ಜೀ ಕನ್ನಡ ಚಾನೆಲ್ ನಲ್ಲಿ ಈಗಾಗಲೇ ಒಳ್ಳೆ ಒಳ್ಳೆಯ ಧಾರಾವಾಹಿಗಳು ಮೂಡಿ ಬರುತ್ತಿವೆ. ಅದರಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯು ಕೂಡ ಒಂದಾಗಿದೆ. ಇನ್ನೂ ಪುಟ್ಟಕ್ಕನ ಮಕ್ಕಳು ಧಾರಾವಾಹಿಯು ಡಿಸೆಂಬರ್ 13 2021 ರಿಂದ ಪ್ರಸಾರವಾಗುತ್ತಿದೆ. ಈಗ ಇದು ಇಲ್ಲಿಯವರೆಗೂ 135 ಎಪಿಸೋಡ್ ಗಳನ್ನು ಪೂರೈಸಿಕೊಂಡಿದೆ.
ಇದರಲ್ಲಿ ಕನ್ನಡ ಇಂಡಸ್ಟ್ರಿಯ ಜನಪ್ರಿಯ ನಟಿ ಮತ್ತು ರಾಜಕೀಯ ವ್ಯಕ್ತಿ ಆಗಿರುವ ನಟಿ ಉಮಾಶ್ರೀ ಅವರು ಮುಖ್ಯವಾದ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನೂ ಈ ಸೀರಿಯಲ್ ನಲ್ಲಿ ಇವರಿಗೆ 3 ಜನ ಹೆಣ್ಣು ಮಕ್ಕಳು ಇರುತ್ತಾರೆ. ಇದರಲ್ಲಿ ಉಮಾಶ್ರೀ ಅವರು ತಾಯಿಯ ಪಾತ್ರವನ್ನು ಮಾಡುತ್ತಿದ್ದರೆ ಇವರಿಗೆ ಮಕ್ಕಳಾಗಿ ಅಕ್ಷರ, ಅಮಿತಾ ಕುಲಾಲ್ ಮತ್ತು ಶಿಲ್ಪಾ ಸರಾಸರಿ ಅವರು ಅಭಿನಯಿಸುತ್ತಿದ್ದಾರೆ.
ಹಾಗೆಯೇ ಇವರ ಜೊತೆಗೆ ಮಂಜು ಭಾಷಿಣಿ, ರಮೇಶ್ ಪಂಡಿತ್, ಧನುಶ್, ಹಂಸಾ ಪ್ರತಾಪ್ ಇನ್ನೂ ಸಾಕಷ್ಟು ಕಲಾವಿದರು ಅಭಿನಯ ಮಾಡುತ್ತಿದ್ದಾರೆ. ಇನ್ನೂ ಉಮಾಶ್ರೀ ಅವರು ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಶೂಟಿಂಗ್ ವೇಳೆಯಲ್ಲಿ ಸೆಟ್ ನಲ್ಲಿ ತಮ್ಮ ಕೈಯ್ಯಾರೆ ರಾಗಿ ಮುದ್ದೆಯನ್ನು ಮಾಡಿ ಅದನ್ನು ಎಲ್ಲರಿಗೂ ಸಹ ಬಡಿಸಿದ್ದಾರೆ. ಇದನ್ನು ನೋಡಿದರೆ ಉಮಾಶ್ರೀ ಅವರು ಎಷ್ಟು ಸಿಂಪಲ್ ಎಂದು ಗೊತ್ತಾಗುತ್ತದೆ.
ಕನ್ನಡ ಇಂಡಸ್ಟ್ರಿಯಲ್ಲಿ ಮೇರು ನಟಿಯರಲ್ಲಿ ಉಮಾಶ್ರೀ ಅವರು ಕೂಡ ಒಬ್ಬರು ಎಂದು ಹೇಳಬಹುದು. ಇನ್ನು ಇವರು ಕಿರುತೆರೆಗೆ ಬಂದು ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಟಿಸುತ್ತಿರುವುದು ಸಾಕಷ್ಟು ಅಭಿಮಾನಿಗಳಿಗೆ ಖುಷಿಯಾಗಿದೆ. ಇನ್ನೂ ಉಮಾಶ್ರೀ ಅವರು ನೊಣವಿನಕೆರೆಯಲ್ಲಿ ಜನಿಸಿದ್ದಾರೆ. ಇವರು 1984 ರಲ್ಲಿ ಬಿಡುಗಡೆಯಾದ ಅನುಭವ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು.
ನಟಿ ಉಮಾಶ್ರೀ ಅವರು ಈ ಚಿತ್ರದಲ್ಲಿ ನಟ ಮತ್ತು ನಿರ್ದೇಶಕರಾಗಿದ್ದ ಕಾಶಿನಾಥ್ ಅವರ ಜೊತೆಗೆ ಅಭಿನಯ ಮಾಡಿದ್ದಾರೆ. ಇದಾದ ಮೇಲೆ ಇವರು ಸಾಕಷ್ಟು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಇವರು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನಲ್ಲಿ ಕೂಡ ಕಾರ್ಯವಹಿಸಿದ್ದರು. ಇವರಿಗೆ ವಿಜಯಕುಮಾರ್ ಮತ್ತು ಗಾಯತ್ರಿ ಎನ್ನುವ ಇಬ್ಬರು ಮಕ್ಕಳಿದ್ದಾರೆ…..