ಲವಲವಿಕೆ ಸೀರಿಯಲ್ ನಟಿ ಲಕ್ಷ್ಮೀ ಶೆಟ್ಟಿ ಅವರು ತಾಯಿ ಆಗುತ್ತಿರುವ ವಿಚಾರದ ಬಗ್ಗೆ ಈಗಾಗಲೇ ತಮ್ಮ ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದಾರೆ. ಇದರ ಜೊತೆಗೆ ತಮ್ಮ ಬೇಬಿ ಬಂಪ್ ಮತ್ತು ತಮ್ಮ ಪತಿಯ ಜೊತೆಗೆ ಫೋಟೋ ಮತ್ತು ವಿಡಿಯೋಗಳನ್ನು ತೆಗೆಸಿಕೊಂಡಿದ್ದಾರೆ. ಈ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ತುಂಬಾ ವಿಭಿನ್ನವಾಗಿ ಮಾಡಿಸಿರುವುದು ನೀವೆಲ್ಲರೂ ನೋಡೇ ಇರುತ್ತೀರಾ.
ಇನ್ನೂ ತಮ್ಮ ಬೇಬಿ ಬಂಪ್ ಫೋಟೋಗಳನ್ನು ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು ಇದನ್ನು ನೋಡಿದ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ ಮತ್ತು ಫೋಟೋಗಳಿಗೆ ಮೆಚ್ಚುಗೆಯನ್ನು ಕೂಡ ವ್ಯಕ್ತಪಡಿಸಿದ್ದರು…..
ಈಗಾಗಲೇ ಜೀ ಕನ್ನಡ ವಾಹಿನಿಯಲ್ಲಿ ಸಾಕಷ್ಟು ಒಳ್ಳೆ ಒಳ್ಳೆಯ ಧಾರಾವಾಹಿಗಳು ಮೂಡಿ ಬಂದಿವೆ. ಇದರ ಜೊತೆಗೆ ನಾವು ಸಾಕಷ್ಟು ಜನಪ್ರಿಯ ಧಾರಾವಾಹಿಗಳನ್ನು ಸಹ ಈ ಹಿಂದೆ ನೋಡಿದ್ದೇವೆ. ಅದರಲ್ಲಿ ಲವ್ ಲವಿಕೆ ಎನ್ನುವ ಧಾರಾವಾಹಿ ಕೂಡ ಒಂದಾಗಿದೆ. ಹೌದು ಇದು ಒಂದು ಅದ್ಭುತವಾದ ಧಾರಾವಾಹಿ ಎಂದೇ ಹೇಳಬಹುದು. ಏಕೆಂದರೆ ಈ ಸೀರಿಯಲ್ ಒಂದು ವಿಭಿನ್ನವಾದ ಕಥೆಯನ್ನು ಹೊಂದಿದೆ.
ಈ ಧಾರಾವಾಹಿಯು ಜೂನ್ 2015 ರಲ್ಲಿ ಪ್ರಸಾರವಾಗಿತ್ತು. ಈ ಧಾರಾವಾಹಿಯಲ್ಲಿ ಚರಿತ್ ಬಾಳಪ್ಪ, ವಿನು ಬಳಂಜ, ಅನುಪಮಾ ಭಟ್, ಅಶ್ವಿನಿ ಗೌಡ, ಲಕ್ಷ್ಮೀ ಶೆಟ್ಟಿ ಇನ್ನೂ ಸಾಕಷ್ಟು ಕಲಾವಿದರು ಅಭಿನಯ ಮಾಡಿದ್ದಾರೆ. ಈ ಸೀರಿಯಲ್ ನಲ್ಲಿ ಮುಖ್ಯವಾಗಿ ಚರಿತ್ ಬಾಳಪ್ಪ ಮತ್ತು ಅನುಪಮಾ ಭಟ್ ಅವರು ನಾಯಕ ನಾಯಕಿ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇನ್ನೂ ಲಕ್ಷ್ಮೀ ಶೆಟ್ಟಿ ಅವರು ಕೇವಲ ನಟಿ ಮಾತ್ರ ಅಲ್ಲ ಇವರು ಮೇಕಪ್ ಆರ್ಟಿಸ್ಟ್ ಕೂಡ ಹೌದು. ಇವರೆಗೆ ತಮ್ಮದೇ ಆದ ಗ್ಲಾಮಡಸ್ಟ್ ಮೇಕ್ ಓವರ್ ಸ್ಟುಡಿಯೋ ಎನ್ನುವ ಸ್ವಂತ ಬಿಸಿನೆಸ್ ಕೂಡ ಇದೆ. ಇವರು ಈ ಬಿಸಿನೆಸ್ ಅನ್ನು ಬೆಂಗಳೂರಿನಲ್ಲಿ ಮಾಡುತ್ತಿದ್ದು ಸಾಕಷ್ಟು ಕಲಾವಿದರಿಗೆ ಇವರೇ ಮೇಕಪ್ ಅನ್ನು ಮಾಡುತ್ತಾರೆ. ತಾವು ಮೇಕಪ್ ಮಾಡಿರುವ ಕೆಲ ಫೋಟೋಗಳನ್ನು ಸಹ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಲಕ್ಷ್ಮಿ ಶೆಟ್ಟಿ ಅವರು ಬಸಂತ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ…..