ಮೊನ್ನೆಯಷ್ಟೇ ಗಣೇಶ ಹಬ್ಬವನ್ನು ಎಲ್ಲರೂ ತುಂಬಾ ವಿಜೃಂಭಣೆಯಿಂದ ಮಾಡಿದ್ದೇವೆ. ಎಲ್ಲಾ ಹಬ್ಬಗಳನ್ನು ಹೋಲಿಸಿದರೆ ಗಣೇಶ ಹಬ್ಬವನ್ನು ಎಲ್ಲರೂ ತುಂಬಾ ಇಷ್ಟ ಪಟ್ಟು ವಿಜೃಂಭಣೆಯಿಂದ ಮಾಡುತ್ತಾರೆ. ಹೌದು ಏಕೆಂದರೆ ಎಲ್ಲಾ ಹಬ್ಬಗಳು ಕೇವಲ ಒಂದೇ ದಿನಕ್ಕೆ ಮುಗಿದು ಹೋದರೆ ಗಣೇಶ ಹಬ್ಬ ಮಾತ್ರ ಹಾಗಿಲ್ಲ.
ಮನೆಮನೆಗಳಲ್ಲೂ ಗೌರಿ ಗಣೇಶನನ್ನು ಕೂರಿಸಿ ಏರಿಯಾದಲ್ಲೂ ಕೂಡ ಬೃಹತ್ ಆಗಿರುವ ಗಣೇಶನನ್ನು ಸಾಕಷ್ಟು ದಿನಗಳ ಕಾಲ ಕೂರಿಸಿ ಹಬ್ಬದ ಸಂಭ್ರಮವನ್ನು ಮಾಡುತ್ತಾರೆ. ಇನ್ನು ಪ್ರತಿದಿನ ದೇವಸ್ಥಾನಕ್ಕೆ ಅಪಾರವಾದ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ಗಣೇಶನಿಗೆ ಪೂಜೆಯನ್ನು ಸಲ್ಲಿಸಿ ಪ್ರಸಾದವನ್ನು ತೆಗೆದುಕೊಂಡು ಹೋಗುತ್ತಾರೆ.
ಇದರ ಜೊತೆಗೆ ದೇವಸ್ಥಾನಗಳಲ್ಲಿ ಗಣೇಶನನ್ನು ಕೂರಿಸಿ ಪೂಜೆ ಮಾಡುವುದರ ಜೊತೆಗೆ ಸಾಕಷ್ಟು ವಿಧವಾದ ಮನರಂಜನೆಯ ಚಟುವಟಿಕೆಗಳನ್ನು ಕೂಡ ಮಾಡುತ್ತಾರೆ. ಹಾಗಾಗಿ ಗಣೇಶ ಹಬ್ಬವನ್ನು ಎಲ್ಲರೂ ತುಂಬಾ ಇಷ್ಟಪಡುತ್ತಾರೆ. ಇನ್ನೂ ಇದರಂತೆಯೇ ಸ್ಯಾಂಡಲ್ ವುಡ್ ನಲ್ಲಿ ಇರುವ ಎಲ್ಲ ಕಲಾವಿದರು ತಮ್ಮ ಮನೆಗಳಲ್ಲಿ ಗೌರಿ ಗಣೇಶನನ್ನು ಕೂರಿಸಿ ಹಬ್ಬದ ಸಂಭ್ರಮವನ್ನು ಮಾಡಿದ್ದಾರೆ.
ಹಾಗೆಯೇ ಕನ್ನಡದ ಸ್ಯಾಂಡಲ್ ವುಡ್ ಕ್ವೀನ್ ರಾಧಿಕಾ ಪಂಡಿತ್ ಅವರು ಕೂಡ ತಮ್ಮ ಮನೆಯಲ್ಲಿ ಗೌರಿ ಗಣೇಶನನ್ನು ಕೂರಿಸಿ ಅದರ ವ್ರತವನ್ನು ಮಾಡಿ ತಮ್ಮ ಇಬ್ಬರು ಮಕ್ಕಳ ಜೊತೆಗೆ ಹಬ್ಬದ ಸಂಭ್ರಮದಲ್ಲಿ ತೊಡಗಿಸಿಕೊಂಡಿದ್ದರು. ಅದರ ಕೆಲ ವೀಡಿಯೊ ತುಣುಕುಗಳನ್ನು ಇಲ್ಲಿ ನೀವು ನೋಡಬಹುದು.
ಇದನ್ನು ನೋಡಿದ ಸಾಕಷ್ಟು ಅಭಿಮಾನಿಗಳು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ ಮತ್ತು ನಟಿ ಮಾಲಾಶ್ರೀ ಅವರು ಕೂಡ ತಮ್ಮ ಅಭಿಮಾನಿಗಳಿಗೆ ಹಬ್ಬದ ಶುಭಾಶಯಗಳನ್ನು ಹೇಳಿದ್ದಾರೆ. ಇನ್ನೂ ಗಣೇಶನಿಗೆ ಕಡುಬು ಮೋದಕ ಇನ್ನೂ ಮುಂತಾದ ಸಿಹಿ ತಿನಿಸುಗಳು ಎಂದರೆ ತುಂಬಾ ಇಷ್ಟವಾಗುತ್ತದೆ.
ಹಾಗೆಯೇ ಗಣೇಶನ ಹಬ್ಬದ ದಿನದಂದು ಗಣೇಶನ ಜನನ ಆಗಿರುವುದರಿಂದ ಇದನ್ನು ವಿನಾಯಕ ಚತುರ್ಥಿ ಗಣೇಶ ಚತುರ್ಥಿ ಅಥವಾ ಚೌತಿ ಎಂದು ಸಹ ಕರೆಯುತ್ತಾರೆ. ಇನ್ನೂ ಮುಖ್ಯವಾಗಿ ಇದೇ ದಿನದಂದು ತನ್ನ ತಂದೆ ಶಿವನು ಗಣೇಶನಿಗೆ ಗಜನ ಮುಖವನ್ನು ತಂದು ಇಟ್ಟಿರುವ ದಿನ ಇದಾಗಿದೆ. ಹಾಗಾಗಿ ಇದರ ಕಾರಣದಿಂದ ಗಣೇಶನನ್ನು ಗಜಾನನ ಎಂದು ಸಹ ಕರೆಯುತ್ತಾರೆ……