ಎಲ್ಲಾ ಅಭಿಮಾನಿಗಳು ಮತ್ತು ಸರ್ಜಾ ಅವರ ಕುಟುಂಬಸ್ಥರು ರಾಯನ್ ರಾಜ್ ಸರ್ಜಾ ಮುಖವನ್ನು ನೋಡಿ ನಟ ಚಿರು ಸರ್ಜಾ ಅವರನ್ನು ನೆನಪು ಮಾಡಿಕೊಳ್ಳುತ್ತಾರೆ. ಏಕೆಂದರೆ ಚಿರು ಸರ್ಜಾ ಅವರಂತೆಯೇ ತಮ್ಮ ಮಗ ಕೂಡ ಇದ್ದಾನೆ. ಇನ್ನೂ ತಮ್ಮ ಚಿಕ್ಕಮ್ಮನ ಸೀಮಂತ ಕಾರ್ಯಕ್ರಮಕ್ಕೆ ಬಂದ ರಾಯನ್ ನಗುವನ್ನು ನೋಡಿದರೆ ಎಂತಹವರು ಕೂಡ ಕಳೆದು ಹೋಗುತ್ತಾರೆ.
ಇನ್ನೂ ದಿವಂಗತ ನಟ ಚಿರು ಸರ್ಜಾ ಅವರು ಮರಣ ಹೊಂದಿದ ಮೇಲೆ ಅವರ ಮನೆಯಲ್ಲಿ ಯಾವುದೇ ಕಾರ್ಯಕ್ರಮ ಫಂಕ್ಷನ್ ಏನೇ ಸಂತೋಷದ ವಿಚಾರ ಇದ್ದರೂ ಕೂಡ ಅದರಲ್ಲಿ ಚಿರು ಸರ್ಜಾ ಅವರನ್ನು ನೆನೆದು ಭಾವುಕರಾಗಿ ಇರುತ್ತಾರೆ. ಆದರೆ ಆ ನೋವನ್ನು ಅವರು ಕೊನೆಯವರೆಗೂ ಮರೆಯುವುದಕ್ಕೆ ಆಗುವುದಿಲ್ಲ. ಆದರೂ ಅದನ್ನು ಒಪ್ಪಿಕೊಂಡು ಮುಂದುವರೆಯಲೇ ಬೇಕಾಗುತ್ತದೆ.
ಇನ್ನು ಚಿರು ಸರ್ಜಾ ಅವರು ಮರಣ ಹೊಂದಿದ ಮೇಲೆ ತಮ್ಮ ಮನೆಯಲ್ಲಿ ಮತ್ತೆ ಖುಷಿಯನ್ನು ತಂದಿದ್ದು ಚಿರು ಸರ್ಜಾ ಮತ್ತು ಮೇಘನಾ ರಾಜ್ ಅವರ ಮಗ ರಾಯನ್ ರಾಜ್ ಸರ್ಜಾ. ಇನ್ನೂ ಇದಾದ ಮೇಲೆ 2 ವರ್ಷಗಳ ನಂತರ ಮತ್ತೆ ಸರ್ಜಾ ಅವರ ಕುಟುಂಬಕ್ಕೆ ಒಂದು ಚಿಕ್ಕ ಕಂದಮ್ಮನ ಆಗಮನ ಆಗಲಿದೆ.
ಹೌದು ಇದರ ಬಗ್ಗೆ ಈಗಾಗಲೇ ಎಲ್ಲ ಸೋಷಿಯಲ್ ಮೀಡಿಯಾಗಳಲ್ಲೂ ಹರಿದಾಡಿದೆ. ಧ್ರುವ ಸರ್ಜಾ ಅವರು ತಂದೆಯಾಗುತ್ತಿರುವುದು ಸರ್ಜಾ ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ತುಂಬಾನೇ ಖುಷಿಯನ್ನು ತಂದಿದೆ. ಇನ್ನು ಧ್ರುವ ಸರ್ಜಾ ಅವರ ಅಭಿಮಾನಿಗಳಂತೂ ಧ್ರುವ ಅವರು ತಂದೆಯಾಗುತ್ತಿರುವ ವಿಷಯವನ್ನು ಕೇಳಿ ತುಂಬಾನೇ ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಧ್ರುವ ಸರ್ಜಾ ಅವರು ಪ್ರೇರಣಾ ಅವರನ್ನು ವಿವಾಹ ಮಾಡಿಕೊಂಡಿದ್ದು ತಮ್ಮ ಪತ್ನಿಯ ಸೀಮಂತ ಕಾರ್ಯಕ್ರಮವನ್ನು ತುಂಬಾ ಅದ್ಧೂರಿಯಾಗಿ ಮಾಡಿದ್ದಾರೆ. ಪ್ರೇರಣಾ ಅವರ ಸೀಮಂತ ಕಾರ್ಯಕ್ರಮಕ್ಕೆ ಸಾಕಷ್ಟು ಬಂಧು ಮಿತ್ರರು ಕಲಾವಿದರು ಸ್ನೇಹಿತರು ಎಲ್ಲರೂ ಕೂಡ ಆಗಮನ ಮಾಡಿ ಪ್ರೇರಣಾ ಅವರಿಗೆ ಆಶೀರ್ವಾದವನ್ನು ಮಾಡಿದ್ದಾರೆ.
ಹಾಗೆಯೇ ಮೇಘನಾ ರಾಜ್ ಮತ್ತು ಅವರ ಕುಟುಂಬದವರು ಸಹ ಸೀಮಂತ ಕಾರ್ಯಕ್ರಮಕ್ಕೆ ಬಂದು ಪ್ರೇರಣಾ ಅವರಿಗೆ ಆಶೀರ್ವಾದವನ್ನು ಮಾಡಿದ್ದಾರೆ……