ದಕ್ಷಿಣ ಭಾರತದ ಕೆಲ ಸ್ಟಾರ್ ನಟ ನಟಿಯರು ಕೇವಲ ನಟನೆ ಮಾತ್ರವಲ್ಲದೆ ಅವರಿಗೆ ಕೆಲ ಸೈಡ್ ಬಿಸಿನೆಸ್ ಗಳು ಸಹ ಇವೆ. ಅಂತಹ ನಟ ನಟಿಯರು ಯಾರು ಇಲ್ಲಿ ತಿಳಿದುಕೊಳ್ಳೋಣ ಬನ್ನಿ..
ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಅವರ ಪುತ್ರ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರು ನಟನೆಯ ಜೊತೆಗೆ ಸಿನಿಮಾ ನಿರ್ಮಾಣಗಳನ್ನು ಮಾಡುತ್ತಾರೆ. ಹಾಗೆಯೇ ಅವರಿಗೆ ಸ್ವಂತ ಟ್ರೂ ಜೆಟ್ ಎನ್ನುವ ಏರ್ ಲೈನ್ಸ್ ಸಂಸ್ಥೆ ಕೂಡ ಇದೆ ಮತ್ತು ಅಪೋಲೋ ಮತ್ತು ರೈಡಿಂಗ್ ಕ್ಲಬ್ ನ ಮಾಲೀಕರು ಸಹ ಹೌದು.
ತೆಲುಗಿನ ಅಕ್ಕಿನೇನಿ ನಾಗಾರ್ಜುನ ಅವರು ನಟನೆಯಲ್ಲೂ ಸೈ ಮತ್ತು ಶ್ರೀಮಂತಿಕೆಯಲ್ಲಿ ಕೂಡ ಸೈ ಎನಿಸಿಕೊಂಡಿದ್ದಾರೆ. ಇವರು ಟಾಲಿವುಡ್ ನ ದೊಡ್ಡ ಸ್ಟುಡಿಯೋ ಆಗಿರುವ ಅನ್ನಪೂರ್ಣ ಸ್ಟುಡಿಯೋಸ್ ಗೆ ಮಾಲೀಕರು ಮತ್ತು ಇವರಿಗೆ ಸಾಕಷ್ಟು ರೆಸ್ಟೊರೆಂಟ್ ಗಳು ಮತ್ತು ಬಾರ್ ಗಳು ಸಹ ಇವೆ.
ತೆಲುಗಿನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರಿಗೆ ಸಾಕಷ್ಟು ರೆಸ್ಟೋರೆಂಟ್ ಗಳು, ನೈಟ್ ಕ್ಲಬ್ ಮತ್ತು ಚೈನೀಸ್ ಹೋಟಲುಗಳು ಇವೆ. ಇದರ ಜೊತೆಗೆ ಇವರು ಸಾಕಷ್ಟು ಫ್ಯಾಷನ್ ಬ್ರ್ಯಾಂಡ್ ಗಳ ಮೇಲೆ ಬಂಡವಾಳವನ್ನು ಸಹಿ ಹಾಕಿದ್ದಾರೆ. ಇನ್ನೂ ಇದಲ್ಲದೆ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಇರುವ ಆಹಾ ಎನ್ನುವುದರಲ್ಲೂ ಕೂಡ ತಮ್ಮ ತಂದೆಯ ಜೊತೆಗೆ ಪಾಲುದಾರರಾಗಿದ್ದಾರೆ.
ಬಾಲಿವುಡ್ ಮತ್ತು ಟಾಲಿವುಡ್ ನ ಸ್ಟಾರ್ ನಟಿ ಆಗಿರುವ ತಾಪ್ಸಿ ಪನ್ನು ಅವರು ವೆಡ್ಡಿಂಗ್ ಫ್ಯಾಕ್ಟರಿ ಎನ್ನುವ ಇವೆಂಟ್ ಮ್ಯಾನೇಜ್ ಮೆಂಟ್ ಅನ್ನು ನಡೆಸುತ್ತಿದ್ದಾರೆ. ಇದರ ಜೊತೆಗೆ ಇವರಿಗೆ ಸಾಕಷ್ಟು ಫ್ಲ್ಯಾಟ್ ಗಳು ಸಹ ಇವೆ.
ದಕ್ಷಿಣ ಭಾರತದ ಖ್ಯಾತ ನಟಿ ತಮನ್ನಾ ಭಾಟಿಯಾ ಅವರು ನಟನೆಯ ಜೊತೆಗೆ ವೈಟ್ & ಗೋಲ್ಡ್ ಎನ್ನುವ ಆನ್ ಲೈನ್ ಗೋಲ್ಡ್ ಮಾರಾಟವನ್ನು ಮಾಡುತ್ತಾರೆ. ಇವರ ತಂದೆ ಕೂಡ ಗೋಲ್ಡ್ ನಲ್ಲಿ ವೃತ್ತಿ ಮಾಡುತ್ತಿರುವುದರಿಂದ ತಮನ್ನಾ ಅವರು ಕೂಡ ತಮ್ಮ ಸೈಡ್ ಬಿಸಿನೆಸ್ ಆಗಿ ಈ ವೃತ್ತಿಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.
ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ಅವರು ರಿಯಲ್ ಎಸ್ಟೇಟ್ ಮಾಡುತ್ತಾರೆ ಮತ್ತು ತಮ್ಮದೇ ಆದ ಪ್ರೊಡಕ್ಷನ್ ಕಂಪನಿ ಕೂಡ ಇದೆ. ಇದರ ಜೊತೆಗೆ ಚೆನ್ನೈನಲ್ಲಿ ಸಾಕಷ್ಟು ಅಪಾರ್ಟ್ ಮೆಂಟ್ ಗಳು ಮತ್ತು ಮದುವೆ ಛತ್ರಗಳು ಇವರ ಕುಟುಂಬದವರ ಹೆಸರಿನಲ್ಲಿವೆ…..