ಕನ್ನಡದ ಖ್ಯಾತ ನಟಿ ಬಿ ಸರೋಜಾದೇವಿ ಅವರು ಜನವರಿ 7 1938 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರು ಕನ್ನಡದ ಜತೆಗೆ ತಮಿಳು ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ತಂದೆಯ ಹೆಸರು ಬೈರಪ್ಪ ಮತ್ತು ತಾಯಿಯ ಹೆಸರು ರುದ್ರಮ್ಮ.
ಸರೋಜಾದೇವಿ ಅವರು 1955 ರಲ್ಲಿ ಕನ್ನಡದಲ್ಲಿ ಮಹಾಕವಿ ಕಾಳಿದಾಸ ಎನ್ನುವ ಚಿತ್ರದ ಮೂಲಕ ತಮ್ಮ ಸಿನಿಮಾ ಕೆರಿಯರ್ ಅನ್ನು ಶುರು ಮಾಡಿಕೊಂಡರು. ಇದಾದ ಮೇಲೆ ಇವರು ಕಚ್ಚಾ ದೇವಯಾನಿ, ಅಣ್ಣ ತಂಗಿ, ಸ್ಕೂಲ್ ಮಾಸ್ಟರ್, ಕಿತ್ತೂರು ಚನ್ನಮ್ಮ, ವಿಜಯ ನಗರದ ವೀರಪುತ್ರ, ಶನಿಪ್ರಭಾವ, ಭಾಗ್ಯಜ್ಯೋತಿ, ಕಥಾ ಸಂಗಮ, ರುದ್ರಾಂಗ, ಯಾರಿವನು, ಅನುರಾಗ ಸಂಗಮ, ಪ್ರಾರಂಭ, ನಟಸಾರ್ವಭೌಮ ಹೀಗೆ ಸಾಕಷ್ಟು ಹಿಟ್ ಚಿತ್ರಗಳಲ್ಲಿ ನಟಿಸಿ ಆಗಿನ ಕಾಲದಲ್ಲಿ ಬಹು ಬೇಡಿಕೆಯ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಇನ್ನು ಇವರು ಎಲ್ಲಾ ಭಾಷೆಗಳಲ್ಲಿ ಸೇರಿ ಸುಮಾರು 200 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಎಂದು ಹೇಳಬಹುದು. ಇನ್ನೂ ಸರೋಜದೇವಿ ಅವರು ಮಾರ್ಚ್ 1 1967 ರಲ್ಲಿ ಶ್ರೀಹರ್ಷ ಎಂಬುವವರನ್ನು ವಿವಾಹ ಮಾಡಿಕೊಂಡಿದ್ದರು. ಇನ್ನೂ ಸರೋಜ ದೇವಿ ಅವರ ಪತಿ ಶ್ರೀಹರ್ಷ ಅವರು ಭಾರತ್ ಎಲೆಕ್ಟ್ರಾನಿಕ್ಸ್ ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡಿದ್ದರು. ಆದರೆ ಇವರು ಅನಾರೋಗ್ಯ ಸಮಸ್ಯೆಗಳಿಂದ 1986 ರಲ್ಲಿ ಮರಣ ಹೊಂದಿದರು.
ಇವರಿಗೆ ಭುವನೇಶ್ವರಿ, ಇಂದಿರಾ, ಗೌತಮ್ ಮತ್ತು ರಾಮಚಂದ್ರನ್ ಎನ್ನುವ 4 ಜನ ಮಕ್ಕಳಿದ್ದಾರೆ. ಇನ್ನು ಇದರಲ್ಲಿ ಇಂದು ಸಮರ್ಥ್ ಅವರ ಮಗಳು ಸಮೈರಾ ತಮ್ಮ ಹುಟ್ಟುಹಬ್ಬವನ್ನು ತುಂಬಾ ಅದ್ಧೂರಿಯಾಗಿ ಆಚರಣೆ ಮಾಡಿಕೊಂಡಿದ್ದಾರೆ.
ಹೌದು ಬಿ ಸರೋಜಾದೇವಿ ಅವರ ಮೊಮ್ಮಗಳಾದ ಸಮೈರಾ ಅವರ ಹುಟ್ಟು ಹಬ್ಬಕ್ಕೆ ಸಾಕಷ್ಟು ಸಿನಿಮಾ ಕಲಾವಿದರು ಆಗಮನ ಮಾಡಿದ್ದರು. ಹೌದು ಅಮೂಲ್ಯ, ಪ್ರಿಯಾಂಕಾ ಉಪೇಂದ್ರ, ಗಣೇಶ್, ಶಿಲ್ಪಾ ಗಣೇಶ್, ಹರ್ಷಿಕಾ ಪುಣಚ ಇನ್ನೂ ಸಾಕಷ್ಟು ಕಲಾವಿದರು ಬಂಧು ಮಿತ್ರರು ಸ್ನೇಹಿತರು ಆಗಮನ ಮಾಡಿದ್ದರು. ಬಿ ಸರೋಜಾದೇವಿ ಅವರ ಮೊಮ್ಮಗಳ ಹುಟ್ಟು ಹಬ್ಬದ ಕೆಲ ಸುಂದರ ಫೋಟೋಗಳನ್ನು ಇಲ್ಲಿ ನೀವು ನೋಡಬಹುದು…..