮನೆ ಮತ್ತು ಮಕ್ಕಳ ಜವಾಬ್ದಾರಿಯನ್ನು ಕೂಡ ತುಂಬಾ ಚೆನ್ನಾಗಿ ತೆಗೆದುಕೊಳ್ಳುತ್ತಾರೆ. ಈ ರೀತಿಯ ಸ್ಟಾರ್ ಗಳು ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಸಿಕ್ಕಿರುವುದು ನಮಗೆಲ್ಲರಿಗೂ ಹೆಮ್ಮೆ ಎಂದು ಹೇಳಬಹುದು…..