ಕನ್ನಡದ ಖ್ಯಾತ ನಟಿ ಮಯೂರಿ ಕ್ಯಾತರಿ ಅವರಿಗೆ ತಮ್ಮ ಮಗನ ಜನನದಿಂದ ಸಾಕಷ್ಟು ಸಮಯವನ್ನು ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಇನ್ನೂ ಮಯೂರಿ ಅವರು ತಮ್ಮ ಮಗನನ್ನು ಒಂದು ಕ್ಷಣ ಕೂಡ ಬಿಟ್ಟಿರುವುದಿಲ್ಲ. ಇನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದರೆ ಮಯೂರಿ ಅವರು ತಮ್ಮ ಮಗನ ಜೊತೆಗೆ ತುಂಬಾ ವಿಭಿನ್ನವಾಗಿ ಫೋಟೋ ಶೂಟ್ ಮಾಡಿಸಿ ಆ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಾ ಇರುತ್ತಾರೆ.
ಇದರಂತೆಯೇ ಮಯೂರಿ ಅವರು ತಮ್ಮ ಮಗನಿಗೆ ಪ್ರೀತಿಯ ಅಪ್ಪುಗೆಯನ್ನು ನೀಡಿ ಆ ವೀಡಿಯೋ ಗೆ ಹೆತ್ತವಳು ಬರೆದ ಕಥೆಯಲ್ಲಿ ಕಂದನ ಪ್ರೀತಿಯೇ ಮೊದಲಲ್ಲಿ ಎನ್ನುವ ಕ್ಯಾಪ್ಷನ್ ಸಹ ಹಾಕಿಕೊಂಡಿದ್ದಾರೆ. ಇನ್ನೂ ಮಯೂರಿ ಕ್ಯಾತರಿ ಅವರು ಮಾರ್ಚ್ 5 1995 ರಂದು ಹುಬ್ಬಳ್ಳಿಯಲ್ಲಿ ಜನಿಸಿದರು. ಇವರ ತಂದೆಯ ಹೆಸರು ಪ್ರಕಾಶ್ ಕ್ಯಾತರಿ ಮತ್ತು ತಾಯಿಯ ಹೆಸರು ಗೀತಾ ಕ್ಯಾತರಿ.
ಇನ್ನೂ ನಿಮಗೆ ಎಲ್ಲರಿಗೂ ಗೊತ್ತಿರುವ ಹಾಗೆ ನಟಿ ಮಯೂರಿ ಕ್ಯಾತರಿ ಅವರು ಅಶ್ವಿನಿ ನಕ್ಷತ್ರ ಎನ್ನುವ ಜನಪ್ರಿಯ ಧಾರಾವಾಹಿಯಲ್ಲಿ ಅಶ್ವಿನಿ ಎನ್ನುವ ಪಾತ್ರದಲ್ಲಿ ನಟಿಸಿ ತುಂಬಾ ಜನಪ್ರಿಯರಾದರು. ಇನ್ನೂ ಈ ಸೀರಿಯಲ್ ಮುಖಾಂತರ ಇವರಿಗೆ ಸಿನಿಮಾಗಳಲ್ಲಿ ನಟಿಸುವುದಕ್ಕೆ ಅವಕಾಶ ದೊರಕಿತು.
ಹೌದು ಮಯೂರಿ ಅವರು ನಟ ಅಜಯ್ ರಾವ್ ಅವರ ಅಭಿನಯದ ಕೃಷ್ಣಲೀಲಾ ಎನ್ನುವ ಚಿತ್ರದ ಮೂಲಕ ನಟಿಸಿ ಬೆಳ್ಳಿತೆರೆಯ ಮೇಲೆ ಕಾಲಿಟ್ಟರು. ತದನಂತರ ಇಷ್ಟಕಾಮ್ಯ, ನಟರಾಜ ಸರ್ವೀಸ್, ಕರಿಯ 2, ರಾಂಬೋ 2, ಜಾನಿ ಜಾನಿ ಎಸ್ ಪಪ್ಪಾ, 8 ಎಂಎಂ ಬುಲೆಟ್, ರುಸ್ತುಮ್, ನನ್ನ ಪ್ರಕಾರ, ಆಟಕ್ಕುಂಟು ಲೆಕ್ಕಕ್ಕಿಲ್ಲ, ಮೌನಂ, ಪೊಗರು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.
ಹಾಗೆಯೇ ಮಯೂರಿ ಕ್ಯಾತರಿ ಅವರು ಅರುಣ್ ಎನ್ನುವವರನ್ನು ಜೂನ್ 12 2020 ರಂದು ಬೆಂಗಳೂರಿನ ಶ್ರೀತಿರುಮಲ ಗಿರಿ ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಇನ್ನೂ ಆಗಲೇ ಹೇಳಿದಂತೆ ಮಯೂರಿ ಅವರು ತಮ್ಮ ಮಗನಿಗೆ ಮಾರ್ಚ್ 15 2021 ರಂದು ಜನ್ಮವನ್ನು ನೀಡಿದರು. ಇನ್ನೂ ತಮ್ಮ ಮಗನಿಗೆ ಆರವ್ ಎನ್ನುವ ಹೆಸರನ್ನು ಇಟ್ಟಿದ್ದಾರೆ…..