ಸ್ಯಾಂಡಲ್ ವುಡ್ ನಲ್ಲಿ ಕೆಲ ನಟಿಯರು ತಮ್ಮ ಬಾಲ್ಯ ವಯಸ್ಸಿನಲ್ಲಿಯೇ ನಟನೆಯನ್ನು ಪ್ರಾರಂಭಿಸಿ ಈಗ ಸ್ಟಾರ್ ನಟಿಯರಾಗಿ ಗುರುತಿಸಿಕೊಂಡಿದ್ದಾರೆ. ಅಂತಹ ನಟಿಯರು ಯಾರು ಎಂದು ನೋಡೋಣ ಬನ್ನಿ..
ಅನು ಪ್ರಭಾಕರ್ ಅವರು ನವೆಂಬರ್ 9 1980 ರಂದು ಬೆಂಗಳೂರಿನಲ್ಲಿ ಜನಿಸಿದರು. ಅನು ಪ್ರಭಾಕರ್ ಅವರು 1990 ರಲ್ಲಿ ಚಪಲಚನ್ನಿಗರಾಯ ಚಿತ್ರದ ಮೂಲಕ ಬಾಲನಟಿಯಾಗಿ ಅಭಿನಯಿಸಿದರು. ಇದಾದ ಮೇಲೆ ಹೃದಯ ಹೃದಯ ಎನ್ನುವ ಕನ್ನಡ ಚಿತ್ರದ ಮೂಲಕ ಹೀರೋಯಿನ್ ಆಗಿ ಕಾಣಿಸಿದರು.
ನಿತ್ಯಾ ಮೆನನ್ ಅವರು ಏಪ್ರಿಲ್ 8 1988 ರಂದು ಜನಿಸಿದ್ದಾರೆ ಇವರು 1998 ರಲ್ಲಿ ಹಾಲಿವುಡ್ ನಲ್ಲಿ ದಿ ಮಂಕಿ ಹೂ ನ್ಯೂ ಟೂ ಮಚ್ ಎನ್ನುವ ಚಿತ್ರದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದಾರೆ. ಇದಾದ ಮೇಲೆ ಕನ್ನಡದಲ್ಲಿ 7 ಓ ಕ್ಲಾಕ್ ಚಿತ್ರದ ಮೂಲಕ ಹೀರೋಯಿನ್ ಆಗಿ ತೆರೆಮೇಲೆ ಕಾಣಿಸಿದರು.
ಅಮೂಲ್ಯ ಅವರು ಸೆಪ್ಟೆಂಬರ್ 14 1993 ರಂದು ಜನಿಸಿದ್ದಾರೆ. ಇವರು 2002 ರಲ್ಲಿ ಕರ್ವ ಚಿತ್ರದ ಮೂಲಕ ಬಾಲನಟಿಯಾಗಿ ಅಭಿನಯಿಸಿದರು. ಇದಾದ ಮೇಲೆ ಚೆಲುವಿನ ಚಿತ್ತಾರ ಚಿತ್ರದ ಮೂಲಕ ಹೀರೋಯಿನ್ ಆಗಿ ತೆರೆಮೇಲೆ ಕಾಣಿಸಿದರು.
ಮೀನಾ ಅವರು ಸೆಪ್ಟೆಂಬರ್ 16 1976 ರಂದು ಜನಿಸಿದ್ದಾರೆ. ಇವರು 1988 ರಲ್ಲಿ ತಮಿಳಿನಲ್ಲಿ ನೆಂಜನಗಲ್ ಎನ್ನುವ ಚಿತ್ರದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದಾರೆ. ತದನಂತರ ತೆಲುಗಿನಲ್ಲಿ ನವಯುಗಂ ಚಿತ್ರದ ಮೂಲಕ ಹೀರೋಯಿನ್ ಆಗಿ ತೆರೆಯ ಮೇಲೆ ಕಾಣಿಸಿದರು.
ಮಾಲಾಶ್ರೀ ಅವರು ಆಗಸ್ಟ್ 10 1973 ರಂದು ಜನಿಸಿದ್ದಾರೆ ಇವರು 1979 ರಲ್ಲಿ ತಮಿಳಿನಲ್ಲಿ ಇಮಾಯಂ ಎನ್ನುವ ಚಿತ್ರದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದಾರೆ. ತದನಂತರ ಕನ್ನಡದಲ್ಲಿ ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಹೀರೋಯಿನ್ ಆಗಿ ಕಾಣಿಸಿದರು.
ಶ್ರೀದೇವಿ ವಿಜಯಕುಮಾರ್ ಅವರು ಅಕ್ಟೋಬರ್ 29 1986 ರಂದು ಜನಿಸಿದ್ದಾರೆ. ಇವರು 1992 ರಲ್ಲಿ ತಮಿಳಿನಲ್ಲಿ ರಿಕ್ಷಾ ಮಾಮಾ ಎನ್ನುವ ಚಿತ್ರದಲ್ಲಿ ಬಾಲ ನಟಿಯಾಗಿ ಅಭಿನಯಿಸಿ ನಂತರ ತೆಲುಗಿನಲ್ಲಿ ಈಶ್ವರ್ ಚಿತ್ರದ ಮೂಲಕ ಹೀರೋಯಿನ್ ಆಗಿ ಕಾಣಿಸಿದರು.
ಸುಧಾರಾಣಿ ಅವರು ಆಗಸ್ಟ್ 14 ರಂದು ಜನಿಸಿದ್ದಾರೆ. ಇವರು 1978 ರಂದು ಕಿಲಾಡಿ ಕಿಟ್ಟು ಎನ್ನುವ ಕನ್ನಡ ಚಿತ್ರದಲ್ಲಿ ಬಾಲನಟಿಯಾಗಿ ನಟಿಸಿ ತದನಂತರ ಆನಂದ್ ಚಿತ್ರದ ಮೂಲಕ ಹೀರೋಯಿನ್ ಆಗಿ ಕಾಣಿಸಿದರು…..